ಸಾಂಸ್ಕೃತಿಕ ಪರಂಪರೆ ವಾರಸುದಾರಿಕೆ ಆಗಲಿ : ಪ್ರೊ. ಸತೀಶ ನಡವಿನಮನಿ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೨:ಮನೆತನದ, ಸಮಾಜದ, ರಾಜ್ಯದ ಮತ್ತು ರಾಷ್ಟçದ ಒಳ್ಳೆಯ ಸಂಪ್ರದಾಯಗಳು, ನಡೆನುಡಿಗಳು, ಕಲೆಗಳನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ ಸಾಂಸ್ಕೃತಿಕ ಪರಂಪರೆಯ ವಾರಸುದಾರಿಕೆಯು ನಿಮ್ಮದಾಗಬೇಕೆಂದು ಪ್ರೊ. ನಡವಿನಮನಿ ಅವರು ಹೇಳಿದರು.
ಇಂಟ್ಯಾಚ್ ಮತ್ತು ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ‘ಇಂಟ್ಯಾಚ್ ಪರಂಪರೆ ೨೦೨೪’ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ಸಾಂಸ್ಕೃತಿಕ ಪರಂಪರೆ ಉಳಿದ ದೇಶಗಳಿಗಿಂತ ಶ್ರೀಮಂತವಾಗಿದೆ. ನಮ್ಮನ್ನು ನಾವು ಗುರುತಿಸಿಕೊಳ್ಳಲು ಪ್ರಸಿದ್ಧ ಕುರುಹುಗಳು ಸಹಾಯ ಮಾಡುತ್ತವೆ. ಅದಕ್ಕಾಗಿ ಸ್ಮಾರಕಗಳನ್ನು, ಶಾಸನಗಳನ್ನು, ಪಳಿಯುಳಿಕೆಗಳನ್ನು ರಕ್ಷಿಸಬೇಕೆಂದು ಹೇಳಿದರು.
ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಂ.ಎಸ್.ಮದಭಾವಿ ಅಧ್ಯಕ್ಷತೆ ವಹಿಸಿದ್ದರು.
ಡಾ. ವಿ.ಡಿ. ಐಹೊಳ್ಳಿ ಅವರು ಕ್ವಿಜ್ ಮಾಸ್ಟರ ಆಗಿ ಕಾರ್ಯ ನಿರ್ವಹಿಸಿದರು. ಪ್ರೊ. ಸಾಹೇಬಗೌಡ ಬಿರಾದಾರ, ಪ್ರೊ. ವಿಠಲ ಟಂಕಸಾಲಿ, ಶಿಕ್ಷಕರಾದ ಅಶ್ವಿನಿ ಜಾಕೊಂಡಿ, ಮೇಘಾ ಗಾಡಿವಡ್ಡರ, ಟಿ.ಆರ್. ಜಾನಕರ, ವಿಶಾಲ ಕುಂಬಾರ, ಪುರುಷೋತ್ತಮ, ಶೀಲಾವತಿ ಮೋರಟಗಿ, ಅಶ್ವಿನಿ ಬಿರಾದಾರ, ಅಮುಖ ಗಚ್ಚಿನಮಾಲ, ರಾಜು ಬಿರಾದಾರ, ಎಸ್.ಎಸ್. ಶೇಠೆ, ದಾಕ್ಷಾಯಣಿ ಬಿರಾದಾರ, ಕವಿತಾ ಪಾಟೀಲ ಉಪಸ್ಥಿತರಿದ್ದರು.
ರಸಪ್ರಶ್ನೆ ಕರ‍್ಯಕ್ರಮದಲ್ಲಿ ಶ್ರೀ ಬಿ.ಎಂ. ಪಾಟೀಲ ಪಬ್ಲಿಕ ಶಾಲೆಯ ಅನುಪ್ರಿಯಾ ಕುಲಕರ್ಣಿ ಮತ್ತು ಜ್ಞಾನಿ ಪಾಟೀಲ ಪ್ರಥಮ, ಸೇಂಟ್‌ಜೋಸೆಫ್ ಶಾಲೆಯ ವೈಭವ ದೇಶಪಾಂಡೆ ಮತ್ತು ಪ್ರಥಮ ಕಟಗೇರಿ ದ್ವಿತೀಯ, ಗೀತಾಂಜಲಿ ಪ್ರೌಢಶಾಲೆಯ ಸುದೀಪ ಚವ್ಹಾಣ ಮತ್ತು ಪ್ರದ್ಯುಮ್ನ ಜಹಾಗೀರದಾರ ಮತ್ತು ಎಸ್.ಎಸ್. ಎ. ಪ್ರೌಢಶಾಲೆಯ ಶ್ರೀ ಸಾಯಿ ಮತ್ತು ಕಿಶೋರ ತೃತೀಯ ಸ್ಥಾನ ಪಡೆದಿದ್ದಾರೆ.