ಸಿಯುಕೆ ವಿದ್ಯಾರ್ಥಿಗಳು ಅಧ್ಯಯನ ಪ್ರವಾಸಕ್ಕೆ ಪ್ರಯಾಣ
ಕಲಬುರಗಿ,ಸೆ 1: ಪುಸ್ತಕ ಓದುವುದಕ್ಕಿಂತ ರಾಷ್ಟ್ರ ಪರ್ಯಟನೆ ಹೆಚ್ಚು ಜ್ಞಾನವನ್ನು ನೀಡುತ್ತದೆ, ಆದ್ದರಿಂದ ದೇಶ ಸುತ್ತು, ಕೋಶ ಓದು ಎನ್ನುತ್ತಾರೆ ಎಂದು ಸಿಯುಕೆಯ ಕುಲಸಚಿವ ಪೆÇ್ರ.ಆರ್ ಆರ್ ಬಿರಾದಾರ್ ಹೇಳಿದರು. ಅವರು ಸಿಯುಕೆಯಕ್ಯಾಂಪಸ್‍ನಲ್ಲಿ ಹದಿನೈದು ದಿನಗಳ ರಾಷ್ಟ್ರೀಯ ಅಧ್ಯಯನ ಪ್ರವಾಸಕ್ಕೆ ಚಾಲನೆ ನೀಡುವ ಮೊದಲು ಎಂಬಿಎ ಪ್ರವಾಸೋದ್ಯಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ ನಿಮ್ಮ ಭೇಟಿಯ ಸಮಯದಲ್ಲಿ ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆಯ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ. ಅಧ್ಯಯನ ಪ್ರವಾಸವು ನಿಮ್ಮ ಕಲಿಕೆಯ ಪ್ರಾಯೋಗಿಕ ಅಂಶವಾಗಿದೆ. ದೈನಂದಿನ ಆಧಾರದ ಮೇಲೆ ಟಿಪ್ಪಣಿಗಳನ್ನು ಮಾಡಿ ಮತ್ತು ಪ್ರವಾಸದ ಕೊನೆಯಲ್ಲಿ ಸಮಗ್ರ ವರದಿ ತಯಾರಿಸಿ ಎಂದು ಹೇಳಿದರು.
ಪ್ರವಾಸೋದ್ಯಮ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್ ವಿಭಾಗದ ಮುಖ್ಯಸ್ಥ ಡಾ. ಗೌತಮ್ ಡಿ ಅವರು ಮಾತನಾಡಿದರು.ಹದಿನೈದು ದಿನಗಳ ಅಧ್ಯಯನ ಪ್ರವಾಸದಲ್ಲಿ ಅವರು ಅಹಮದಾಬಾದ್, ಜೈಪುರ, ದೆಹಲಿ, ಅಮೃತಸರ, ಜಲಂದರ್, ಹರಿದ್ವಾರ, ಆಗ್ರಾ, ಮಥುರಾ ಮತ್ತು ಹೈದರಾಬಾದ್‍ಗೆ ಭೇಟಿ ನೀಡಲಿದ್ದಾರೆ.ಈ ಸಂದರ್ಭದಲ್ಲಿ ಎಂಬಿಎ ತೃತೀಯ ಸೆಮಿಸ್ಟರ್‍ನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಾದ ಡಾ.ಶಿವ ಎಂ ಮತ್ತು ಡಾ.ಜಗದೀಶ್ ಬಿರಾದಾರ್ ಉಪಸ್ಥಿತರಿದ್ದರು.