ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡ ಆದರ್ಶ ಶಾಲೆ
ಸಂಜೆವಾಣಿ ವಾರ್ತೆ
ನಂಜನಗೂಡು.ಸೆ.02- ನಗರದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು ಕ್ರೀಡಾಂಗಣ ಮೈದಾನದಲ್ಲಿ ನಡೆದ ಎರಡು ದಿನಗಳ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿಗಳು ತಮ್ಮ ತೆಕ್ಕೆಗೆ ಪಡೆದುಕೊಂಡಿದ್ದಾರೆ.
ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ಕಾರ್ಯದರ್ಶಿ ಪ್ರಧಾನ ಕಾರ್ಯದರ್ಶಿ ಮಹೇಶ್ ಎಚ್ ಎಸ್ ಬಹುಮಾನ ವಿತರಣೆ ಮಾಡಿದರು ಹಾಗೂ ಮಕ್ಕಳಿಗೆ ಶುಭಾಶಯ ಕೋರಿದರು ಇದೇ ಸಂದರ್ಭದಲ್ಲಿ ಮಕ್ಕಳ ಕುರಿತು ಮಾತನಾಡುತ್ತಾ ಇಂದು ಕ್ರೀಡೆಯಲ್ಲಿ ಹೆಚ್ಚು ಯುವಕರು ಭಾಗವಹಿಸಿ ದೇಶಕ್ಕೆ ಹೆಸರನ್ನು ತರಬೇಕೆಂದು ಹೇಳುತ್ತಾ ಈ ಬಾರಿ ಒಲಂಪಿಕ್ ನಲ್ಲಿ ನಮ್ಮ ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟುಗಳಿಗೆ ಶುಭಾಶಯಗಳು ಕೋರಿದರು ಹಾಗೂ ಕ್ರೀಡೆಯಲ್ಲಿ ವಿಜೇತರಾದ ಮಕ್ಕಳಿಗೆ ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಪ್ರಶಂಶಿಸಿದರು ಈ ಹಳ್ಳದಿಕೇರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಿಲ್ಲದಿದ್ದರೂ ಸಹ ಈ ಕ್ರೀಡಾಪಟುವನ್ನು ಆಯೋಜಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಪ್ರಶಂಶಿಸಿದರು ಈ ಕಾರ್ಯಕ್ರಮದಲ್ಲಿ ನಿರ್ದೇಶಕ ರಂಗನಾಥನ್ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ, ಸೋಮೇಶ್ ನಿರ್ದೇಶಕಿ ಕಲ್ಪನಾ ರೂಪ ಸಹಕಾರ ಸಂಘದ ನಿರ್ದೇಶಕ ರವಿಕುಮಾರ್ ಸಿಆರ್ಪಿ ಕಿರಣ್ ಕುಮಾರ್ ದೈಹಿಕ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ರವಿಕುಮಾರ್ ವೈ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ನೀಲಿಸಿದ್ದು ದೈಹಿಕ ಶಿಕ್ಷಕರುಗಳಾದ ರೇಚಣ್ಣ ಲೋಕೇಶ್ ಶಿವನಂಜಪ್ಪ ಆದರ್ಶ ಶಾಲೆಯ ದೈಹಿಕ ಶಿಕ್ಷಕ ಯಶೋಧರ ಸಮಗ್ರ ಪ್ರಶಸ್ತಿಯನ್ನು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಸಂಘಟನಾದ ಸತೀಶ್ ಎಸ್ ದಳವಾಯಿ ಸಮಗ್ರ ಪ್ರಶಸ್ತಿ ಪಡೆದ ಆದರ್ಶ ಶಾಲೆಯನ್ನು ಕೊಂಡಾಡಿದರು ಸರ್ಕಾರಿ ಶಾಲೆಯ ಮಕ್ಕಳ ಸಾಧನೆ ಬಗ್ಗೆ ಪ್ರಶಂಶಿಸಿದರು ಸಂಘಟಕರಾದ ಮುಖ್ಯ ಶಿಕ್ಷಕಿ ಕೆ ಗೀತಾ ಸಹಶಿಕ್ಷಕರುಗಳಾದ ಮುದ್ದು ಮಾದೇಗೌಡ ಕುಮಾರಿ ಹನುಮಂತರಾಜು ಹಾಗೂ ಆದರ್ಶ ಶಾಲೆಯ ಮಕ್ಕಳು ಭಾಗವಹಿಸಿದ್ದರು.