ಸೆ.2ಕ್ಕೆ ಶ್ರೀ ಕ್ಷೇತ್ರ ಪಾಪನಾಶ ದೇವಸ್ಥಾನದಲ್ಲಿ ಶ್ರಾವಣ ಮಾಸದ ಸಮಾರೋಪ
ಬೀದರ:ಸೆ.1: ಶ್ರೀ ಕ್ಷೇತ್ರ ಪಾಪನಾಶ ದೇವಸ್ಥಾನದಲ್ಲಿ ಪವಿತ್ರ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಪಯರ್ಂತ ಶಿವ ಭಕ್ತಿ ಸಂಗೀತ ಭಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶಿವ ಭಕ್ತರು ಹಾಗೂ ಸಂಗೀತಾಭಿಮಾನಿಗಳ ಸಹಯೋಗದಿಂದ ಭಜನೆ ಕಾರ್ಯಕ್ರಮವು ಬಹಳ ವಿಜ್ರಮಣೆಯಿಂದ ನೆರೆವೇರಿಸಿಕೊಂಡು ಬಂದಿದ್ದು ಪ್ರಯುಕ್ತ sಸೆ. 02 ರಂದು ಸೋಮವಾರ ಬೆಳಗ್ಗೆಯಿಂದ ಪ್ರಸಾದ ವ್ಯವಸ್ತೆ ಮಾಡಲಾಗಿದೆ ಹಾಗೂ ರಾತ್ರಿ 8:00 ಗಂಟೆಯಿಂದ ಭಜನೆ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಈ ಭಜನೆ ಸಂಗೀತ ಕಾರ್ಯಕ್ರಮದಲ್ಲಿ ಬೀದರಿನ ಖ್ಯಾತ ಕಲಾವಿದರು ಭಾಗವಹಿಸಲಿದ್ದಾರೆ.
ಈ ಪವಿತ್ರ ಶ್ರಾವಣ ಮಾಸದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಎಲ್ಲಾ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಗವಂತನ ಕೃಪಾಶಿರ್ವಾದಕ್ಕೆ ಪಾತ್ರರಾಗಬೇಕೆಂದು ವಿನಂತಿಸಲಾಗಿದೆ ಎಂದು ಶ್ರೀ ಪಾಪನಾಶ ಮಹಾದೇವ ಟ್ರಸ್ಟ್ ಅಧ್ಯಕ್ಷರಾದ ಚಂದ್ರಕಾಂತ ಶೆಟಕಾರ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.