ರೋಣಿಹಾಳ ಗ್ರಾಮ ಪಂಚಾಯತ ಮಟ್ಟದ ಕ್ರೀಡಾಕೂಟ
ಕೊಲ್ಹಾರ:ಸೆ.1: ಮಕ್ಕಳಿಗೆ ಕ್ರೀಡೆ ಅತೀ ಮುಖ್ಯವಾಗಿದೆ, ಮೊಬೈಲ್ ಗೀಳಿನಿಂದ ಪಾರಾಗಲು ಮಕ್ಕಳಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಪಾಲಕರು ಪೆÇ್ರೀತ್ಸಾಹ ನೀಡಬೇಕು ಎಂದು ಬಳ್ಳಾರಿ ಕೆ.ಪಿ.ಟಿ.ಸಿ.ಎಲ್ ಅಭಿಯಂತರ ಶಿವಾನಂದ ಬಿರಾದಾರ ಹೇಳಿದರು.
ತಾಲೂಕಿನ ಕುಪಕಡ್ಡಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡ ರೋಣಿಹಾಳ ಪಂಚಾಯತ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು,ಕ್ರೀಡೆಗಳಿಂದ ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿ ಬೆಳೆಯುತ್ತಾರೆ.ನಮ್ಮ ಗ್ರಾಮಕ್ಕೆ ಕ್ರೀಡಾ ಆಯೋಜನೆ ದೊರೆತಿರುವುದು ನಮ್ಮ ಸೌಭಾಗ್ಯ ಎಂದರು.
ಸರ್ಕಾರಿ ಆರ್.ಎಮ್.ಎಸ್.ಎ ಪ್ರೌಢ ಶಾಲೆಯ ನಿಕಟಪೂರ್ವ ಅಧ್ಯಕ್ಷ ಉದಯಕುಮಾರ ಹಳ್ಳಿ ಕ್ರೀಡಾ ಧ್ವಜಾರೋಹಣವನ್ನು ನೇರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರುಗೇಶ ಹಳ್ಳಿ ವಹಿಸಿದ್ದರು.ಕ್ರೀಡಾ ಜ್ಯೋತಿಯನ್ನು ಶಿವಾನಂದ ಬಿರಾದಾರ ಸ್ವೀಕರಿಸಿದರು.ಮುಖ್ಯ ಅತಿಥಿಗಳಾಗಿ ಉಮೇಶ ಕವಲಗಿ,ಅತಿಥಿಗಳಾಗಿ ಸಿದ್ದನಗೌಡ ಪಾಟೀಲ, ಸತ್ಯಪ್ಪ ಮದಗುಣಕಿ, ದೊಡ್ಡನಗೌಡ ಬಿರಾದಾರ, ಶಿವಾನಂದ ಬಿರಾದಾರ, ಬಾವುರಾವ ಕುಲಕರ್ಣಿ, ಭೀಮಸಿ ಪಾಯಗೊಂಡ, ಶಾಂತಪ್ಪ ಹಲಗಲಿ, ಸಂಗನಗೌಡ ಬಿರಾದಾರ,ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಶಿಕ್ಷಣ ಸಂಯೋಜಕರಾದ ವಿಜಯೇಂದ್ರ ಪುರೋಹಿತ, ಸಿ.ಆರ್.ಪಿ ಗಳಾದ ಸಂಗಮೇಶ ಜಂಗಮಶೆಟ್ಟಿ, ಜಿ.ಆಯ್.ಗೋಡ್ಯಾಳ, ಶ್ರೀಕಾಂತ ಪಾರಗೊಂಡ, ಆನಂದ ಪವಾರ, ಅಮೀರ ಅಲಿ ನಧಾಫ, ಬಸವರಾಜ ಚಿಂಚೊಳ್ಳಿ,ಶಾಲೆಯ ಮುಖ್ಯ ಶಿಕ್ಷಕ ಸಿದ್ದು ಕೋಟ್ಯಾಳ ಸಿಬ್ಬಂದಿಗಳಾದ ಹಣಮಂತ ಬಿರಾದಾರ, ಶಾಂತಪ್ಪ ನಾಗರಳ್ಳಿ, ಸಂಗಮೇಶ ಎಲಬಳ್ಳಿ, ಹೇಮಾವತಿ, ಕವಿತಾ ಹಿರೇಮಠ, ಲಕ್ಷ್ಮೀ ವನೇಶಿ, ಆನಂದ ಹೊಲ್ದೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಿ.ಆರ್.ಪಿ ಗಳಾದ ಸಂಗಮೇಶ ಜಂಗಮಶೇಟ್ಟಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
ಸಿ.ಆರ್.ಪಿ ಗಳಾದ ಜಿ.ಆಯ್.ಗೋಡ್ಯಾಳ ರವರು ನಿರೂಪಿಸಿದರು. ಆನಂದ ಹೊಲ್ದೂರ ವಂದಿಸಿದರು