ಸಾಲಬಾಧೆಯಿಂದ ಬಿಳವಾರ ಗ್ರಾಮದ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ
ಯಡ್ರಾಮಿ:ಸೆ.1:ತಾಲೂಕಿನ ಬಿಳವಾರ ಗ್ರಾಮದ ರೈತ ಮಲ್ಲಪ್ಪ ತಂದೆ ಭೀಮರಾಯ ಕಂಬಳಿ 50 ವರ್ಷದ ವ್ಯಕ್ತಿ ಸಾಲವಾದೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.
ಮೃತ ವ್ಯಕ್ತಿಯು ತಮ್ಮ ಕೂಡು ಕುಟುಂಬದ ಎಲ್ಲಾ ಜವಾಬ್ದಾರಿ ನೋಡಿಕೊಳ್ಳುತ್ತಿದ್ದು .ಇತನು ಕೃಷಿ ಗ್ರಾಮೀಣ ಬ್ಯಾಂಕಿನಲ್ಲಿ 2.50 ಲಕ್ಷ ಕೈಸಾಲ ರೂಪದಲ್ಲಿ 10 ಲಕ್ಷಕ್ಕೂ ಹೆಚ್ಚು ಮತ್ತು ಮಹಿಳಾ ಸಂಘಗಳಲ್ಲಿ 1 ಲಕ್ಷ ಹೀಗೆ ಒಟ್ಟು 15 ಲಕ್ಷಕ್ಕೂ ಅದಿಕ ಸಾಲ ಮಾಡಿಕೊಂಡಿದ್ದ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.
ಸಾಲಗಾರರ ಕಾಟ ತಾಳಲಾರದೆ ಹೊರವಲಯದ ಜಮೀನಿನಲ್ಲಿ ವಿಷದ ಬಾಟಲ ತೆಗೆದುಕೊಂಡು ಹೋಗಿ ಸೇವಿಸಿ ಮೃತನಾಗಿದ್ದಾನೆ.ಇವರಿಗೆ ಎರಡೂ ಹೆಣ್ಣು ಮಕ್ಕಳು ಒಂದು ಗಂಡು ಮಗುವಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .