ಸೋಲು ಗೆಲವು ಸಹಜ ಕ್ರೀಡಾ ಸ್ಪೂರ್ತಿಯೊಂದಿಗೆ ಆಟವಾಡಬೇಕು:ಕಂದಕೂರ
ಸೈದಾಪುರ:ಸೆ.1:ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಹೀಗಾಗಿ ಯಾರೊಬ್ಬರೂ ಪ್ರತಿμÉ್ಠಯಾಗಿ ತೆಗೆದುಕೊಳ್ಳದೆ ಕ್ರೀಡಾ ಸ್ಪೂರ್ತಿಯೊಂದಿಗೆ ಆಟವಾಡಬೇಕು. ಶಿಕ್ಷಣ ಕೇವಲ ಅಕ್ಷರ ಕಲಿಕೆಗೆ ಸೀಮಿತವಾಗದೆ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ತಿಳಿಸಿದರು.
ಪಟ್ಟಣದ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಸೈದಾಪುರ ಹಾಗೂ ಬಳಿಚಕ್ರ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ವರ್ಷದ ಕ್ರೀಡೆಯಲ್ಲಿ ತೊಂದರೆ ಆಗಿದೆ ಎಂದು ಇಲ್ಲಿನ ದೈಹಿಕ ಶಿಕ್ಷಕರು ನನಗೆ ತಿಳಿಸಿದ ಹಿನ್ನಲೆಯಲ್ಲಿ ಎಸ್ಪಿ ಅವರಿಗೆ ಮಾತನಾಡಿ ಭದ್ರತೆ ನೀಡುವಂತೆ ತಿಳಿಸಿದ್ದೇನೆ. ಕ್ರೀಡಾಭಿಮಾನಿಗಳು ಯಾವುದೇ ಕಾರಣಕ್ಕೆ ಗಲಾಟೆ ಮಾಡದೆ ಮಕ್ಕಳಿಗೆ ಪೆÇ್ರೀತ್ಸಾಹ ನೀಡಬೇಕು. ಉತ್ತಮ ಪ್ರದರ್ಶನ ನೀಡುವ ಕ್ರೀಡಾಸ್ಪರ್ಧಿಗಳು ಸಾಧನೆ ಮಾಡುವಂತಾಗಲಿ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಗೌಡ ಮಾತನಾಡಿ, ಶಿಕ್ಷಕರು ಮತ್ತು ನಿರ್ಣಾಯಕರು ಕ್ರೀಡಾಕೂಟಗಳಲ್ಲಿ ಸ್ವಪ್ರತಿಷ್ಠೆಯನ್ನು ಬಿಟ್ಟು ಉತ್ತಮ ಪ್ರತಿಭಾವಂತ ಕ್ರೀಡಾಪಟವನ್ನು ಆಯ್ಕೆ ಮಾಡಿ ಕ್ರೀಡಾ ಮನೋಭಾವವನ್ನು ಮೆರೆಯಬೇಕು ಎಂದು ಹೇಳಿದರು. ಇದಕ್ಕೂ ಮುನ್ನ ದೈಹಿಕ ಶಿಕ್ಷಕಿ ಮಾಳಮ್ಮ ಅವರ ನೇತೃತ್ವದಲ್ಲಿ ಪಥ ಸಂಚಲನ ಜರುಗಿತು.
ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಮಾಡಿ : ಕ್ರೀಡಾಪಟುಗಳಿಗೆ ಶಿಸ್ತು ಮುಖ್ಯ ಇದಕ್ಕಾಗಿ ಕ್ರೀಡಾಕೂಟಕ್ಕೆ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕರು ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಕ್ರೀಡಾ ಸಮವಸ್ತ್ರ ಮಾಡಬೇಕು ಇದರಿಂದ ಚೆನ್ನಾಗಿ ಕಾಣುತ್ತದೆ. ಇದಕ್ಕಾಗಿ ದಾನಿಗಳಿಂದ ದೇಣಿಗೆ ಪಡೆಯಿರಿ ಸಾಧ್ಯವಾಗದಿದ್ದಲ್ಲಿ ನನ್ನನ್ನು ಸಂಪರ್ಕಿಸಿ ನಾನೇ ಕೊಡಿಸುತ್ತೇನೆ ಎಂದು ಶಾಸಕ ಶರಣಗೌಡ ಕಂದಕೂರ ಅವರು ಶಿಕ್ಷಕರಿಗೆ ಸಲಹೆ ನೀಡಿದರು.