ಸಂದನಪಾಳ್ಯ ಸೇಂಟ್ ಆಂಟೋನೀಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು:ಜಿಲ್ಲಾ ಮಟ್ಟಕ್ಕೆ ಆಯ್ಕೆ
ಸಂಜೆವಾಣಿ ವಾರ್ತೆ
ಹನೂರು ಸೆ.2 :- ತಾಲ್ಲೂಕಿನ ಸೇಂಟ್ ಆಂಟೋನೀಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದರಲ್ಲಿ ಮೆರ್ಲಿನ 100 ಮೀ ಪ್ರಥಮ, 200 ಮೀ ಪ್ರಥಮ, ಉದ್ದ ಜಿಗಿತದಲ್ಲಿ ದ್ವಿತೀಯ, ಪ್ರಿಯಾಂಕ ಉದ್ದ ಜಿಗಿತದಲ್ಲಿ ಪ್ರಥಮ, 200 ಮೀ ತೃತೀಯ, ಕಲ್ಯಾಣಿ 3000 ಮೀ ತೃತೀಯ, ಸುರೇಶ್ 800 ಮೀ ದ್ವಿತೀಯಾ, ತಟ್ಟೆ ಎಸೆತದಲ್ಲಿ ಜಾಯ್ಸನ್ ದ್ವಿತೀಯ, ಜೆನಿಫರ್ ಲೋಪಸ್ 400 ಮೀ ತೃತೀಯ, ಹರ್ಷಿತ್ ಉದ್ದಜಿಗಿತದಲ್ಲಿ ದ್ವಿತೀಯ, ಹಾಗೂ ಬಾಲಕಿಯರ ವಿಭಾಗದ 4*100 ರಿಲೇ ಮೆರ್ಲಿನ ತಂಡ ಪ್ರಥಮ ಸ್ಥಾನ ಪಡೆದು ಹಾಗೂ ಬಾಲಕಿಯರ ವೈಯಕ್ತಿಕ ಚಾಂಪಿಯನ್ ಮೆರ್ಲಿನ ಪಡೆದುಕೊಂಡಿರುತ್ತಾಳೆ.
ಕ್ರೀಡೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಶಾಲಾ ವ್ಯವಸ್ಥಾಪಕರಾದ ಗುರು ಆರೋಕ್ಯ ರಾಜ್ ಲೆನಾರ್ಡ್ ಹಾಗೂ ಮುಖ್ಯಶಿಕ್ಷಕರಾದ ಶ್ರೀ ಲೂಯಿಸ್ ನೇಸನ್ ಹಾಗೂ ಶ್ರೀಮತಿ ಸೂಸ್ಯೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಶ್ರೀ ಗಿಲ್ಬರ್ಟ್ ಸಗಾಯರಾಜ್ ಹಾಗೂ ಜೇಮ್ಸ್ ಚಾಲ್ರ್ಸ್ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.