ವೀರಶೈವ ಲಿಂಗಾಯತ ಅಧ್ಯಯನ ಪೀಠ ಸ್ಥಾಪನೆಯಾಗಲಿ:ಡಾ.ರಾಜಶೇಖರ ಶಿವಾಚಾರ್ಯರು
ಕಲಬುರಗಿ:ಸೆ.1: ರಾಧಾನಿ ಬೆಂಗಳೂರು ವಿಶ್ವವಿದ್ಯಾಯಲದಲ್ಲಿ ವೀರಶೈª ಲಿಂಗಾಯತ ಅದ್ಯಯನ ಪೀಠ ಸ್ಥಾಪನೆ ಮಾಡಬೆಕೆಂದು ಬೆಮಳಖೇಡದ ಗೋರ್ಟಾ ಬೀದರ ಶ್ರೀ ಡಾ. ರಾಜಶೇಖರ ಶಿವಚಾರ್ಯರು ರಾಜ್ಯ ಸರ್ಕಾರವನ್ನು ವತ್ತಾಯಿಸಿದರು.
ಅವರು ಕಮಲಾಪೂರದ ಆದ್ಯವಚನಕಾರರಾದ ಶ್ರೀ ದೇವರ ದಾಸಿಮಯ್ಯನವರ ಮಂದಿರದ ಪ್ರಾಂಗಣದಲ್ಲಿ ನಡೆದ ಶ್ರಾವಣ ಶಿವ ಸಂಚಾರ ಶ್ರೀ ಸಿದ್ಧಾಂತ ಶಿಖಾಮಣಿ ಅಭಿಯಾನ ನಿಮಿತ್ಯ ನಡೆದ ಧರ್ಮ ಸಮಾರಂಭದ ದಿವ್ಯ ಸಾನಿದ್ಯವನ್ನು ವಹಿಸಿ ಮಾತನಾಡಿದರು. ಜಾಗತಿಕ ಪುರಾತನ ಶ್ರೇಷ್ಠ ಧರ್ಮವೆನಿಸಿ ವೀರಶೈವ ಧರ್ಮ ವಿಶ್ವ ಸಮಸ್ತ ಜೀವರಾಸಿಗಳ ಕಲ್ಯಾಣ ಬಯಸುತ್ತದೆ. ಲಿಂಗಧಾರಣೆ ಪ್ರಾಚೀನ ಸಂಸ್ಕøತಿಯಾಗಿದ್ದು ಸಮಸ್ತ ಮನುಕುಲದ ಕಲ್ಯಾಣವೇ ಇದರ ಮುಖ್ಯ ಧರ್ಮವಾಗಿ ವಿರಶೈವದ ಇತಿಹಾಸ ಅತ್ಯಂತ ಪ್ರಾಚೀನವಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಯುಗ ಪೂರ್ವ ಕಾಲದಲ್ಲಿಯೇ ಹಿಂದುಳಿದ ವರ್ಗದ ಕುಲ ಹದಿನೆಂಟು ಜಾತಿ ಜನಾಂದವರಿಗೆ ಇಷ್ಠಲಿಂಗ ದಿಕ್ಷೆಯನ್ನು ನೀಡಿ ಧರ್ಮಸ್ವಾಂತ್ರ್ಯವನ್ನು ನೀಡಿದ್ದಾರೆ. ಕೊಲ್ಲಿಪಾಕಿಯಲ್ಲಿ ಅಷ್ಠ ಮಠಗಳ ಸ್ಥಾಪನೆಯನ್ನು ಮಾಡುವ ಮೂಲಕ ವಿಶ್ವದ ಮೊಟ್ಟಮೊದಲ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಪ್ರಥಮ ಸಾಮಾಜಿಕ ಸುಧಾರಕರಾಗಿದ್ದಾರೆ. ಅಗಸ್ತ್ಯೆಮಹರ್ಷಿಯನ್ನು ನಿಮಿತ್ಯವನ್ನಾಗಿ ಮಾಡಿಕೊಂಡು ಶಿವ ಸಿದ್ಧಾಂತವನ್ನು ಬೋಧಿಸಿದ್ದಾರೆ. ಇಷ್ಠಲಿಂಗ ಧಾರಣೆ ಸಂಸ್ಕøತಿ ಜಗತ್ತಿನ ಪುರಾತನ ಸಂಸ್ಕøತಿಯಾಗಿದೆ. ಸಿಂಧು ನಾಗರಿಕತೆ ವೈದಿಕ ಸಂಸ್ಕøತಿ, ಪುರಾಣ ಪ್ರಾಚೀನ ಸಂಸ್ಕøತಿಯಲ್ಲಿ ಇಷ್ಠಲಿಂಗಾಧಾಣೆಯನ್ನು ಹಾಸು ಹೊಕ್ಕಾಗಿದೆ ಲಿಂಗಧಾರಣೆ ಯಾವುದೇ ಜಾತಿ, ಮತ, ಪಂಥಗಳು ಅಡ್ಡಿಯಾಗುವುದಿಲ್ಲ. ಯಾರಬೇಕಾರೂ ಲಿಂಗಾಯಿತರಾಗಬಹುದು. ರಾಜ್ಯದ ವೀರಶೈವ ಲಿಂಗಾಯಿತರು ಬಹುಸಂಖ್ಯಾತರಾದರೂ ವೀರಶೈವ ಲಿಂಗಾಯತ ಅಧ್ಯಯನದ ಕೊರತೆಇದೆ. ಆದ್ದರಿಂದ ಸರಕಾರವೂ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನಪೀಠ ಸ್ಥಾಪನೆ ಮಾಡಬೇಕೆಂದು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಸರ್ಕಾರವನ್ನು ವತ್ತಾಯಿಸಿದ್ದಾರೆ. ಕಾರ್ಯಕ್ರಮ ಸೇವಾಕರ್ತರಾದ ಶ್ರೀಮತಿ ಪುಷ್ಪಲತಾ, ಬಸವರಾಜ ಡಾವರಗಾಂವ, ಸ್ನೇಹಾ ಚನ್ನವೀರ, ಪೂಜಾ ಸುನಿಲ, ಕೇದಾರ ಡಾವರಗಾಂವ, ದೇವಸ್ಥಾನದ ಅಧ್ಯಕ್ಷರಾದ ದಾಸಿಮಯ್ಯ ವಡ್ಡನಕೇರಾ, ನಾಗಯ್ಯಸ್ವಾಮಿ ಮುಂತಾದವರಿದ್ದರು.