ಹರಿದು ತೂಗು ಕತ್ತಿಯಂತೆ ಜೋತಾಡುತ್ತಿರುವ ಪ್ಲೆಕ್ಸ್..!ಕೂಡಲೇ ತೆರವುಗೊಳಿಸಲು ಸಾರ್ವಜನಿಕರ ಆಗ್ರಹ
ಅಬ್ದುಲಜಬ್ಬಾರ ಚಿಂಚಲಿ.
ಅಥಣಿ :ಸೆ.1: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಅಂಬೇಡ್ಕರ್ ವೃತ್ತ, ಶಿವಯೋಗಿ ವೃತ್ತ ಮತ್ತು ಬಸವೇಶ್ವರ ವೃತ್ತಗಳಲ್ಲಿ ಹಾಕಿದ ಫ್ಲೆಕ್ಸ್ ಗಳು ಗಾಳಿಯ ರಭಸಕ್ಕೆ ಹರಿದು ಜೋತಾಡುತ್ತಿದ್ದು, ಇವುಗಳಿಂದ ಬೈಕ್ ಸವಾರರಿಗೆ ಮತ್ತು ವಾಹನ ಚಾಲಕರಿಗೆ ತೊಂದರೆಯಿದ್ದು ಕೂಡಲೇ ಇವುಗಳನ್ನು ತೆರವುಗೊಳಿಸಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.
ಅಥಣಿ ಪಟ್ಟಣದ ದ್ವೀಪಥ ರಸ್ತೆಗಳಲ್ಲಿ ಪ್ಲೆಕ್ಸ್ ಗಳನ್ನು ಅಳವಡಿಸಲು ಬೃಹತ್ ಆಕಾರದ ಕಟೌಟ್ ಫ್ರೇಮ್ ಗಳನ್ನ ರ್ಮಿಸಲಾಗಿದ್ದು, ಇವುಗಳ ನಿರ್ವಹಣೆಯನ್ನು ಖಾಸಗಿಯವರು ಮಾಡುತ್ತಿದ್ದರು ಕೂಡ ಸ್ಥಳೀಯ ಪುರಸಭೆ ಇವುಗಳಿಗೆ ಅನುಮತಿ ನೀಡುವ ಮೂಲಕ ಇದರಿಂದ ಪ್ರತಿವರ್ಷ ಆದಾಯ ಪಡೆದುಕೊಳ್ಳುತ್ತಿದ್ದು, ಇವುಗಳ ಬಗ್ಗೆ ನಿಗಾವಹಿಸುವಲ್ಲಿ ನಿರ್ಲಕ್ಷ ವಹಿಸಿದೆ.
ಅಥಣಿ ಪಟ್ಟಣದಲ್ಲಿ ಜತ್ತ- ಜಾಂಬೋಟ ಮತ್ತು ಜೇವರ್ಗಿ- ಸಂಕೇಶ್ವರ ಎರಡು ಪ್ರಮುಖ ಹೆದ್ದಾರಿಗಳು ಹಾಯ್ದು ಹೋಗಿರುವುದರಿಂದ ಜನದಟ್ಟನೇ ಮತ್ತು ವಾಹನ ಸಂಚಾರ ಅತ್ಯಧಿಕವಾಗಿರುತ್ತದೆ. ಪ್ರತಿ ನಿತ್ಯ ಸಾವಿರಾರು ವಾಹನ ಸವಾರರು ಮತ್ತು ಬೈಕ್ ಸವಾರರು ಇದೇ ಮಾರ್ಗದಲ್ಲಿ ಸಂಚರಿಸುವುದರಿಂದ ಯಾವ ಕ್ಷಣದಲ್ಲಾದರೂ ಹರಿದು ಬಿದ್ದು ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದ್ದು, ಪ್ರಾಣಾಪಾಯಕ್ಕೆ ತೂಗು ಕತ್ತಿಯಂತೆ ಜೋತಾಡುತ್ತಿರುವ ಪ್ಲೆಕ್ಷಗಳನ್ನು ಕೂಡಲೆ ತೆರವುಗೊಳಿಸಬೇಕು ಎಂದು ಸಾರ್ವಜನಿಕರ ಪರವಾಗಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ತೋಡಕರ ಒತ್ತಾಯಿಸಿದ್ದಾರೆ.
===========
ಪುರಸಭೆಯಿಂದ ಅನುಮತಿ ಪಡೆದುಕೊಂಡು ಅಳವಡಿಸಲಾಗಿರುವ ಫ್ಲೆಕ್ಸ್ ಗಳ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಯವರು ಮಾಡುತ್ತಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹರಿದಿರುವ ಫ್ಲೆಕ್ಸ್ ಗಳನ್ನು ತೆರವುಗೊಳಿಸಲು ಸೂಚಿಸುತ್ತೇನೆ.