ಹಿಂದೂ ಮಂತ್ರವೇ ವಿಶ್ವಕ್ಕೆ ದಾರಿದೀಪ : ಕಾಜೋಲ್ ಹಿಂದೂಸ್ತಾನಿ
ಭಾಲ್ಕಿ: ಸೆ.1:ಜಗತ್ತಿಗೆ ಹಿಂದೂ ಮಂತ್ರವೇ ದಾರಿದೀಪವಾಗಿದೆ. ಹಿಂದೂ ಇಲ್ಲದೇ ಜಗದಾಟ ನಡೆಯದು ಎಂದು ಸಾಮಾಜಿಕ ಕಾರ್ಯಕರ್ತೆ ಕಾಜೋಲ್ ಹಿಂದೂಸ್ತಾನಿ ಅಭಿಪ್ರಾಯಪಟ್ಟರು.
ಪಟ್ಟಣದ ಪುರಭವನದಲ್ಲಿ ವಿಶ್ವಹಿಂದೂಪರಿಷತ್ ವತಿಯಿಂದ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಮತ್ತು ವಿಶ್ವಹಿಂದೂಪರಿಷತ್ ಸಂಸ್ಥಾಪನಾ ದಿನ ನಿಮಿತ್ಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಧರ್ಮಸಂಸ್ಥಾಪನಾರ್ಥ ಜನ್ಮ ತಳಿದ ಕೃಷ್ಣನಿಂದ ಧರ್ಮ ಸ್ಥಾಪನೆಯಾಗಿದೆ. ವಿಶ್ವಕ್ಕೆ ಹಿಂದೂ ಧರ್ಮವೇ ಮಾರ್ಗದರ್ಶಿಯಾಗಿದೆ. ಹಿಂದೂ ಮಂತ್ರದಿಂದಲೇ ಜಗತ್ತು ನಡೆಯುತ್ತಲಿದೆ. ಸ್ವಾಮೀ ವಿವೇಕಾನಂದರು ಸೇರಿದಂತೆ ಅನೇಕ ದಾರ್ಶನಿಕರು ಹಿಂದೂ ಧರ್ಮದ ಬಗ್ಗ ಜಗತ್ತಿಗೆ ಪಾಠ ಹೇಳಿದ್ದಾರೆ. ಇವರೆಲ್ಲರ ಮಾರ್ಗದರ್ಶನದಲ್ಲಿ ಹಿಂದೂ ಧರ್ಮ ಮುನ್ನಡೆಗೆ ಬಂದಿದೆ ಎಂದು ಹೇಳಿದರು.
ಸಾನಿಧ್ಯವಹಿಸಿ ಮಾತನಾಡಿದ ಹಲಬರ್ಗಾ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಜಗತ್ತಿಗೆ ಶಾಂತಿ ಮಂತ್ರ ಹೇಳುವ ಧರ್ಮ ಅದ್ಯಾವುದಾದರೂ ಇದ್ದರೆ ಅದು ಹಿಂದು ಧರ್ಮವಾಗಿದೆ ಎಂದು ಹೇಳಿದರು.
ಜೈಭಾರತಮಾತಾ ಸೇವಾ ಸಮಿತಿಯ ಪೂಜ್ಯಶ್ರೀ ಹವಾಮಲ್ಲಿನಾಥ ಸ್ವಾಮೀಜಿ ಮಾತನಾಡಿ, ಎಲ್ಲರಲ್ಲಿಯೂ ದೇಶ ಪ್ರೇಮ ಬೆಳೆಯಬೇಕಾದರೆ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳಾಗಿ ಬಾಳಬೇಕು ಎಂದು ಹೇಳಿದರು.
ವಿಶ್ವಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಸಾಗರ ಮಲಾನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾ ಪ್ರತಿನಿಧಿ ಜೈಕಿಶ ಬಿಯಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಸೋಮನಾಥಪ್ಪ ಅಷ್ಟೂರೆ, ಶುಭಾಂಗಿ ಚನ್ನಬಸವ ಬಳತೆ, ಶಿವಕುಮಾರ ಲೋಖಂಡೆ, ಸಂದೀಪ ತೆಲಗಾಂವಕರ, ರಾಜೆಪ್ಪ ಪಾಟೀಲ, ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ, ಬಿಜೆಪಿ ಮುಖಂಡ ಪ್ರಸನ್ನ ಪ್ರಕಾಶ ಖಂಡ್ರೆ, ಶಿವರಾಜ ಗಂದಗೆ, ಚನ್ನಬಸವಣ್ಣ ಬಳತೆ, ಶಾಲಿವಾನ ಕನಕಟ್ಟೆ, ಜೆಡಿಎಸ್ ಮುಖಂಡ ಸಿದ್ರಾಮಪ್ಪ ವಂಕೆ, ಶಿವರಾಜ ಮಲ್ಲೇಶಿ, ರಾಜಕುಮಾರ ತೊಗಲೂರ, ಇಂದ್ರಜೀತ ಪಾಂಚಾಳ, ಸಂಗಮೇಶ ಕಾರಾಮುಂಗೆ, ಸೇರಿದಂತೆ ಹಲವರು ಇದ್ದರು. ದೀಪಕ ಥಮಕೆ ನಿರೂಪಿಸಿದರು. ಸಚಿನ ಜಾಧವ ವಂದಿಸಿದರು.