ಕೆಕೆಆರ್ ಡಿಬಿ ಅನುದಾನ ತಾರತಮ್ಯ ಸರಿಯಲ್ಲ
ಬೀದರ:ಸೆ.೨:ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ( ಕೆಕೆಆರ್ ಡಿಬಿ) ಅನುದಾನ ಹಂಚಿಕೆಯಲ್ಲಿ ದಕ್ಷಿಣ ಕ್ಷೇತ್ರಕ್ಕೆ ಬಹಳ ತಾರತಮ್ಯವಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಇದನ್ನು ಕೂಡಲೇ ಸರಿಪಡಿಸುವ ಅಗತ್ಯವಿದೆ ಎಂದು ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಮನ್ನಾಎಖ್ಖೆಳ್ಳಿ ಕ್ರಾಸ್ ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ದಕ್ಷಿಣ ಮಂಡಲ ಕಾರ್ಯಕಾರಿಣಿ ಸಭೆ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೆಕೆಆರ್ ಡಿಬಿಯಿಂದ ಬೀದರ್ ಜಿಲ್ಲೆಯಲ್ಲೇ ದಕ್ಷಿಣ ಕ್ಷೇತ್ರಕ್ಕೆ ಅತೀ ಕಮ್ಮಿ ಅನುದಾನ
ಬರುತ್ತಿದೆ. ಹೀಗಾಗಿ ಕೇವಲ ಹಳ್ಳಿಗಳಿಂದ ಕೂಡಿದ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಳೆದ ವರ್ಷ ಕೆಕೆಆರ್ ಡಿಬಿಯಿಂದ ದಕ್ಷಿಣ ಕ್ಷೇತ್ರಕ್ಕೆ ೨೪ ಕೋಟಿ ರೂಪಾಯಿ ಅನುದಾನ ಬಂದಿತ್ತು. ಪ್ರಸಕ್ತ ವರ್ಷ ೨೮ ಕೋಟಿ ರೂ. ಬಂದಿದೆ. ಆದರೆ ಪಕ್ಕದ ಹುಮನಾಬಾದ್, ಬಸವಕಲ್ಯಾಣ, ಭಾಲ್ಕಿ ಕ್ಷೇತ್ರಗಳಿಗೆ ೬೦ ಕೋಟಿಗಿಂತ ಅಧಿಕ ಅನುದಾನ ಬಂದಿದೆ. ನಮಗೇಕೆ ಅನ್ಯಾಯ ಎಂದು ಪ್ರಶ್ನಿಸಿದರು.
ನಂಜುAಡಪ್ಪ ಸಮಿತಿ ವರದಿ ಪ್ರಕಾರ ಹಿಂದುಳಿದ, ಅತೀ ಹಿಂದುಳಿದ ಕ್ಷೇತ್ರಗಳಿಗೆ ಕೆಕೆಆರ್ ಡಿಬಿ ಯಿಂದ ಅನುದಾನ ಹಂಚಿಕೆ ನಡೆದಿದೆ. ಮುಂಚೆ ಬೀದರ್ ದಕ್ಷಿಣ ಕ್ಷೇತ್ರ ಇರಲಿಲ್ಲ. ೨೦೦೮ರಲ್ಲಿ ದಕ್ಷಿಣ ಕ್ಷೇತ್ರ ಉದಯವಾಗಿದೆ. ಇದಕ್ಕಿಂತ ಮುಂಚೆ ನಂಜುAಡಪ್ಪ ವರದಿ ನೀಡಿದೆ. ಬೀದರ್ ನಗರ ಒಳಗೊಂಡ ಹಿಂದಿನ ಮಾನದಂಡ ಈಗ ಅನುಸರಿಸಿ ಅನುದಾನ ಹಂಚಿಕೆ ಮಾಡುತ್ತಿದ್ದರಿಂದ ನಮ್ಮ ಕ್ಷೇತ್ರಕ್ಕೆ ಕಮ್ಮಿ ಅನುದಾನ ಬಂದು ಅಭಿವೃದ್ಧಿಗೆ ಹಿನ್ನಡೆ ಆಗುತ್ತಿದೆ. ಈ ಮಾನದಂಡ ಬದಲಿಸಿ ತಾರತಮ್ಯ ನಿವಾರಣೆ ಮಾಡಬೇಕಿದೆ. ಈಗಾಗಲೇ ಈ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿದೆ ಎಂದರು.
ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ತಳಮಟ್ಟದಿಂದ ಮಜಬೂತ್ ಮಾಡಲು ನಿರಂತರ ಪ್ರಯತ್ನ ನಡೆದಿವೆ. ಕಳೆದ ಸಲ ಸದಸ್ಯತ್ವ ಅಭಿಯಾನದ ವೇಳೆ ೫೦ ಸಾವಿರ ಸದಸ್ಯತ್ವ ಮಾಡಲಾಗಿತ್ತು. ಈ ಬಾರಿ ೭೫ ಸಾವಿರ ಸದಸ್ಯತ್ವದ ಗುರಿಯಿದೆ. ಕ್ಷೇತ್ರದಲ್ಲಿ ೨೨೯ ಬೂತ್ ಇವೆ. ಅತೀ ಹೆಚ್ಚು ಸದಸ್ಯತ್ವ ಮಾಡಿದ ಬೂತ್ ಪ್ರಮುಖರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪ್ರವಾಸದ ವ್ಯವಸ್ಥೆ ಮಾಡುವುದಾಗಿ ಬೆಲ್ದಾಳೆ ಅವರು ಕಾರ್ಯಕರ್ತರಿಗೆ ಹುರಿದುಂಬಿಸಿದರು.
ಮAಡಲ ಪ್ರಭಾರಿ ಸೂರ್ಯಕಾಂತ ಚಿಲ್ಲಾಬಟ್ಟೆ, ಉಸ್ತುವಾರಿ ಪೀರಪ್ಪ ಔರಾದೆ ಮಾತನಾಡಿ, ದೇಶದ ಹಿತ, ಸಶಕ್ತ ಭಾರತ ನಿರ್ಮಾಣ ಹಾಗೂ ಭಾರತ ಮತ್ತೆ ವಿಶ್ವ ಗುರು ಆಗಿ ವಿಶ್ವಕ್ಕೆ ಬೆಳಕು ತೋರಿಸುವ ಶಕ್ತಿ ಸಾಮರ್ಥ್ಯ ಭಾರತಕ್ಕೆ ಮಾತ್ರ ಇದೆ . ಎಲ್ಲರೂ ಮೋದಿ ಅವರ ೨೦೪೭ ವಿಕಸಿತ ಭಾರತ, ವಿಶ್ವ ಗುರು ಭಾರತ ಕನಸು ನನಸಾಗಿಸಲು ಸಂಕಲ್ಪ ಮಾಡಿ ದುಡಿಯಬೇಕಿದೆ. ಕಾಂಗ್ರೆಸ್ ಇಂದು ದೇಶದಲ್ಲಿ, ರಾಜ್ಯದಲ್ಲಿ ಜಾತಿ ಜಗಳ ಹೆಚ್ಚುವ, ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ.
ದೇಶ ವಿರೋಧಿ ಹೇಳಿಕೆ ಕೊಡುವ ಕೆಲಸ ಕಾಂಗ್ರೆಸ್ ನವರು ಮಾಡುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಸಮಾಜಘಾತುಕ ಶಕ್ತಿಗಳ ಪರವಾಗಿ ಕಾಂಗ್ರೆಸ್ ನಿಲ್ಲುತ್ತಿರುವುದು ಆತಂಕಕಾರಿ ಬೆಳವಣಿಗೆ. ಕಾಂಗ್ರೆಸ್ ಸಮಾಜಕ್ಕೆ ದೊಡ್ಡ ಗಂಡಾAತರವಾಗಿದೆ. ಹೀಗಾಗಿ ದೇಶ ಮಜಬೂತ್ ಆಗಬೇಕಾದರೆ ಕಾಂಗ್ರೆಸ್ ಮುಕ್ತ ಸಮಾಜ ನಿರ್ಮಾಣ ಅಗತ್ಯವಾಗಿದೆ ಎಂದರು.
ಮಾಜಿ ಜಿಪಂ ಸದಸ್ಯರಾದ
ಶಕುಂತಲಾ ಬೆಲ್ದಾಳೆ, ಸದಾನಂದ ಜೋಶಿ, ರಾಜರೆಡ್ಡಿ ಶಾಬಾದ, ಚಂದ್ರಯ್ಯ ಸ್ವಾಮಿ, ಸಂಜೀವಕುಮಾರ ಕೊಳಿ, ಪೀರಪ್ಪ ಔರಾದೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಹೋಮಾ ತುಕ್ಕಾರೆಡ್ಡಿ, ಶಿವಕುಮಾರ ಸ್ವಾಮಿ, ಶಿವಕುಮಾರ ಪಾಟೀಲ, ಮಾಣಿಕಪ್ಪ ಖಾಶೆಂಪೂರ, ಪ್ರಭು ಮೆಂಗಾ, ಹಣಮಂತರಾವ ಪಾಟೀಲ, ಜಗನಾಥ ಜಮಾದಾರ, ಶ್ರೀನಿವಾಸ ಪತ್ತಾರ, ಗುರುನಾಥ ಅದೆ, ಅರುಣ ಬಾವಗಿ, ಸಂತೋಷರೆಡ್ಡಿ, ಜನಾರ್ಧನರೆಡ್ಡಿ, ಜಗನಾಥ ಪಾಟೀಲ, ಬುದ್ಧಯ್ಯ ಆಚಾರ್ಯ, ಸಂತೋಷ ನೀಡವಂಚಾ, ಬಾಬುರಾವ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು
ಬಿಜೆಪಿ ಕೇವಲ ಪಕ್ಷವಲ್ಲ, ಇದೊಂದು ಹೋರಾಟ, ಚಳವಳಿಯಾಗಿದೆ.
ರಾಷ್ಟ್ರೀಯತೆ, ರಾಷ್ಟ್ರವಾದ, ಸಶಕ್ತ ಭಾರತ ಕಟ್ಟುವ ಚಳವಳಿಯಾಗಿದೆ. ೨೦೪೭ರಲ್ಲಿ ವಿಕಸಿತ ಭಾರತ, ವಿಶ್ವಗುರು ಭಾರತ ನಿರ್ಮಾಣವೇ ಪಕ್ಷದ ಏಕೈಕ ಗುರಿಯಾಗಿದೆ. ೨೦ ಕೋಟಿ ಸದಸ್ಯರ ಮೂಲಕ ವಿಶ್ವದಲ್ಲೇ ಅತೀ ದೊಡ್ಡ ಪಕ್ಷ ನಮ್ಮದು. ಇದಕ್ಕೆಲ್ಲ ಕಾರ್ಯಕರ್ತರ ಅವಿರತ ಶ್ರಮವೇ ಕಾರಣ. ಇಂಥ ದೊಡ್ಡ ಬಳಗದಲ್ಲಿ ನಾವು ಇರುವುದು ನಮ್ಮ ಸೌಭಾಗ್ಯವಾಗಿದೆ.
-ಡಾ.ಶೈಲೇಂದ್ರ ಬೆಲ್ದಾಳೆ
ಶಾಸಕ.