ಛಲವಾದಿ ಸಮುದಾಯದ ಚಿಂತನಾ ಸಭೆಯಲ್ಲಿ ಸಾಧಕರಿಗೆ ಸನ್ಮಾನ
ಕಲಬುರಗಿ:ಸೆ.1: ನಗರದ ಚೇಂಬರ್ ಆಫ್ ಕಾಮರ್ಸ ಸಭಾಗಂಣದಲ್ಲಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾ ಘಟಕದಿಂದ ಛಲವಾದಿ ಸಮುದಾಯದ ಚಿಂತನಾ ಸಭೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಜರುಗಿತು.
ಈ ಸಂದರ್ಭದಲ್ಲಿ ಸಾಧಕರಾದ ಡಾ. ಶರಣಬಸಪ್ಪ ಕ್ಯಾತನಾಳ, ಡಾ. ಪ್ರಶಾಂತ ಕಾಂಬಳೆ, ಡಾ. ಸುದರ್ಶನ್ ಲಾಖೆ, ಡಾ. ಸಂತೋಷ ಕಟ್ಟಿಮನಿ, ಡಾ. ಶ್ರೀನಿವಾಸ ದೇವದುರ್ಗ, ಡಾ. ಸಚಿನ್ ಭೀಮನ್, ಪ್ರಾಣೇಶ ಭರತನೂರ ಇವರನ್ನು ಸನ್ಮಾನಿಸಲಾಯಿತು.
ನಿವೃತ್ತ ಐ.ಎ.ಎಸ್. ಅಧಿಕಾರಿಗಳು ಹಾಗೂ ಕರ್ನಾಟಕ ಛಲವಾದಿ ಮಹಾಸಭಾದ ರಾಜ್ಯ ಅಧ್ಯಕ್ಷ ಶ್ರೀ ಸಿದ್ದಯ್ಯ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಅರುಣ ಭರಣಿ ಹಾಗೂ ಮಹಾಸಭಾದ ಜಿಲ್ಲಾಧ್ಯಕ್ಷ ಮಹಾದೇವ ಮೋಘಾ, ನಗರ ಅಧ್ಯಕ್ಷ ಗೌತಮ ಬುರ್ಲೆ, ಪ್ರಭು ಶಿಲ್ಡ್ ಪಟ್ಟಣ, ಸಂಪತ್ ವಳಕೇರಿ, ಮಹೇಶ ಮದಿನಕರ್, ಚಂದ್ರಕಾಂತ ವಾಲಿ, ಅರುಣಕುಮಾರ ಹತಗುಂದಿ, ಚಂದ್ರಕಾಂತ ಜಂಗಲೆ, ಪೀರಪ್ಪ ಯಾತನೂರ, ಅಶೋಕ ಸಂಗೀತಕಾರ್, ಸಂಪತ ವಳಕೇರಿ, ರವಿಕಾಂತ, ಅಮರ, ಸುಭಾಷ ಶಿಕ್ಷಣರ್ಕ, ಡಾ. ಜಗದೀಶ ಕಟ್ಟಿಮನಿ, ನಾಗಮೂರ್ತಿ ಕೆ.ಎ.ಎಸ್., ವಿಲಾಸರಾಜ್ ಪಿ, ಡಾ. ಜೆ.ಎಸ್. ಪಟ್ಟಣಕರ್, ದೇವೀಂದ್ರಕುಮಾರ ಖಡೇಕರ್, ಡಾ. ರಾಹುಲ್ ತಮ್ಮನ್, ಡಾ. ಶಿವಪ್ಪ ಭುಸನೂರ ಸೇರಿದಂತೆ ಇತರರು ಇದ್ದರು.