ಸಹಕಾರಿಗಳ ಒಕ್ಕೂಟ ಕಛೇರಿಯಲ್ಲಿ ಗಾಂಧಿ ಜಯಂತಿ ಆಚರಣೆ
ಬೀದರ:ಅ.೩:ಇಡಿ ವಿಶ್ವವವು ಗಾಂಧಿ ಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು ಒಕ್ಕೂಟದ ಅಧ್ಯಕ್ಷ ಗುರುನಾಥ ಜ್ಯಾಂತೀಕರ್ ತಿಳಿಸಿದರು. ಬೀದರ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಕಛೇರಿಯಲ್ಲಿ ಆಯೋಜಿಸಿದ ರಾಷ್ಟ್ರ ಪಿತಾ ಮಹತ್ಮಾ ಗಾಂಧಿ ಜೀ ಅವರ ಜಯಂತಿ ನಿಮಿತ್ಯ ಪೂಜೆ ನೆರವೆರಿಸಿ ಮಾತನಾಡಿದರು.
ಇಂದು ವಿಶ್ವದಲ್ಲಿ ಯುದ್ದದ ಛಾಯೆ ಮುಡಿದೆ ರಸಿಯಾ ಯುಕ್ರೆನ್ , ಇಸ್ರೇಲ್ ಮತ್ತು ಪ್ಯಾಲೆಸ್ತಿನ್ ಹಾಗೂ ಇತರ ದೇಶಗಳು ಯುದ್ದವನ್ನು ಸಾರಿವೆ ಈ ಸಂದರ್ಭದಲ್ಲಿ ಗಾಂಜೀ ಅವರ ಸತ್ಯ ಮತ್ತು ಅಹಿಂಸೆ ಮಾರ್ಗವು ಇಡಿ ವಿಶ್ವಕ್ಕೆ ಭೋಧಿಸಿ ಶಾಂತಿ ಸ್ಥಾಪಿಸಬಹುದು ಎಂದು ತಿಳಿಸಿದರು. ಇದೆ ಸಂದರ್ಭ ದಲ್ಲಿ ಮಾಜಿ ಪ್ರಧಾನಿ ಲಾಲಬಾದು ಶಾಸ್ತ್ರಿ ಜಿ ಅವರ ಜಯಂತಿ ನಿಮಿತ್ಯ ಅವರ ಅಧಿಕಾರದ ಕಾಲದಲ್ಲಿ ಮಾಡಿರುವ ಸಾಧ್ಯನೆಗಳನ್ನು ಸ್ಮರಿಸಲಾಯಿತ್ತು.
ಕಾರ್ಯಕ್ರಮದಲ್ಲಿ ಒಕ್ಕೂಟ ಉಪಾಧ್ಯಕ್ಷರಾ ಸಂಜೀವಕುಮಾರ ಪಾಟೀಲ್, ನಿರ್ದೇಶಕರಾದ ರಾಜಶೇಖರ ನಾಗಮೂರ್ತಿ, ನಾಗಶಟ್ಟಿ ಪಾಟೀಲ್ ಸುಂಕನಾಳ, ಶ್ರೀಕಾಂತ ಮೊದಿ, ರಾಕೇಶ ಕುಲ್ಕರ್ಣಿ, ಅಮೃತ ಹೊಸಮನಿ, ವೀರಶಟ್ಟಿ ಕಾಮಣ್ಣಾ ಇತರರು ಉಪಸ್ಥಿತರಿದ್ದರು.