ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ- ಗೌರವ
ಸಂಜೆವಾಣಿ ವಾರ್ತೆ
ಮಂಡ್ಯ: ಸೆ.02: ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಪ್ರಸಕ್ತ ಸಾಲಿನ ಸರ್ವ ಸದಸ್ಯರ ಸಭೆ ನಗರದ ರೈತ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಸಿ.ಸುಂದರರವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಂತರ ಮಾತನಾಡಿದ ಅವರು ಮಂಡ್ಯ ಸಿಟಿ ಕೋ -ಆಪರೇಟಿವ್ ಬ್ಯಾಂಕಿನ ವ್ಯವಹಾರವು ಪೂರ್ತಿ ಗಣಕೀಕೃತವಾಗಿದೆ ಎಂದರು.
ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ 4000 ಕ್ಕೂ ಹೆಚ್ಚು ಮಂದಿ ಷೇರುದಾರರಿದ್ದು, ಬ್ಯಾಂಕಿನಲ್ಲಿ ವ್ಯವಹಾರ ಮಾಡುತ್ತಿದ್ದಾರೆ. ಸಾಲ ಪಡೆದಿರುವ ಷೇರುದಾರರ ಮನೆ ಬಾಗಿಲಿಗೆ ಬ್ಯಾಂಕಿನ ಸಿಬ್ಬಂದಿಗಳು ತೆರಳಿ ಸಾಲ ವಸೂಲಿ ಮಾಡುವ ಜೊತೆಗೆ ಬ್ಯಾಂಕಿನಲ್ಲಿ ವಹಿವಾಟು ಮಾಡಲು ಗ್ರಾಹಕರನ್ನು ಎಂದು ಮನವೊಲಿಸುತ್ತಿದಾರೆ ಎಂದು ಹೇಳಿದರು.
2023-24 ನೇ ಸಾಲಿಗೆ ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕ್ 2ಲಕ್ಷದ ಎಂಟು ಸಾವಿರದ ಐದು ನೂರ ಅರುವತ್ತೊಂಬತ್ತು ರೂ.ಲಾಭಾಂಶ ಗಳಿಸಿದೆ ಎಂದು ಹೇಳಿದರು.
2024ನೇ ಸಾಲಿನಲ್ಲಿ ಎಸ್‍ಎಸ್‍ಎಲ್ ಸಿ, ದ್ವಿತೀಯ ಪಿಯುಸಿ, ಅಂತಿಮ ಪದವಿ ಪರೀಕ್ಷೆಯಲ್ಲಿ ಶೇ.85 ಹಾಗೂ ಅದಕ್ಕಿಂತ ಅಧಿಕ ಅಂಕಗಳಿಸಿ ಉತ್ತೀರ್ಣರಾದ, ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಸದಸ್ಯರ ಮಕ್ಕಳಿಗೆ ಪೆÇರೀತ್ಸಾಹ ಧನ ನೀಡಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷೆ ಸತ್ಯ ಸಾವಿತ್ರಿ, ನಿರ್ದೇಶಕರಾದ ಹೆಚ್.ಅಶೋಕ, ತಿರುಮಲಚಾರಿ, ಹೆಚ್.ಎಸ್.ಚನ್ನಪ್ಪ, ಬಿ.ಡಿ.ಪುರುಷೋತ್ತಮ, ಸೋಮಶೇಖರ್ ಕೆರಗೋಡು, ವೃತ್ತಿಪರ ನಿರ್ದೇಶಕ ರಾಮಲಿಂಗೇಗೌಡ, ವ್ಯವಸ್ಥಾಪಕ ಜೆ.ಅಶೋಕ ಸೇರಿದಂತೆ ಮತ್ತಿತರರು ಹಾಜರಿದ್ದರು.