ಎಸ್ ಕೆ ಕಾಂತಾ ಅವರಿಗೆ ಗೌರವ ಸನ್ಮಾನ
ಕಲಬುರಗಿ:ಸೆ.1:ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘವು ಸುಮಾರು ಒಂದುವರೆ ದಶಕ ಗಳಿಂದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ತಾಲೂಕ, ಜಿಲ್ಲಾ, ರಾಜ್ಯಮಟ್ಟದ ಕಾರ್ಯಕ್ರಮ ಹಮ್ಮಿಕೊಂಡು ಹಲವಾರು ಮಹನೀಯರಿಗೆ ಪ್ರಶಸ್ತಿ ನೀಡುವುದರೊಂದಿಗೆ ಸಮಾಜ ಸೇವಕರನ್ನು ಹಾಗೂ ವಿದ್ಯಾರ್ಥಿ ಪ್ರತಿಭೆಗಳನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ನಿರಂತರವಾಗಿ ಮಾಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಹೇಳಿದರು. ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳು ಉಳಿಯಬೇಕೆಂಬ ದೃಷ್ಟಿಯಿಂದ ನಮ್ಮ ನಡಿಗೆ ಹಳ್ಳಿಯ ಸರಕಾರಿ ಶಾಲೆಯ ಕಡೆಗೆ ಸರಣಿ ಕಾರ್ಯಕ್ರಮ ಹಮ್ಮಿಕೊಂಡು ಶಾಲೆಗಳ ಮೂಲಭೂತ ಸಮಸ್ಯೆಗಳು ಪರಿಹರಿಸುವ ಕಾರ್ಯಕ್ರಮ ಹಮ್ಮಿಕೊಂಡು ತಮ್ಮೆಲ್ಲರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿರುವುದು ಹೆಮ್ಮೆಯ ವಿಷಯ. ಅಲ್ಲದೆ ನೂರಾರು ಸಮಾಜಮುಖಿ ಕಾರ್ಯಕ್ರಮವನ್ನು ಮಾಡುವುದರೊಂದಿಗೆ ಉತ್ತಮವಾದ ಸಮಾಜ ಕಟ್ಟುವ ನಿಟ್ಟಿನಲ್ಲಿ ಸಂಘವು ಪ್ರಯತ್ನಿಸುತ್ತಿದೆ. ಒಳ್ಳೆಯ ಜನರನ್ನು ಹಾಗೂ ನಿಸ್ವಾರ್ಥ ಕಾರ್ಯ ಮಾಡುವವರನ್ನು, ಸಮಾಜ ಸೇವಕರನ್ನು, ಹೋರಾಟಗಾರರನ್ನು ಸಮಾಜಕ್ಕೆ ಪರಿಚಯಯಿಸುವ ನಿಟ್ಟಿನಲ್ಲಿ ದಿನಾಂಕ 3-9-2024 ರಂದು ಮಂಗಳವಾರ ಬೆಳಗ್ಗೆ 10:45ಕ್ಕೆ ಕಲಬುರಗಿ ನಗರದ ಶಹಾಬಜಾರದಲ್ಲಿರುವ ಆರಾಧನಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚಿಗೆ ಡಾ. ದೇವರಾಜ ಅರಸರವರ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಮಾಜಿ ಸಚಿವರು ಹಾಗೂ ಜನಪರ ಹೋರಾಟಗಾರರಾದ ಎಸ್ ಕೆ ಕಾಂತಾ ಅವರಿಗೂ ಹಾಗೂ ಇತರರಿಗೂ ಗೌರವ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕಲಬುರಗಿ ನಗರ ಪೆÇಲೀಸ್ ಆಯುಕ್ತರಾದ ಸನ್ಮಾನ್ಯ ಡಾ.ಶರಣಪ್ಪ ಢಗೆ ಅವರು ಸಮಾರಂಭ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತಾಯ ಎಸ್. ಅಟ್ಟೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಗುಪ್ತಲಿಂಗ ಪಾಟೀಲ, ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ ಯಡ್ರಾಮಿ, ಹಿರಿಯ ಸಾಹಿತಿಗಳಾದ ಡಾ.ಸ್ವಾಮಿರಾವ ಕುಲಕರ್ಣಿ, ಪತ್ರಕರ್ತರು ಹಾಗೂ ಸಾಹಿತಿಗಳಾದ ಮಹಿಪಾಲ ರೆಡ್ಡಿ ಮುನ್ನೂರ, ಆರಾಧನಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಚೇತನಕುಮಾರ ಗಾಂಗಜಿ ಆಗಮಿಸುವರು.
ಇದೆ ಸಂದರ್ಭದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕøತರಾದ ಉಚ್ಚ ನ್ಯಾಯಾಲಯದ ಹೆಚ್ಚುವರಿ ಅಡ್ವಕೇಟ್ ಜನರಲ್ ಡಾ.ಅರ್ಚನಾ ತಿವಾರಿ, ಹೋರಾಟಗಾರರಾದ ಡಾ.ಲಕ್ಷ್ಮಣ ದಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ ಅವರಿಗೆ ವಿಶೇಷವಾಗಿ ಗೌರವಿಸಲಾಗುವುದು ಎಂದು ಹೇಳಿದರು. ಸಂಘದ ಕಾರ್ಯದರ್ಶಿ ನಂದೇಶ್ವರ ಪಾಟೀಲ, ಸಹ ಕಾರ್ಯದರ್ಶಿ ಮಲಕಾರಿ ಪೂಜಾರಿ ಸೇರಿದಂತೆ ಇತರರಿದ್ದರು.