ಪಪಂ ಸದಸ್ಯ ಅಪಹರಣ: ತಹಶೀಲ್ದಾರ ಕಛೇರಿಗೆ ಮುತ್ತಿಗೆ
ಚನ್ನಮ್ಮನ ಕಿತ್ತೂರು, ಸೆ1: ಪಪಂ ಸದಸ್ಯ ನಾಗರಾಜ ಅಸುಂಡಿ ಅಪಹರಣದ ಹಿನ್ನೆಲೆ ಚನ್ನಮ್ಮನ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಟೈರ್‍ಗೆ ಬೆಂಕಿಹಚ್ಚಿ ಪ್ರತಿಭಟಿಸಿದರು. ನಂತರ ಪಾದಯಾತ್ರೆ ಮೂಲಕ ತಹಶೀಲ್ದಾರ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಿದರು.
ಕಾರ್ಯಕರ್ತರ ಪ್ರತಿಭಟನಾ ಸಭೆಯಲ್ಲಿ ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ ಮಾತನಾಡಿ ಅಪಹರಣವಾದ ನಾಗರಾಜ ಅಸುಂಡಿಂiÀiವರನ್ನು ಹುಡುಕಿ ಕೊಡಬೇಕು. ಇಲ್ಲದ್ದಿದ್ದರೆ ಸೆ. 3 ರಂದು ನಡೆಯುವ ಪಪಂ ಚುನಾವಣೆ ಮುಂದೂಡಬೇಕು. ಇಲ್ಲವಾದರೆ ಬೃಹತ್ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಚುನಾವಣೆ ಅಧಿಕಾರಿಯಾಗಿರುವ ತಹಶೀಲ್ದಾರ ಅವರನ್ನು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ಮಾತನಾಡಿದರು.
ಪ್ರಾಸ್ತಾವಿಕವಾಗಿ ಬಿಜೆಪಿ ಗ್ರಾಮೀಣ ಕಾರ್ಯದರ್ಶಿ ವೈದ್ಯ ಕೆ.ವಿ. ಪಾಟೀಲ ಮಾತನಾಡಿ ತಹಶೀಲ್ದಾರರಿಗೆ ಮನವಿ ಸಲ್ಲಿದರು. ಚುನಾವಣೆ ನಿಗದಿತ ದಿನಾಂಕದ ಅವಧಿಯೊಳಗಾಗಿ ಅಪಹರಣವಾದ ಬಿಜೆಪಿ ಸದಸ್ಯನನ್ನು ಸುರಕ್ಷಿತವಾಗಿ ತಂದು ಒಪ್ಪಿಸದಿದ್ದರೆ ತಾಲೂಕಾಡಳಿತ ಸೌಧ ಎದುರು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಮುಖಂಡರುಗಳಾದ ನಿಂಗನಗೌಡ ದೊಡ್ಡಗೌಡರ, ಮಹಾಂತೇಶ ಗಿರನಟ್ಟಿ, ನಿಜಲಿಂಗಯ್ಯಾ ಹಿರೇಮಠ, ಶ್ರೀಕರ ಕುಲಕರ್ಣಿ, ಉಳವಪ್ಪಾ ಉಳ್ಳಾಗಡ್ಡಿ, ಅಜ್ಜಪ್ಪಾ ನೇಗಿನಹಾಳ, ಶಿವಾನಂದ ಹನಮಸಾಗರ, ಮಂಜುನಾಥ ಅಡಬಿಟ್ಟಿ, ರಮೇಶ ಉಗರಖೋಡ, ದಿನೇಶ ಒಳಸಂಗ, ಮಲಿಲಕಾರ್ಜುನ ಉಳ್ಳಾಗಡ್ಡಿ ಹರೀಶ ಕರಿಕಟ್ಟಿ, ಕಲ್ಲಪ್ಪ, ಈರಣ್ಣಾ, ಬಸವರಾಜ, ಅದೃಶ್ಯ, ಇನ್ನಿತರರಿದ್ದರು.