ಹಬ್ಬಗಳು ಶಾಂತಿ, ಸೌಹಾರ್ದತೆಯನ್ನು ಹೆಚ್ಚಿಸುವಂತಿರಲಿ; ಸಿಪಿಐ ಕಪಿಲ್ ದೇವ
ಚಿಂಚೋಳಿ,ಸೆ.1- ಹಬ್ಬಗಳು, ಶಾಂತಿ ಸೌಹಾರ್ದತೆಯನ್ನು ಹೆಚ್ಚಿಸುವಂತಿರಬೇಕೇ ಹೊರತು ಹಬ್ಬಗಳ ಸಂಭ್ರಮಾಚರಣೆ ವೈ ಮನಸ್ಸನ್ನು ಹೆಚ್ಚಿಸಿ ಅಸಹಿಷ್ಣುತೆ ಹುಟ್ಟಿಸುವಂತಿರಬಾರದು ಎಂದು ಚಿಂಚೋಳಿಯ ಸಿಪಿಐ ಕಪಿಲ್ ದೇವ ಅಭಿಪ್ರಾಯ ವ್ಯಕ್ತಪಡಿಸಿದರು.
ಗಣೇಶ ಚತುರ್ಥಿ ಮತ್ತು ಮಿಲಾದ್-ಉನ್-ನಬಿ ಹಬ್ಬಗಳ ಪ್ರಯುಕ್ತವಾಗಿ ನಿನ್ನೆ ಚಿಂಚೋಳಿ ಪೆÇಲೀಸ್ ಸ್ಟೇಷನಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಎಲ್ಲ ಹಬ್ಬಗಳಿಗೂ ಒಂದೊಂದು ಇತಿಹಾಸವಿದೆ.
ಎಲ್ಲ ಹಬ್ಬಗಳ ಆಚರಣೆಯ ಹಿಂದಿರುವ ಇತಿಹಾಸವನ್ನು ನಾವೆಲ್ಲರೂ ಅರಿತುಕೊಳ್ಳಬೇಕು ಅಂದಾಗ ಮಾತ್ರ ಹಬ್ಬಗಳು ಅರ್ಥಪೂರ್ಣವಾಗುತ್ತವೆ. ಹಬ್ಬಗಳು ಇರುವುದು ನಮ್ಮ ಸಂತೋಷವನ್ನು ಹೆಚ್ಚಿಸುವುದಕ್ಕೆ ಹೊರತು ಕರಾಳತೆ ಸೃಷ್ಟಿಸುವುದಕ್ಕಲ್ಲ ಆದ್ದರಿಂದ ಸಾರ್ವಜನಿಕರು ಹಬ್ಬದ ಸಂದರ್ಭದಲ್ಲಿ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಆಚರಣೆ ಮಾಡಬೇಕೆಂದು ಹೇಳಿದರು.
ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆ.ಎಂ.ಬಾರಿ ನಮ್ಮ ತಾಲ್ಲೂಕು ಶಾಂತಿ ಸೌಹಾರ್ದತೆಗೆ ಹಾಗೂ ಭಾವೈಕ್ಯತೆಗೆ ಹೆಸರುವಾಸಿಯಾಗಿದೆ. ಈ ಹಿಂದೆ ಕೂಡ ಯಾವುದೇ ಅಹಿತಕರ ಘಟನೆ ಜರುಗಿರುವುದಿಲ್ಲ ಇನ್ನು ಮುಂದೆ ಕೂಡ ಅಂತಹ ಘಟನೆಗಳು ನಡೆಯುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯುವ ಮುಖಂಡರಾದ ನಾಗರಾಜ ಮಲಕೂಡ ಮಾತನಾಡಿ, ಭಾರತದಲ್ಲಿ ಗಣೇಶ ಚತುರ್ಥಿಗೆ ವಿಶೇಷವಾದ ಇತಿಹಾಸವಿದೆ. ಸ್ವಾತಂತ್ರ್ಯಪೂರ್ವದಲ್ಲಿ ಬಾಲಗಂಗಾಧರ ತಿಲಕ್ ರವರು ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯವನ್ನು ಪಡೆಯಲು ಜನರನ್ನು ಗಣೇಶ ಚತುರ್ಥಿಯ ನೆಪವೊಡ್ಡಿ ಸಭೆ ಸೇರಿಸುತ್ತಿದ್ದರು. ಹಬ್ಬ ಹರಿದಿನಗಳಂದು ಕೇವಲ ಡಿಜೆ ಹಚ್ಚಿ, ಮನಬಂದಂತೆ ಕುಣಿದು ಕುಪ್ಪಳಿಸುವುದಕ್ಕಿಂತ ಅರ್ಥಪೂರ್ಣವಾಗಿ ಎಲ್ಲರೂ ಸೇರಿ ಭಾವೈಕ್ಯತೆಯಿಂದ ಆಚರಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ, ಮೀರಿಯಾಣ ಪಿಎಸ್‍ಐ ಮಡಿವಾಳಪ್ಪ ಬಾಗೋಡಿ, ಮುಖಂಡರಾದ ಆರ್.ಗಣಪತರಾವ್,
ಅಲ್ಲಮಪ್ರಭು, ಪುರಸಭೆ ಸದಸ್ಯ ಅನ್ವರ್ ಖತೀಬ್,ಖಲೀಲ್ ಪಟೇಲ್, ಶೇಕ್ ಭಕ್ತಿಯಾರ್ ಜಾಗಿರದಾರ್,ಶಿವಯೋಗಿ ರೂಸ್ತಾಂಪುರ್, ಸಿದ್ದು ರಂಗನೂರ್ ಸೇರಿದಂತೆ ಇನ್ನಿತರ ಮುಖಂಡರುಗಳು ಹಾಗೂ ಸಾರ್ವಜನಿಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು.