ಶಾಸ್ತ್ರಿಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ‌ಸ್ಥಾನ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨; ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಯಲ್ಲಿ  ಆಯೋಜಿಸಿದ್ದ ರಾಜ್ಯಮಟ್ಟದ ಯುವಜನೋತ್ಸವ ಶಿಬಿರದಲ್ಲಿ ಆರ್.ಜಿ ಇನಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಎನ್.ಎಸ್.ಎಸ್ ಸ್ವಯಂ ಸೇವಕಿಯಾದ ಕುಮಾರಿ ಸ್ಪೂರ್ತಿ ಎಸ್. ಬಿ ಇವರು ದಾವಣಗೆರೆ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಶಾಸ್ತ್ರಿಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ‌ಸ್ಥಾನವನ್ನು ಪಡೆದಿದ್ದಾರೆ. ಅವರಿಗೆ ಆರ್.ಜಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ವೇತಾ ಆರ್.ಗಾಂಧಿ, ಆಡಳಿತ ವರ್ಗ ಮತ್ತು ಎಲ್ಲಾ ಬೋಧಕ-ಬೋಧಕೇತರ ವರ್ಗದವರ, ವಿದ್ಯಾರ್ಥಿಗಳ ಪರವಾಗಿ ಶುಭಕೋರಿದ್ದಾರೆ.