ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಪಾಲಿಸಿ, ಕೋಮು ಸಾಮರಸ್ಯದಿಂದ ಹಬ್ಬಗಳು ಆಚರಿಸಿ: ಇಲ್ಲದಿದ್ದರೇ ಕಠಿಣ ಕ್ರಮ: ಪಿಎಸ್‍ಐ ನಿಂಗಪ್ಪ ಪೂಜಾರಿ ಎಚ್ಚರಿಕೆ
ಆಲಮೇಲ:ಸೆ.1:ಪ್ರತಿಯೊಂದು ಹಬ್ಬಗಳನ್ನು ಆಯಾ ಸಮುದಾಯದವರು ಸಾಮರಸ್ಯದಿಂದ,ಸರ್ಕಾರದ ಆದೇಶದೊಂದಿಗೆ ಕಟ್ಟುನಿಟ್ಟಾಗಿ ಪಾಲಿಸಬೇಕು,ಯಾರಾದರೂ ಕಾನೂನು ಉಲಂಘಿಸಿದರೆ ಅಂತವರ ಮೇಲೆ ಮುಲಾಜಿ ಇಲ್ಲದೆ ಕಠಿಣ ಕ್ರಮ ಜರುಗಿಸಲಾಗುವದು ಎಂದು ಸಿಪಿಐ ನಾನಾಗೌಡ ಪಾಟೀಲ ಎಚ್ಚರಿಕೆ ನಿಡಿದರು,
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಗುರುವಾರ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ಯ್ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು
ಪ್ರತಿ ವರ್ಷವೂ ಕೂಡಾ ಪಟ್ಟಣದಲ್ಲಿ ಹಿಂದು-ಮುಸ್ಲೀಂ ಬಾಂಧವರು ಜೊತೆಯಾಗಿ ಹಬ್ಬಗಳನ್ನು ಆಚರಿಸುತ್ತಿರುವದನ್ನು ಕೇಳಿ ಬಹಳ ಖುಷಿ ತಂದಿದೆ, ಇದೇ ತರಹ ಎಲ್ಲರೂ ಹಬ್ಬಗಳನ್ನು ಸಹೋದರತ್ವದೊಂದಿಗೆ ಆಚರಿಸಿ ಪಟ್ಟಣದಲ್ಲಿ ಶಾಶ್ವತವಾಗಿ ಸಾಮರಸ್ಯ ಕಾಯ್ದುಕೊಳ್ಳಬೇಕು. ಪ್ರತಿಯೊಂದು ಪಟ್ಟಣ ಹಾಗೂ ಗ್ರಾಮಗಳಲ್ಲಿ ಇದೇ ತರಹ ಎಲ್ಲರೂ ಜೊತೆಗೂಡಿ ಎಲ್ಲ ಹಬ್ಬಗಳು ಆಚರಿಸಿ ಮಾದರಿಯಾಗಬೇಕು, ಹಬ್ಬದ ವಾತಾವರಣವನ್ನು ಕಲುಷಿತಗೊಳಿಸಲು ಯತ್ನಿಸುವ ಶಕ್ತಿಗಳಿಗೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ, ಅದಕ್ಕಾಗಿ ಕಾನೂನನ್ನು ಯಾರು ಗೌರವಿಸುತ್ತಾರೋ,ಅವರನ್ನು ನಾವು ಗೌರವಿಸುತ್ತೆವೆ ಎಂದರು.
ನಂತರ ಪಿಎಸ್ ಐ ಅರವಿಂದ ಅಂಗಡಿ ಮಾತನಾಡಿ ಗಣೇಶೋತ್ಸವ ಮಂಡಳಿಯವರು ಆಯಾ ಪ್ರತಿಷ್ಠಾಪನಾ ಸ್ಥಳಗಳನ್ನು ನಮೂದಿಸಿ ಜನತೆಯ ಸಂಚಾರಕ್ಕೆ ಅಡತಡೆಯಾಗದಂತೆ ನೋಡಿಕೊಳ್ಳಬೇಕು, ಮಣ್ಣಿನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು,ಪಿಓಪಿಯಿಂದ ತಯಾರಿಸಿದ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ,ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಆಯಾ ಮಂಡಳಿಯವರು ಸ್ವಯಂ ಸೇವಕರನ್ನು ನೇಮಿಸಿ,ಯಾರಿಗೂ ತೊಂದರೆಯಾಗದಂತೆ ನೋಡೊಕೊಳ್ಳಬೇಕು, ಸರ್ಕಾರದ ನಿಯಮಗಳನ್ನು ಗಣೇಶ ಮಂಡಳಿಯವರು ಕಡ್ಡಾಯವಾಗಿ ಪಾಲಿಸಿ, ಪರವಾನಗಿಯೊಂದಿಗೆ ವಿದ್ಯುತ್ ಸರಬರಾಜು ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸುರೇಶ ಚಾವಲರ್ ಹಾಗೂ ನಾಗರೀಕ ವೇದಿಕೆಯ ರಮೇಶ ಭಂಟನೂರ,ಮಲಘಾಣದ ಯಶವಂತ್ರಾಯಗೌಡ ರೂಗಿ,ಪ್ರಭು ವಾಲೀಕಾರ ಅಯೂಬ ದೇವರಮನಿ ಮಾತನಾಡಿದರು.
ಸಾಂತಿ ಸಭೆಯಲ್ಲಿ ಈ ಬಾರಿಯೂ ಕೂಡಾ ಮುಸ್ಲೀಂ ಸಮಾಜದ ಮಹಿಬೂಬ ಮಸಳಿ ಇವರನ್ನು ಪಟ್ಟಣದ ಹಿರಿಯರು ಪುನ; ಗಣೇಶ ಮಹಾಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು.
ಸಭೆಯಲ್ಲಿ ಜಿಪಂ ಸದಸ್ಯ ಬಿ.ಆರ್.ಯಂಟಮನ,ಮಾಜಿ ತಾಪಂ ಸದಸ್ಯ ಬಸವರಾಜ ತೆಲ್ಲೂರ,ಇಂಜಿನೀಯರ ಶ್ರೀಶೈಲ ಮಠಪತಿ, ಪಪಂ ಸದಸ್ಯರು ಹಾಗೂ ಎಲ್ಲ ಸಮಾಜದ ಹಿರಿಯರು, ಮುಖಂಡರರು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು,