ಯಾಜ್ಞವಲ್ಕ್ಯ ಭವನದಲ್ಲಿ ಸರ್ವಪಿತೃಕಾರ್ಯ ಸಂಪನ್ನ
ಕಲಬುರಗಿ,ಅ ೩: ಯೋಗ್ಯವಾದ ದೇಶ,ಕಾಲ,ಸತ್ಪಾತ್ರರು ಇವುಗಳಲ್ಲಿ ವಿಧಿಪ್ರಕಾರ ಹವಿಸ್ಸಿನಿಂದಲೂ,ಎಳ್ಳು,ದರ್ಭೆ,ಮAತ್ರಗಳಿAದಲೂ ಕೂಡಿ ಶೃದ್ಧಾಪೂರ್ವಕವಾಗಿ ಮಾಡಿದ್ದೇ ಶ್ರಾದ್ಧವೆನಿಸಿಕೊಳ್ಳುತ್ತದೆ. ತನ್ನ ಪರಿವಾರ,ಮಡದಿ,ಮಕ್ಕಳು ಇವರ ಒಳಿತಿಗಾಗಿ ಗತಿಸಿದವರನ್ನು ಸ್ಮರಿಸಿ ಮಾಡುವ ಕರ್ಮವೇ ಶ್ರಾದ್ಧ ಎಂದು ಶ್ರೀಯೋಗೀಶ್ವರ ಯಾಜ್ಞವಲ್ಕ್ಯ ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ವಕೀಲ್ ನುಡಿದರು.
ನಗರದ ಸಂಗಮೇಶ್ವರ ಬಡಾವಣೆಯ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶ್ರೀ ಯಾಜ್ಞವಲ್ಕ್ಯ ಭವನದಲ್ಲಿ ಸಮಿತಿಯ ಅಧ್ಯಕ್ಷ ಮಲ್ಹಾರರಾವ ಗಾರಂಪಳ್ಳಿ ನೇತೃತ್ವದಲಿ ್ಲಹದಿನೈದು ದಿನಗಳಕಾಲ ನಡೆದ ಪಿತೃಪಕ್ಷ, ಮಹಾಲಯ ಅಮಾವಾಸ್ಯೆಯ ಪಿತೃ ಕಾರ್ಯದಲ್ಲಿ ಮಾತನಾಡಿದ ಅವರು ಶ್ರಾದ್ಧ ವಲ್ಲಭನಾದ ಜನಾರ್ಧನ ಸ್ವಾಮಿಯ ಅನುಗ್ರಹವನ್ನು ಕರ್ತೃಗಳಿಗೆ ಕರುಣಿಸುವನೆಂದು,ಯಾಜ್ಞವಲ್ಕ್ಯ ಸ್ಮೃತಿ ಹಾಗೂ ಹರಿಕಥಾಮೃತಸಾರದ ಪಿತೃಗಣ ಸಂಧಿಯ ಉಲ್ಲೇಖಿಸಿ ಪಿತೃಪಕ್ಷದ ಬಗೆಗಿನ ತಿಳುವಳಿಕಯನ್ನು ನೀಡಿದರು.
ಬೆಳಿಗ್ಗೆ ಆಕಾಶರಾಜಜಾಚಾರ್ಯ ನೇತೃತ್ವದಲ್ಲಿ ಹಾಗೂ ರಾಮಾಚಾರ್ಯ, ಶ್ರೀಅಜಯಾಚಾರ್ಯ ಅವರ ಸಹಯೋಗದೊಂದಿಗೆ ಪಿಂಡ ಪ್ರದಾನ, ಪಿತೃಗಳ ಉಪಕಾರ ಸ್ಮರಣೆ, ಶ್ರದ್ಧಾ ಮಹಿಮೆ, ಪಾರ್ವಣ ಪೂಜೆ, ನಡೆದವು, ಇದೇ ಸಂದರ್ಭದಲ್ಲಿ ಧರ್ಮನಿಷ್ಠರಿಗೆ ಹಾಗೂ ಹುತಾತ್ಮ ಯೋಧರಿಗೂ ಪಿಂಡ ಪ್ರದಾನ ಮಾಡಲಾಯಿತು.ಸಮಿತಿಯ ಅಧ್ಯಕ್ಷ ಮಲ್ಹಾರರಾವ ಗಾರಂಪಳ್ಳಿ, ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ವಕೀಲ್, ರಾಮಾಚಾರ್ಯ ಅಗ್ನಿಹೋತ್ರಿ, ಶಾಮಾಚಾರ್ಯ ಬೈಚಬಾಳ್, ಚಂದ್ರಕಾAತ ಗದಾರ್, ಭೀಮರಾವ್ ಕುಲಕರ್ಣಿ, ವೆಂಕಟೇಶ್ ಕುಲಕರ್ಣಿ,ಭೀಮಸೇನರಾವ್ ಸಿಂಧಗೇರಿ, ಪ್ರಾಣೇಚಾರ್ಯ ಬೈಚಬಾಳ್, ಸುಧೀರ್ ಕುಲಕರ್ಣಿ, ಮಂಜುನಾಥ್ ಕುಲಕರ್ಣಿ, ವಿನುತ ಜೋಶಿ, ಪ್ರಲ್ಹಾದ ದೇವರು,ವೆಂಕಟೇಶ್ ಬಿ ಜೋಶಿ, ಪ್ರಶಾಂತ್ ದೀಕ್ಷಿತ್, ಸಂತೋಷ್ ದಫ್ತರಬಂದ್, ರಾಘವೇಂದ್ರ ಚಬನೂರ್, ಲಕ್ಷ್ಮಿಕಾಂತ್ ಪಾಟೀಲ್, ವಾಸುದೇವರಾವ ಸಿಂದಗೇರಿ, ಶಾಮರಾವ್ ಕುಲಕರ್ಣಿ,ಭಾರತೀಶ್ ಮೋತಕಪಲ್ಲಿ , ಹನುಮಂತರಾವ್ ತಂಗಡಗಿ, ದತ್ತಾತ್ರೇಯ ಕುಲಕರ್ಣಿ, ಅನಂತಕೃಷ್ಣ ವಕೀಲ ವೆಂಕಟೇಶ್ ಕುಲಕರ್ಣಿ,ಅವಧೂತ ಕುಲಕರ್ಣಿ, ಮಂದರ್ ಸರಾಫ್, ಸಾಗರ್ ಅಳಂದಕರ್ ಹಾಗೂ ಮೈತ್ರಿ ಭಜನಾ ಮಂಡಳಿಯ ಮಾತೆಯರು ಇದ್ದರು.