ವ್ಯಕ್ತಿತ್ವ ವಿಕಸನಕ್ಕೆ ಮಾನವೀಯತೆ ಸಂಸ್ಕಾರ ಬಹಳ ಮುಖ್ಯ: ಸಾಹಿತಿ ಪ್ರೊ. ಎ.ಎಚ್. ಕೊಳಮಲಿ
ವಿಜಯಪುರ,ಸೆ.1:ಭಾರತ ದೇಶವು ವೈಚಾರಿಕತೆ, ಸೈದ್ಧಾಂತಿಕತೆ, ಧಾರ್ಮಿಕ, ಆಧ್ಯಾತ್ಮಿಕತೆಯ ಕ್ಷೇತ್ರದ ಪುಣ್ಯದ ನೆಲವಾಗಿದೆ. ಇಲ್ಲಿ ವಚನಗಾರರು, ದಾಸರು, ಕವಿಪುಂಗರು, ತತ್ವಪದಗಾರರು, ಕಾಲಜ್ಞಾನಿಗಳು, ಒಳ್ಳೆ ಸಂಸ್ಕಾರವನ್ನ ನೀಡಿ ಜಗತ್ತಿನಲ್ಲಿಯೇ ಮಾದರಿಯ ರಾಷ್ಟ್ರವನ್ನಾಗಿ ಮಾಡಿದ್ದಾರೆ. ನಮ್ಮ ದೇಶದಲ್ಲಿ ದೊರೆಯುವಂತಹ ಸಂಸ್ಕಾರ ಬೇರೆಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಜಾನಪದ ವಿದ್ವಾಂಸ ಸಾಹಿತಿ ಪೆÇ್ರ. ಎ. ಎಚ್. ಕೊಳಮಲಿ ಹೇಳಿದರು.
ನಗರದ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪೂರ್ವ ಪ್ರಾಥಮಿಕ ಪಬ್ಲಿಕ್ ಶಾಲೆಯಲ್ಲಿ ನಡೆದ ‘ಸಂಸ್ಕಾರ ಸುಧೆ’ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಪಾಲಕ-ಬಾಲಕ-ಶಿಕ್ಷಕ ತ್ರಿಭುಜಗಳಲ್ಲಿ ಸಂಸ್ಕಾರದ ಮೌಲ್ಯ ಎಂಬ ವಿಷಯದ ಕುರಿತು ಬಹಳ ಮಾರ್ಮಿಕವಾಗಿ ವಿಶೇಷ ಉಪನ್ಯಾಸವನ್ನು ನೀಡಿದರು.
ಮಾನವರಾಗಿ ಜನಿಸಿದ ನಾವುಗಳೆಲ್ಲ ಮಾನವರಾಗಿ ಬದುಕಬೇಕಾದರೆ ಒಳ್ಳೆಯ ಸಂಸ್ಕಾರವಂತರಾಗಬೇಕು. ಇಂದಿನ ಯುವ ಪೀಳಿಗೆಯಲ್ಲಿ ಸಂಸ್ಕಾರ ಮತ್ತು ಮಾನವೀಯತೆಯ ಕೊರತೆ ಎದ್ದು ಕಾಣುತ್ತದೆ. ಯುವ ಜನಾಂಗ ಭಾರತ ದೇಶದ ಪರಂಪರೆಯನ್ನು ಅರಿಯಬೇಕು. ಸಂಸ್ಕಾರಯುತವಾದ ಜೀವನವನ್ನು ನಡೆಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಶಿಕ್ಷಕ ಸಾಹಿತಿ ಆರ್. ಎಸ್. ಪಟ್ಟಣಶೆಟ್ಟಿ ಮಾತನಾಡಿ, ಮೌಲ್ಯಯುತವಾದ ಜೀವನವೇ ಪರಮ ಶ್ರೇಷ್ಠ. ಕೆಲವೇ ದಿನಗಳ ಹಿಂದೆ ಪ್ರಾರಂಭವಾದ ಕನಕ ಪೂರ್ವ ಪ್ರಾಥಮಿಕ ಪಬ್ಲಿಕ್ ಶಾಲೆಯು ಶಿಕ್ಷಣ ಕ್ಷೇತ್ರದಲ್ಲಿ ಮಿಂಚಿನ ಸಂಚಲನವನ್ನು ಮಾಡುತ್ತಿದೆ. ಶಿಕ್ಷಣದ ಜೊತೆಗೆ ನಿರಂತರವಾಗಿ ಮಕ್ಕಳಿಗೆ ಅμÉ್ಟೀ ಅಲ್ಲದೆ ಪಾಲಕ, ಶಿಕ್ಷಕ ಸಮೂಹಕ್ಕೂ ಕೂಡ ಸಂಸ್ಕಾರದ ಅರಿವು ಕೊಡುವುದರ ಜೊತೆಗೆ ಪ್ರತಿ ತಿಂಗಳು ಸಂಸ್ಕಾರ ಸುಧೆ ಎಂಬ ಅರ್ಥಪೂರ್ಣವಾದ ಕಾರ್ಯಕ್ರಮ ಆಚರಿಸುತ್ತಿರುವುದು ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು ಎಂದು ಹೇಳಿದರು.
ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಯಪ್ರಭು ಕೊಳಮಲಿ ಮಾತನಾಡಿ, ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ ಮತ್ತು ಮೌಲ್ಯವನ್ನು ಕೊಡಲೆಂದೇ ಸ್ಥಾಪನೆಗೊಂಡಿರುವ ನಮ್ಮ ಸಂಸ್ಥೆ ಇಂದು ಶಿಕ್ಷಣ ಕ್ಷೇತ್ರದಲ್ಲಿ ಹೊಸತನದ ಕನಸನ್ನು ಹೊತ್ತು ಮುನ್ನಡೆಯುತ್ತಿದೆ ಎಂದು ಹೇಳಿದರು.
ಸಿದ್ದಪ್ಪ ಪೂಜಾರಿ, ಅಮಸಿದ್ದ ಬಂಡಿವಡ್ಡರ, ಬಸವರಾಜ ಪಟೇದ, ಸಂತೋಷ ಜಿಂಗಾಡೆ, ಮಿಯಾಸಾಬ, ಸಂಸ್ಥೆಯ ಆಡಳಿತ ಮಂಡಳಿ ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿ, ಪಾಲಕ ಸಮೂಹ ಉಪಸ್ಥಿತರಿದ್ದರು.
ಕುಮಾರಿ ಅರುಂಧತಿ ಒಡೆಯರ್, ಅನುರಾಧ ಬಿರಾದಾರ ಪ್ರಾರ್ಥಿಸಿದರು. ಶಿಕ್ಷಕಿ ಸುಧಾರಾಣಿ ಸ್ವಾಗತಿಸಿ ನಿರೂಪಿಸಿದರು.