ಅ.೪ ರಂದು ಕಲಾಕೃತಿಗಳ ಸಮೂಹ‌ಕಲಾ ಪ್ರದರ್ಶನದ ಉದ್ಘಾಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಅ.೩: ವಿಶ್ವವಿದ್ಯಾನಿಲಯ ದೃಶ್ಯ ಕಲಾ ಮಹಾವಿದ್ಯಾಲಯದ ಅರವತ್ತು ವರ್ಷಗಳ ಕಲಾ ಪಯಣ 1964-2024 ಅನ್ವೇಷಣೆಯ ಪಥದಲ್ಲಿ ಕಾರ್ಯಕ್ರಮ ಅಕ್ಟೋಬರ್ 4ರಿಂದ 6ರವರೆಗೆ ದಾವಣಗೆರೆಯ ವಿಶ್ವವಿದ್ಯಾನಿಲಯ ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ಬೋಧಕರಾದ ದತ್ತಾತ್ರೇಯ ಎನ್.ಭಟ್ಟ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಅ. 4ರಂದು ಬೆಳಿಗ್ಗೆ 11ಕ್ಕೆ ಕಲಾ ಪ್ರದರ್ಶನದ ಉದ್ಘಾಟನೆಯನ್ನು ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿಗ ಪ್ರೊ.ಬಿ.ಡಿ.ಕುಂಬಾರ ನೆರವೇರಿಸುವರು. ಇದೇ ವೇಳೆ ವರ್ಣ ಚಿತ್ರಗಳ‌ ಸಮೂಹ ಪ್ರದರ್ಶನ ಮತ್ತು ಶ್ರೇಷ್ಠ ಕಲಾ ಪ್ರಶಸ್ತಿಗೆ ಚಾಲನೆ ನೀಡಲಾಗುವುದು. ಕಲಾ ಪ್ರಶಸ್ತಿಯನ್ನು ಕಲಾ ಪ್ರೇಮಿ ದಿ.ಶ್ರೀ. ಬಿದರೆ ನಾರಾಯಣ ರಾವ್ ಅವರ ಸವಿನೆನಪಿಗಾಗಿ  ವಾರ್ಷಿಕ ಪ್ರಶಸ್ತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಹಿರಿಯ ಕಲಾವಿದ ಎ.ಮಹಾಲಿಂಗಪ್ಪ, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಆಶಾರಾಣಿ ನಡೋಣಿ, ಡಾ.ವಿಠ್ಠಲ ರೆಡ್ಡಿ ಎಫ್. ಚುಳಕಿ, ದಾವಣಗೆರೆಯ ವಿಶ್ವವಿದ್ಯಾನಿಲಯ ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜೈರಾಜ್ ಚಿಕ್ಕಪಾಟೀಲ್, ಶ್ರೀನಾಥ್ ಬಿದರೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.ಅಕ್ಟೋಬರ್ 4ರಂದು ಮಧ್ಯಾಹ್ನ 12ಕ್ಕೆ ದಿ.ಶ್ರೀ. ಬಿದರೆ ನಾರಾಯಣ ರಾವ್ ಅವರ ಸವಿನೆನಪಿಗಾಗಿ  ವಾರ್ಷಿಕ ಪ್ರಶಸ್ತಿ ನೀಡಲಾಗುವುದು. 2.30ಕ್ಕೆ ಭಾವಚಿತ್ರ ಕಲೆಯ ಪ್ರಾತ್ಯಕ್ಷಿಕೆ ನಡೆಸಲಾಗುವುದು ಎಂದರು.ಅ.5ರಂದು ದಿ ಆರ್ಟ್, ಯುಎಕ್ಸ್ ಅಂಡ್ ಡಿಸೈನ್ ಇನ್ ಎ ಐಎ- ಡ್ರಿವನ್ ಫ್ಯೂಚರ್ ಕುರಿತು ಮಾಹಿತಿ ನೀಡುವರು. ಇದೇ ರೀತಿ  ಕಲಾ ವಿದ್ಯಾರ್ಥಿಗಳಿಗೆ ವಿವಿಧ ಉಪನ್ಯಾಸ, ತರಬೇತಿ ನೀಡಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಡಾ.ಬಾಬು ರಾವ್ ನಡೋಣಿ, ಆಶಾರಾಣಿ ನಡೋಣಿ, ‌ಶ್ರೀನಾಥ್ ಬಿದರೆ, ಕುಬೇರಪ್ಪ ಇತರರು ಇದ್ದರು.