ಶಾಲಾ ಮಕ್ಕಳಿಂದ ಮ್ಯಾರಥಾನ್ ಓಟ
ಸಂಜೆವಾಣೆ ವಾರ್ತೆ,
ವಿಜಯಪುರ: ಸೆ.೨:ಇಲ್ಲಿನ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧೀನದಲ್ಲಿ ನಡೆಯುತ್ತಿರುವ ಸಂಗನಬಸವ ಶಿಶುನಕೇತನ ಶಾಲೆ ಅಂತರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ೫ ರಿಂದ ೧೦ ನೇ ತರಗತಿಯ ವಿದ್ಯಾರ್ಥಿಗಳಿಗೆ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು,
ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ನಾಮಿನಿ ಚೇರಮನ್ ಸಂಗನಗೌಡ ನಾಡಗೌಡ, ಸಿಇಒ ಎಚ್. ವೆಂಕಟೇಶ ಹಾಗೂ ಶಾಲೆಯ ಆಡಳಿತಾಧಿಕಾರಿಗಳು ಮತ್ತು ಪ್ರಾಂಶುಪಾಲೆ ವಿಜಯಲಕ್ಷ್ಮೀ ಪಟ್ಟೇದ ಮತ್ತು ಉಪಪ್ರಾಂಶುಪಾಲೆ ಶ್ರೀದೇವಿ ಕನ್ನಾಳ, ಮಹೇಶ ಸಂಬಣ್ಣಿ, ದಾನೇಶ ಮಜ್ಜಗಿ, ದೈಹಿಕ ಶಿಕ್ಷಕರಾದ ಚನ್ನಬಸು ಬಣಜಿಗೆರ, ಸಂತೋಷ ಶಿವಣಗಿ, ರಾಜಕುಮಾರ್ ಜಾಧವ, ಸುಷ್ಮಾ ಹಿರ್ಗೊಂಡ, ಕವಿತಾ ಬ್ಯಾಕೋಡ, ಬಸವರಾಜ ಹಡಪದ, ದತ್ತಾರಾಜು ಗುಜ್ಜರ್ ಹಾಗೂ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.