ಚಿತ್ತಾಪುರದಲ್ಲಿ ಎಚ್ ಐ ವಿ ಏಡ್ಸ್ ಕುರಿತು ಜನಜಾಗೃತಿ
ಚಿತ್ತಾಪುರ:ಸೆ.1: ಪಟ್ಟಣದ ಲಾಡ್ಜಿಂಗ್ ಕ್ರಾಸ್, ಭುವನೇಶ್ವರಿ ವೃತ್ತ, ಬಸ್ ನಿಲ್ದಾಣದಲ್ಲಿ ಬುದುವಾರ ಎಚ್ ಐ ವಿ ಏಡ್ಸ್ ಕುರಿತು ಬೀದಿನಾಟಕದ ಮೂಲಕ ಜನಜಾಗೃತಿ ನಡೆಸಲಾಯಿತು.
ಕರ್ನಾಟಕ ರಾಜ್ಯ ಏಡ್ಸ್ ಪ್ರೆವೆನಷನ್ ಸೊಸೈಟಿ ಬೆಂಗಳೂರು ಹಾಗೂ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಕಲಬುರ್ಗಿ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ಪ್ರತಿ ಬಂಧಕ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಾಯಿ ಜನಾಜಾಗೃತಿ ಕಲಾಸಂಘ ಆಳಂದ ಇವರ ವತಿಯಿಂದ ಎಚ್ ಐ ವಿ ಏಡ್ಸ್ ಕುರಿತು ಜನಜಾಗೃತಿ ನಡೆಯಿತು. ಈ ಸಂದರ್ಭದಲ್ಲಿ ಐಸಿಟಿಸಿ ಕೌನ್ಸಿಲರ್ ಸುಜ್ಞಾನಿ, ಶ್ರೀ ಸಾಯಿ ಜನಜಾಗೃತಿ ಕಲಾಸಂಘದ ಅಧ್ಯಕ್ಷ ಗಂಗೂಬಾಯಿ ಕೌಲಗಿ, ರೇಖಾ ನರಗುಂದ, ಸಾವಿತ್ರಿ ಭಂಡಾರಿ ಗುರುರಾಜ್ ಮುಗಳಿ, ಕಲಾವಿದರಾದ ಮಲ್ಲಿಕಾರ್ಜುನ್ ಕಾನಪುರ್, ಚಂದ್ರಕಾಂತ್ ಆಳಂದ, ಮಹಾಂತೇಶ್ ಆಳಂದ, ಶಿವಪ್ಪ ಮನಲ್ಲಿ, ಚೆನ್ನವೀರ ಖಾನಾಪುರ್, ಸಾವಿತ್ರಿ ಜಮಾದಾರ್, ಲಕ್ಷ್ಮಿ ಆಳಂದ, ಮಹಾಂತೇಶ್ ಇದ್ದರು.