ಅಂಗನವಾಡಿಗಳಲ್ಲಿ ಹಬ್ಬದಂತೆ ಪೋಷಣಾ ಮಾಸಾಚರಣೆಗೆ ಕರೆ
ಆಳಂದ:ಸೆ.1: ಸರ್ಕಾರದ ಮಹತ್ವಕಾಂಗ್ಸೆ ಯೋಜನೆಯಾದ ಪೋಷಣಾ ಮಾಸಾಚರಣೆಯನ್ನು ಪ್ರತಿ ಅಂಗನವಾಡಿ ಕೇಂದ್ರಗಳಲ್ಲೂ ಹಬ್ಬದ ಮಾದರಿಯಲ್ಲಿ ಹಾಗೂ ಜನಾಂದಲೋನ ರೀತಿಯಲ್ಲಿ ಆಚರಿಸುವ ಮೂಲಕ ತಾಯಿ ಮಕ್ಕಳಲ್ಲಿನ ಅಪೌಷ್ಠಿಕತೆ ಮತ್ತು ರಕ್ತಹೀನತೆಯನ್ನು ತಡೆಗಟ್ಟುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕಿ ಸುರೇಖಾ ಪೂಜಾರಿ ಹೇಳಿದರು.
ಪಟ್ಟಣದ ತಾಲೂಕು ಅಡಳಿತ ಸೌಧಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯ ಸಿಡಿಪಿಒ ಶ್ರೀಕಾಂತ ಮೇಂಗಜಿ ಮಾರ್ಗದರ್ಶನದಲ್ಲಿ ಶನಿವಾರ ಸಿಬ್ಬಂದಿಗಳ ಹಮ್ಮಿಕೊಂಡ ಪೋಷಣಾ ಅಭಿಯಾನ ಮಾಸಾಚರಣೆಗೆ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ಚಾಲನೆ ನೀಡಿ ನಿರ್ಗಮಿಸಿದ ಬಳಿಕ ನಡೆದ ವೇದಿಕೆಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಗಸ್ಟ್ 31ರಿಂದ ಸೆಪ್ಟೆಂಬರ್ 30ರವರೆಗೆ ತಾಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಈ ಪೋಷಣಾ ಮಾಸಾಚರಣೆ ಕೈಗೊಳ್ಳುವ ಮೂಲಕ ಅಪೌಷ್ಠಿಕತೆ ಮತ್ತು ರಕ್ತ ಹೀನತೆಯನ್ನು ತಡೆಗಟ್ಟುವ ಮುಖ್ಯ ಉದ್ದೇಶ್ವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಅಂಗನವಾಡಿ ಇನ್ನೋರ್ವ ಮಹಿಳಾ ಅಧಿಕಾರಿ ಬೇಬಿನಂದಾ ಪಾಟೀಲ ಅವರು ಮಾತನಾಡಿ, ಪರಿಸರ ಸಂರಕ್ಷಣೆ, ರಕ್ತ ಹೀನತೆ ತಡೆಗಟ್ಟುವಿಕೆ ಮಕ್ಕಳ ಬೆಳವಣಿಗೆಯ ಪರಿಶೀಲನೆ ಮತ್ತು ಪೂರಕ ಆಹಾರ, ಪೋಷಣೆ ಜೊತೆಗೆ ಪಡಾಯಿಬಿ (ಓದುವುದು) ಕುರಿತು ವಿವರಿಸಿ ಇದರ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಹೇಳಿದರು.
ಈ ಮೊದಲು ಕಾರ್ಯಕ್ರಮದ ಚಾಲನೆಯನ್ನು ತಹಸೀಲ್ದಾರ ಅಣ್ಣಾರಾವ್ ಪಾಟೀಲ ವಿವಿಧ ಹಣ್ಣಿನ ಮರಗಳ ಸಸಿಗಳನ್ನು ನೆಟ್ಟು ನೀರುಣಿಸಿದರು.
ವೇದಿಕೆಯಲ್ಲಿ ಶಿರಸ್ತೆದಾರ ರಾಕೇಶ ಶೀಲವಂತ ಅವರು ಮಾತನಾಡಿ, ತಿಂಗಳ ಕಾಲ ತಾಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳಲ್ಲಿ ಈ ಪೋಷಣಾ ಮಾಸಾಚರಣೆ ಕಾರ್ಯಕ್ರಮ ಜರುಗಿಸಲು ಹಬ್ಬದಂತೆ ಸಂಭ್ರಮಿಸಿ ಆಚರಣೆ ಕೈಗೊಳ್ಳುವ ಮೂಲಕ ಸರ್ಕಾರದ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮೇಲ್ವಿಚಾರಕಿ ಗೋದಾವರಿ ಪತ್ತಾರ, ತಬಸುಮ್ಮ, ಆರೋಗ್ಯ ಇಲಾಖೆ ಡಾ. ಉಸ್ಮಾನ, ಶಿಕ್ಷಣ ಇಲಾಖೆಯ ಕಚೇರಿ ಅಧೀಕ್ಷಕಿ ಸುಮಂಗಲಾ, ಸಮಾಜ ಕಲ್ಯಾಣಾಧಿಕಾರಿ ವಿಜಲಕ್ಷ್ಮೀ ಕೊಳ್ಕರ್ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಲಕ್ಷ್ಮೀಗೌಡರ ನಿರೂಪಿಸಿದರು. ಕುಮಾರಿನಂದ ಸ್ವಾಗತಿಸಿದರು. ಕಲಾವತಿ ಅವುಟೆ ಪ್ರಾರ್ಥನೆ ಗೀತೆ ಹಾಡಿದರು. ಪದ್ಮಾ ವಂದಿಸಿದರು. ಇದೇ ವೇಳೆ ಪರಿಸರ ಸಂರಕ್ಷಣೆ ಕುರುತು ಪ್ರತಿಜ್ಞಾವಿಧಿ ಬೋಧಿಸಲಾಯಿತು.