ತ್ರಿವಿಧ ದಾಸೋಹಿ ಶರಣಬಸವೇಶ್ವರರು
ಕಲಬುರಗಿ:ಸೆ.1:12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ಕಾಯಕ ದಾಸೋಹ ಅನುಭವ ಕಾಲಘಟ್ಟದಲ್ಲಿ ಕಣ್ಮರೆಯಾಗುತ್ತಿರುವಾಗ ಮಹಾದಾಸೋಹಿ ಶರಣಬಸವರು ಲೋಕದ ಸೇವೆಗಾಗಿ ಟೊಂಕ ಕಟ್ಟಿ ನಿಂತರು.
ಶರಣಬಸವೇಶ್ವರರ ಸಮಾಧಿ ಇರುವ ಗರ್ಭಗೃಹದಲ್ಲಿ ಗದ್ದುಗೆಯ ಮೇಲೆ ಗುರು ಶಿಷ್ಯರ ಅವಿನಾಭಾವ ಸಂಬಂಧ ಹಾಗು ಸಾಮರಸ್ಯಗಳನ್ನು ಸೂಚಿಸಲು ಶರಣಬಸವೇಶ್ವರ ಹಾಗೂ ಅವರ ಗುರುಗಳ ಜೋಡಿ ಮೂರ್ತಿಯನ್ನು ಪ್ರತಿನಿಧಿಕವಾಗಿ ಪ್ರತಿಷ್ಠಾಪಿಸಿದ್ದು, ಇಂದು ಇದೆ ಭಕ್ತರ ಆರಾಧನಾ ಬಿಂದುವಾಗಿದೆ.
ಪವಿತ್ರ ತಿಂಗಳಾದ ಶ್ರಾವಣ ಮಾಸದಲ್ಲಿ ಶರಣರ ಗದ್ದುಗೆಯ ಪೂಜಾ ಅಲಂಕಾರವಂತು ನೋಡಲು ಎರಡು ಕಣ್ಣುಗಳು ಸಾಲದು. ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಮತ್ತು ಪೂಜ್ಯ ಡಾ.ದಾಕ್ಷಾಯಣಿ ಎಸ್.ಅಪ್ಪ ಅವರ ಮಾರ್ಗದರ್ಶನದಲ್ಲಿ ಸಕಲ ಕಾರ್ಯಗಳು ಅನ್ನದಾಸೋಹ, ಶಿಕ್ಷಣ ದಾಸೋಹ ಅಲ್ಲದೆ ಬಡ ಬಗ್ಗರ ಸೇವೆಯನ್ನು ಮಾಡುತ್ತಾ ಪೂಜ್ಯ ಅವ್ವಾಜಿಯವರು ದಾಸೋಹ ಮಹಾಮನೆಯಲ್ಲಿ ಸಾಕ್ಷಾತ್ ಪಾರ್ವತಿ ದೇವಿಯಂತೆ ಕಂಗೊಳಿಸುತ್ತಿದ್ದಾರೆ.
ಶ್ರಾವಣ ಮಾಸದಲ್ಲಂತು ಬೆಳ್ಳಿಯ ಪಲ್ಲಕೆ ಮರೆವಣಿಗೆ ಹಾಗೂ ಗದ್ದುಗೆ ಮೇಲಿನ ದಿವ್ಯ ಅಲಂಕಾರವಂತು ಅವ್ವಾಜೀಯವರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಶ್ರಾವಣ ಮಾಸದ ತಿಂಗಳಲ್ಲಿ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶದ ಲಕ್ಷ ಲಕ್ಷ ಭಕ್ತರು ಬಂದು ದರುಶನ ಮಾಡಿ ಪೂಜ್ಯ ಅಪ್ಪಾಜೀ ಮತ್ತು ಪೂಜ್ಯ ಮಾತೋಶ್ರೀ ಅವ್ವಾಜೀಯವರನ್ನು ಕೊಂಡಾಡುತ್ತಿದ್ದಾರೆ.
ಪೂಜ್ಯ ಅಪ್ಪಾಜೀಯವರು ಈ ಇಳಿಯ ವಯಸ್ಸಿನಲ್ಲಿಂತು ತ್ರಿವಿಧ ದಾಸೋಹಿಗಳಾಗಿ ಕಂಗೊಳಿಸುತ್ತಿದ್ದಾರೆ. ಗುರು-ಲಿಂಗ-ಜಂಗಮರ ಪೂಜೆ, ಇಷ್ಠಲಿಂಗ ಪೂಜೆ ಶರಣರ ಗದ್ದುಗೆ ಪೂಜೆ ಮಾಡುತ್ತಾ ಬಂದಂತಹ ಭಕ್ತರೆಗೆ ಕರುಣಾಜನಕಾರಾಗಿ ಬೇಡಿದವರಿಗೆ ಬೇಡಿದ್ದನ್ನು ಆಶೀರ್ವದಿಸುತ್ತಾ ದಾಸೋಹ ಮಹಾಮನೆಯಲ್ಲಿ ಪರಶಿವನ ಹಾಗೆ ಕುಳಿತ್ತಿದ್ದಾರೆ ಇನ್ನೂ ಪೂಜ್ಯ ಚಿ.ದೊಡ್ಡಪ್ಪ ಅಪ್ಪಾ ಅವರಂತು ಶಿಕ್ಷಣವನ್ನು ಮಾಡುತ್ತಾ ಇಷ್ಠಲಿಂಗ, ಗುರು-ಲಿಂಗ-ಜಂಗಮರ ಹಾಗೂ ಶರಣರ ಗದ್ದುಗೆ ಪೂಜೆಯನ್ನು ಮಾಡುತ್ತಾ ದಾಸೋಹ ಮಹಾಮನೆಯಲ್ಲಿ ಕಂಗೋಳಿಸುತ್ತಿದ್ದಾರೆ.
ಚಿ.ದೊಡ್ಡಪ್ಪ ಅಪ್ಪ ಅವರು ಸಾಕ್ಷಾತ ಮಹಾದಾಸೋಹಿ ಶರಣಬಸವೇಶ್ವರರು ಎಂದು ಬಂದ ಭಕ್ತರು ಹಾಡಿ ಹೊಗಳುತ್ತಿದ್ದಾರೆ ಶ್ರಾವಣ ಮಾಸದ ಎಲ್ಲಾ ಜವಾಬ್ದಾರಿಯನ್ನು ಹೊತ್ತವರು ಸದಾಕಾಲ ಅಪ್ಪಾಜೀ, ಅವ್ವಾಜೀಯವರ ಮಾತನ್ನು ಚಾಚು ತಪ್ಪದೇ ದಾಸೋಹ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಎಲ್ಲಾ ಭಕ್ತರ ಪ್ರೀತಿಯ ಬಸವರಾಜ ದೇಶಮುಖ ಅಣ್ಣಾಜೀಯವರು ಕೂಡ ಈ ಶ್ರಾವಣ ಮಾಸದಲ್ಲಿ ಸಂಪೂರ್ಣ ಜವಬ್ದಾರಿಯನ್ನು ಹೊತ್ತು ತಮ್ಮ ದಾಸೋಹ ಕಾಯಕವನ್ನು ಮಾಡುತ್ತಾ ಶರಣರ ಸೇವೆಯಲ್ಲಿ ನಿರತರಾಗಿದ್ದಾರೆ.
-ಆಧಿನಾಥ ವ್ಹಿ ಮಹಾರಾಜ ಔಸಾ