ಸಚಿವ ಜೋಶಿಯವರ ಸಹಕಾರದಿಂದ ಅಂಧ ವಿದ್ಯಾರ್ಥಿಗೆ ವೀಸಾ
ಹುಬ್ಬಳ್ಳಿ,ಸೆ.1: ಅಂತೂ ಇಂತೂ ಅಂಧ ವಿದ್ಯಾರ್ಥಿ ಇಟಲಿಗೆ ವ್ಯಾಸಾಂಗಕ್ಕೆ ಹೋಗಲು ವೀಸಾ ಸಿಕ್ಕಿದೆ. ಕೇಂದ್ರ ಸಚಿವರ ಸಹಕಾರದಿಂದ ವಿದ್ಯಾರ್ಥಿಯ ಕನಸು ನನಸಾಗಿದೆ.
ದೃಷ್ಟಿಹೀನತೆಯನ್ನು ಮೆಟ್ಟಿನಿಂತು ಸಾಧನೆ ಮಾಡಲು ಸಿದ್ಧನಾಗಿ ದೊಡ್ಡ ಕನಸನ್ನು ಕಟ್ಟಿಕೊಂಡು ದೂರದ ಇಟಲಿಗೆ ವ್ಯಾಸಂಗಕ್ಕಾಗಿ ಹೊರಟ ವಿದ್ಯಾರ್ಥಿಗೆ ವೀಸಾ ಅರ್ಜಿ ತಿರಸ್ಕಾರಗೊಂಡಿದ್ದು, ಸಾಕಷ್ಟು ಸಂಕಷ್ಟ ತಂದೊಡ್ಡಿತ್ತು. ಇಟಲಿಯ ಟೆಂಟ್ರೊ ವಿಶ್ವವಿದ್ಯಾಲಯದ ಅರ್ಹತಾ ಪರೀಕ್ಷೆ ತೇರ್ಗಡೆಯಾಗಿದ್ದರೂ, ವಿದೇಶಕ್ಕೆ ಹಾರಲು ಸಜ್ಜಾಗಿದ್ದ ಹುಬ್ಬಳ್ಳಿ ಮೂಲದ ಅಂಧ ವಿದ್ಯಾರ್ಥಿಗೆ ವೀಸಾ ಸಮಸ್ಯೆಯಾಗಿತ್ತು. ಇದೀಗ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿಯವರು ವಿದ್ಯಾರ್ಥಿಯ ಕನಸು ಚಿಗುರೊಡೆಯುವಂತೆ ಮಾಡಿದ್ದಾರೆ.
ಸುಹಾಸ ಧಾರವಾಡ, ಗೋಕುಲ್ ರೋಡ ರವಿನಗರದ ನಿವಾಸಿಯಾಗಿದ್ದು, ಇಟಲಿ ರಾಯಭಾರಿ ಇವರ ವೀಸಾ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಬಗ್ಗೆ ಮುತುವರ್ಜಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ಕೇಂದ್ರ ಸಚಿವರಾದ ಸುಬ್ರಹ್ಮಣ್ಯಂ ಜೈಶಂಕರ ಅವರೊಂದಿಗೆ ಸಮಾಲೋಚನೆ ನಡೆಸಿ ಇಟಲಿ ರಾಯಭಾರಿಯಿಂದ ವಿದ್ಯಾರ್ಥಿಗೆ ವೀಸಾ ದೊರೆಯುವಂತೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಬಹುದಿನದ ಬಹುದೊಡ್ಡ ಕನಸು ಈಗ ನನಸಾಗಿದ್ದು, ಕುಟುಂಬಸ್ಥರು.