ಪ್ರೇಮ ನಿಕೇತನ ಪ್ರೌಢ ಶಾಲೆಯಲ್ಲಿ ವಚನ ದಿನ
ಇಂಡಿ :ಸೆ.1: ಶ್ರೀ ಪ್ರೇಮ ನಿಕೇತನ ಶಾಲೆಯು ಮಕ್ಕಳಿಗೆ ಅತ್ಯಂತ ಶಿಸ್ತು ಸಂಸ್ಕಾರ ಹಾಗೂ ಒಳ್ಳೆಯ ಪ್ರಜೆಗಳನ್ನಾಗಿ ಮಾಡುವ ಶಾಲೆ ಇದಾಗಿದೆ ಎಂದು ಎಚ್ ಎಸ್ ಗೊಟ್ಯಾಳ ಹೇಳಿದರು.
ತಾಲೂಕಿನ ಅಂಜುಟಗಿ ಗ್ರಾಮದ ಶ್ರೀ ಪ್ರೇಮನಿಕೇತನ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾದ ತಾಲೂಕ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳೀ ವೇದಿಕೆ ಸಹಯೋಗ ಯುವ ಘಟಕ ಇಂಡಿ ವತಿಯಿಂದ ಪರಿಷತ್ತಿನ ಸಂಸ್ಥಾಪನಾ ದಿನ ಹಾಗೂ ಡಾ.ಲಿಂ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 109ನೇ ಜಯಂತೋತ್ಸವ ನಿಮಿತ್ಯ ವಚನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂತಹ ಶಾಲೆಯಲ್ಲಿ ಕಲಿತ ಮಕ್ಕಳು ಉನ್ನತ ದರ್ಜೆಯಲ್ಲಿ ಇದ್ದು ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ ಎಂದರು. ಪ್ರಸ್ತಾವಿಕವಾಗಿ ಶಸಾಪ ಅಧ್ಯಕ್ಷರಾದ ಶ್ರೀ ಬಿ ಎಸ್ ಪಾಟೀಲ್ ಇವರು ಸಾಹಿತ್ಯದ ಧ್ಯೇಯ ಉದ್ದೇಶಗಳನ್ನು ಕುರಿತು ಮಾತನಾಡಿ ಪರಿಷತ್ತು ಪ್ರತಿ ತಿಂಗಳು ದತ್ತಿಉಪನ್ಯಾಸ ಮಾಡುವುದು ಹಾಗೂ ಅವರ ಸ್ಮರಣೆ ಮಾಡುವುದು ಪರಿಷತ್ತಿನ ಮುಖ್ಯ ಗುರಿಯಾಗಿದೆ ಎಂದರು, ಇದೇ ಸಂದರ್ಭದಲ್ಲಿ ಕದಳಿ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಗಂಗಾ ಗಲಗಲಿ ಲಿಂಗೈಕ್ಯ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಕುರಿತು ಉಪನ್ಯಾಸ ನೀಡುತ್ತಾ ಸ್ವಾಮೀಜಿಯವರು ಜೆ ಎಸ್ ಎಸ್ ಸಂಸ್ಥೆಯನ್ನು ಸ್ಥಾಪಿಸಿ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡುವುದರ ಜೊತೆಗೆ ಸಾಮಾಜಿಕ ಚಿಂತಕರಾಗಿ ಹೊರ ತರುವ ಕೆಲಸವನ್ನು ಸಂಸ್ಥೆ ಮಾಡುತ್ತದೆ ಸ್ವಾಮೀಜಿಯವರು 24ನೇ ಪೀಠಾಧಿಪತಿಯಾಗಿ ಒಳ್ಳೆಯ ರೀತಿಯಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು ಅವರ ಸೇವೆ ಅಮರವಾಗಿದೆ ಆದ್ದರಿಂದ ನಾವೆಲ್ಲರೂ ಅವರ ಜನ್ಮ ದಿನಾಚರಣೆಯನ್ನು ಬಹಳ ಶ್ರದ್ಧೆಯಿಂದ ಆಚರಿಸುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷರಾದ ಶ್ರೀ ಸದಾನಂದ ಈರನಕೇರಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಮಕ್ಕಳ ಸಾಹಿತ್ಯವು ಮಕ್ಕಳಲ್ಲಿರುವ ಕಲೆ ಸಾಹಿತ್ಯವನ್ನು ಗುರುತಿಸಿ ಹೊರ ತರುವ ಕೆಲಸವನ್ನು ಮಾಡುತ್ತದೆ ಆದ್ದರಿಂದ ಮಕ್ಕಳು ಚುಟುಕು ಬರೆಯುವುದು ಕಾವ್ಯ ಬರೆಯುವುದು ರೂಡಿಸಿಕೊಂಡು ಒಳ್ಳೆಯ ಲೇಖಕರು ಆಗಬೇಕೆಂದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಜೋಗುರ್ ಸರ್ ಅವರು ಸಂಸ್ಥೆಯ ಕುರಿತು ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಮೇತ್ರಿ ಸರ್, ಉಪಸ್ಥಿತರಿದ್ದರು ಹಾಗೂ ಶ್ರೀ ಪ್ರೇಮ ನಿಕೇತನ ಸಂಸ್ಥೆಯ ಆಡಳಿತ ಮಂಡಳಿಯವರು ಮತ್ತು ಮುದ್ದು ವಿದ್ಯಾರ್ಥಿನಿಯರು ಹಾಗೂ ಕದಳಿ ವೇದಿಕೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಪ್ರಾರ್ಥನಾ ಗೀತೆಯನ್ನು ಮಕ್ಕಳು ಹಾಡಿದರು ಕಾರ್ಯಕ್ರಮದ ಸ್ವಾಗತವನ್ನು ಶ್ರೀ ಮಠಪತಿ ಸರ್ ಮಾಡಿದರು, ಸನ್ಮಾನ ಕಾರ್ಯಕ್ರಮವನ್ನು ಶ್ರೀ ಸತೀಶ್ ಈಶ್ವರ್ ಗೊಂಡ ಹಾಗೂ ವಂದನಾರ್ಪಣೆಯನ್ನು ಶ್ರೀಮತಿ ಭವಾನಿ ಮೇಡಂ ಅವರು ಮಾಡಿದರು. ಇದೇ ಸಂದರ್ಭದಲ್ಲಿ ವಚನ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ನೀಡಲಾಯಿತು .