ಅ.೫ ರಂದು ಹಿಂದೂ ಮಹಾಗಣಪತಿ ಟ್ರಸ್ಟ್ ನಿಂದ ಗಣೇಶನ‌ವಿಸರ್ಜನೆ; ನಾಳೆ ಬೈಕ್ ರ್ಯಾಲಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಅ.೩; ಸಾರ್ವಜನಿಕ ಹಿಂದೂ ಮಹಾ ಗಣಪತಿ ಟ್ರಸ್ಟ್ ವತಿಯಿಂದ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಅ. 5 ರಂದು ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಜೊಳ್ಳಿಗುರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ಅ.೪ ರ ನಾಳೆ ಬೈಕ್ ರ್ಯಾಲಿ ಹಮ್ಮಿಕೊಳ್ಳ ಲಾಗಿದೆ ಬೆಳಗ್ಗೆ 11 ಕ್ಕೆ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಿಂದ ಪ್ರಾರಂಭ ಆಗುವ ರ್ಯಾಲಿ ಮಹಾನಗರ ಪಾಲಿಕೆ ರಸ್ತೆ, ಗಡಿಯಾರ ಕಂಬ, ಕಾಳಿಕಾದೇವಿ ರಸ್ತೆ, ದುರ್ಗಾಂಬಿಕಾ ದೇವಿ ರಸ್ತೆ, ಹೊಂಡದ ವೃತ್ತ, ಅರುಣ ಚಿತ್ರಮಂದಿರ ವೃತ್ತ, ಎಂಸಿಸಿ ಎ ಬ್ಲಾಕ್, ವಿನೋಬ ನಗರ ಎರಡನೇ ಮುಖ್ಯ ರಸ್ತೆ, ವಿದ್ಯಾನಗರ, 60 ಅಡಿ ರಸ್ತೆ, ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ ರಸ್ತೆ, ಡಾಂಗೇ ಪಾರ್ಕ್, ಶಿವಪ್ಪಯ್ಯ ವೃತ್ತ, ಜಯದೇವ ವೃತ್ತದ ಮೂಲಕ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಮುಕ್ತಾಯವಾಗಲಿದೆ. ವಿವಿಧ ಜನಪ್ರತಿನಿಧಿಗಳು ಚಾಲನೆ ನೀಡುವರು ಎಂದು ತಿಳಿಸಿದರು.ಅ.೫ ರ ಬೆಳಗ್ಗೆ ೧೦.೩೦ ಕ್ಕೆ ಗಣೇಶ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಲಾಗುವುದು ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ,ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಂಸದರಾದ ಜಿ.ಎಂ ಸಿದ್ದೇಶ್ವರ್ ,ಮಾಜಿ ಸಚಿವರಾದ ಎಸ್ ಎ.ರವೀಂದ್ರನಾಥ್ ಸೇರಿದಂತೆ ಅನೇಕ‌ಮುಖಂಡರುಗಳು ಭಾಗವಹಿಸಲಿದ್ದಾರೆ.ನಗರದ ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾಗುವ ಮೆರವಣಿಗೆ ಎವಿಕೆ ರಸ್ತೆ,ಅಂಬೇಡ್ಕರ್ ವೃತ್ತ,ಜಯದೇವ ವೃತ್ತ,ಲಾಯರ್ ರಸ್ತೆ ಪಿ.ಬಿ ರಸ್ತೆ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದ ವರೆಗೆ ಬೃಹತ್‌ ಶೋಭಾ ಯಾತ್ರೆ ನಡೆಯಲಿದೆ.ನಂತರ ಜಿಲ್ಲಾಡಳಿತದ ಸಹಯೋಗದಲ್ಲಿ ಬಾತಿಕೆರೆಯಲ್ಲಿ ಗಣೇಶನ‌ ವಿಸರ್ಜನೆ ಮಾಡಲಾಗುವುದು ಶೋಭಾ ಯಾತ್ರೆಯಲ್ಲಿ ಚಂಡೆನಾದ,ಡ್ರಮ್ ಸೆಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ೧೦ ಕಲಾ ತಂಡಗಳು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಸೇರಿದಂತೆ ಐದು ಡಿಜೆ ವ್ಯವಸ್ಥೆ ಮಾಡಲಾಗಿದೆ.ಸುಮಾರು ಐದರಿಂದ ಆರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಯಿದೆ.ವಿಸರ್ಜನಾ ಮೆರವಣಿಗೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಂಟಿಂಗ್ಸ್ ,ಬಾವುಟ ಕಟ್ಟಲಾಗಿದೆ. ಬಸವಣ್ಣ, ವಾಲ್ಮೀಕಿ,ಕನಕದಾಸರು ಸೇರಿದಂತೆ ೧೧ ಕ್ಕೂ ಹೆಚ್ಚು ದಾರ್ಶನಿಕರ ಮೂರ್ತಿಯನ್ನು ಮೆರವಣಿಗೆ ಸಾಗುವ ಮಾರ್ಗದಲ್ಲಿ‌ ಪ್ರತಿಷ್ಠಾಪಿಸಲಾಗಿದೆ.ಶೋಭಾ ಯಾತ್ರೆಯಲ್ಲಿ ಯಾವುದೇ ರಾಜಕಾರಣಿಗಳು, ಚಿತ್ರನಟರು ,ವೈಯಕ್ತಿಕ ಬಾವುಟ ಹಾಗೂ ಬ್ಯಾನರ್ ಪ್ರದರ್ಶನ ಮಾಡದಂತೆ ಸೂಚನೆ ನೀಡಲಾಗಿದೆ ಎಂದರು.ಆಟೋಚಾಲಕರು,ಬಸ್ ಚಾಲಕರು,ಲಾರಿ ಚಾಲಕರು,ಅಂಗಡಿ ಮುಂಗಟ್ಟುಗಳವರು ಸ್ವಪ್ರೇರಣೆಯಿಂದ ಬಂದ್ ಮಾಡಿ ಶೋಭಾಯಾತ್ರೆ ಯಶಸ್ವಿಯಾಗಿ ನಡೆಯಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾಗಿ ಜಯಪ್ರಕಾಶ್, ಕಮಲ್ ಗಿರೀಶ್,ಸಿದ್ದೇಶ್ವರ್,ಗುರು,ಚಂದ್ರಣ್ಣ,ಪ್ರಕಾಶ್ ಐಗೂರು‌ ಉಪಸ್ಥಿತರಿದ್ದರು.