ದರ್ಶನ ಗ್ಯಾಂಗ್ ನ 10 ನೇ ಆರೋಪಿ ವಿನಯ ವಿಜಯಪುರ ಜೈಲಿಗೆ ಸ್ಥಳಾಂತರ
ವಿಜಯಪುರ,ಸೆ.1: ರೇಣುಕಾಸ್ವಾಮಿ ಕೊಲೆ ಪ್ರಕರಣದ ದರ್ಶನ ಗ್ಯಾಂಗ್ ನ 10 ನೇ ಆರೋಪಿ ವಿನಯನನ್ನು ಶನಿವಾರ ನಗರ ಹೊರ ವಲಯ ಕೇಂದ್ರ ಕಾರಾಗೃಹ (ದರ್ಗಾ ಜೈಲು) ಕ್ಕೆ ಪೆÇಲೀಸರು ಕರೆತಂದಿದ್ದಾರೆ.
ಕೆಎ 01 ಜಿ 6892 ನಂಬರಿನ ಪೆÇಲೀಸ್ ವಾಹನದಲ್ಲಿ ವಿನಯನನ್ನು ಕರೆತರಲಾಗಿದ್ದು, ಎರಡು ಬ್ಯಾಗ್ ಗಳೊಂದಿಗೆ ಆರೋಪಿ ವಿನಯ ಆಗಮಿಸಿದ್ದಾನೆ.
ಪರಪ್ಪನ ಅಗ್ರಹಾರದಿಂದ ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಈತನನ್ನು ಪೆÇಲೀಸರು ಕರೆ ತಂದಿದ್ದು, ವಿನಯ ಕುಟುಂಬಸ್ಥರಿಗೆ ಸೇರಿದ ಪಟ್ಟಣಗೆರೆ ಶೆಡ್‍ನಲ್ಲಿ
ರೇಣುಕಾಸ್ವಾಮಿ ಹತ್ಯೆ ನಡೆದಿತ್ತು.
ದರ್ಶನ್ ಆಪ್ತ ವಿನಯ್ 10 ನೇ ಆರೋಪಿಯಾಗಿದ್ದು, ಕಳೆದ ನಾಲ್ಕು ದಿನಗಳಿಂದ ವಿನಯ ವಿಜಯಪುರ ಜೈಲಿಗೆ ಸ್ಥಳಾಂತರ ಆಗಲಿದ್ದಾನೆ ಎನ್ನಲಾಗಿತ್ತು. ಕೊನೆಗೂ ಇಂದು ನಾಲ್ಕನೇ ದಿನ ವಿಜಯಪುರ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ಬೆಂಗಳೂರಿನ ಆರ್.ಆರ್ ನಗರದಲ್ಲಿರುವ ಸ್ಟೋನಿ ಬ್ರೂಕ್ ಹೋಟೆಲ್ ಮಾಲೀಕನಾದ ವಿನಯಗೆ ಜೈಲು ಅಧಿಕಾರಿಗಳು 14,433 ಹೊಸ ಕೈದಿ ನಂಬರ್ ನೀಡಿದ್ದಾರೆ.
ಆರೋಪಿ ವಿನಯ್ ಆರೋಗ್ಯ ತಪಾಸಣೆ ಹಾಗೂ ಇತರ ಕಾನೂನು ಪ್ರಕ್ರಿಯೆ ಬಳಿಕ ಕೇಂದ್ರ ಕಾರಾಗೃಹದಲ್ಲಿ ಕಾರಾಗೃಹ ಸಿಬ್ಬಂದಿ ಕರೆದ್ಯೊಯ್ದರು.
ಕಾರಾಗೃಹದ ವಿಶೇಷ್ ಸೆಲ್ ಗಳ ಪೈಕಿ ಸೆಲ್ ನಂಬರ್1 ರಲ್ಲಿ ವಿನಯ್ ಬಂಧಿಯಾಗಿದ್ದಾರೆ.
ಆರೋಪಿ ವಿನಯ್ ಗೆ ಸೆಲ್ ನಂಬರ್ 1 ರಲ್ಲಿ ಅಟ್ಯಾಚ್ಡ್ ಬಾತ್ ರೂಂ ಹಾಗೂ ಪ್ಯಾನ್ ಸೌಲಭ್ಯ ಇದೆ.
ವಾರದಲ್ಲಿ ಒಂದು ಬಾರಿ ಕುಟುಂಬಸ್ಥರಿಗೆ ಹಾಗೂ ಅವರ ಪರ ನ್ಯಾಯವಾದಿಗಳಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಗುವುದು ಎಂದು ಕಾರಾಗೃಹ ಅಧೀಕ್ಷಕ ಡಾ. ಐ.ಜೆ. ಮ್ಯಾಗೇರಿ ಮಾಹಿತಿ ನೀಡಿದರು.