ಸಮಪರ್ಕವಾಗಿರಲಿ ಜಾನುವಾರು ಗಣತಿ:ಪ್ರಭು ಕಲ್ಲೂರ
ಯಡ್ರಾಮಿ:ಸೆ.1:ತಾಲ್ಲೂಕಿನಾದ್ಯಂತ ಸೆ.1 ದಿಂದ ಡಿಸೆಂಬರ್ 31 ರವರಗೆ ರಾಷ್ಟ್ರೀಯ ಜಾನುವಾರು ಗಣತಿ ಯಶಸ್ವಿಯಾಗಿ ಜರಗಬೇಕು ಹಾಗೂ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಡಾ.ಪ್ರಭು ಕಲ್ಲೂರ ಮನವಿ ಮಾಡಿದರು.
ಪಟ್ಟಣದ ಪಶು ಆಸ್ಪತ್ರೆ ಆರವಣದಲ್ಲಿ ಶನಿವಾರ ಪಶು ಪಾಲನ ಮತ್ತು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಡೆಯುವ ನಾಲ್ಕು ವರ್ಷಕ್ಕೂಮೆ ನಡೆಯುವ 21 ನೇ ಜಾನುವಾರು ಗಣತಿ ತರಬೇತಿಯಲ್ಲಿ ಮಾತನಾಡಿ.
ಸೆ.1 ರಿಂದ ಆರಂಭವಾಗುವ ಜಾನುವಾರು ಗಣತಿ ಕಾರ್ಯಕ್ಕೆ ಇಲಾಖೆಯಿಂದ ಗ್ರಾಮೀಣ ಭಾಗಕ್ಕೆ 15 ಜನ ಮತ್ತು ಪಟ್ಟಣ ಪ್ರದೇಶಕ್ಕೆ ಇಬ್ಬರು.ಮೂರು ಮೇಲ್ವಿಚಾರಕರನ್ನು ನೇಮಿಸಲಾಯಿತ್ತು.
ಗಣತಿ ಮಾಹಿತಿ ಸಂಗ್ರಹ ಡಿಜಿಟಲ್ ಮೋಡನಲ್ಲಿ ಮಾಡಲಾಗಿದೆ.ತಮ್ಮ ಇಲಾಖೆಯು ಪಶು ಸಕೀಯರು ತಾಲ್ಲೂಕಿನ ಎಲ್ಲಾ ಕುಟುಂಬಗಳನ್ನು ಬೇಟೆ ಮಾಡಿ ಸಂಪೂರ್ಣ ಮಾಹಿತಿಯನ್ನು ನಿಖರವಾಗಿ ಒದಗಿಸಬೇಕು ಎಂದು ಹೇಳಿದರು.
ಈ ಗಣತಿ ದೇಶದ ಪಶುಸಂಪತ್ತಿನ ಸಮಗ್ರ ಮಾಹಿತಿ ಪಡೆಯಲು ಮತ್ತು ಪಶುಪಾಲನೆಗೆ ಸಂಬಂಧಿಸಿದ ಯೋಜನೆಗಳ ಪ್ರಗತಿ ಅಂದಾಜಿಸಲು ಪ್ರಮುಖವಾಗಿದೆ.
ಈ ಸಂದರ್ಭದಲ್ಲಿ ಡಾ.ಶರಣಗೌಡ ಹಚ್ಚಾಡ್, ಡಾ.ಪ್ರವೀಣ್ ಕುಮಾರ ನಾಯಕ, ಡಾ.ಪ್ರವೀಣ್ ಕುಮಾರ ವಡಗೇರಿ, ತಾಲೂಕು ಬಸವರಾಜ ಪಶು ಸಕಿಯರು ಪಶು ಇಲಾಖೆಯ ಸಿಬ್ಬಂದಿವರ್ಗ ಇತರರು ಇದ್ದರು.