ಶ್ರೀ ಮಳಿಯಪ್ಪಯ್ಯನ ಪರ್ವ
ಬಾದಾಮಿ,ಸೆ.1: ತಾಲೂಕಿನ ಲಕ್ಕಸಕೊಪ್ಪ ಗ್ರಾಮದಲ್ಲಿ ಮುರನಾಳದ ಶ್ರೀ ಮಳೆರಾಜೇಂದ್ರ ಮಹಾಸ್ವಾಮಿಗಳು ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ಬಾರಿಗೂ ಶ್ರಾವಣದ ಕೊನೆಯ ಗುರುವಾರ ಶ್ರೀ ಮಳಿಯಪ್ಪಯ್ಯನ ಪರ್ವ ಆಚರಿಸಲಾಯಿತು.
ಐದು ಮಂದಿ ಮುತ್ತೈದೆಯರು ತುಂಬಿದ ಬಿಂದಿಗೆ ಹೊತ್ತುಕೊಂಡು ಸಂಗೀತ ವಾದ್ಯಗಳ ಮೂಲಕ ಶ್ರೀಗಳ ಸಮ್ಮುಖದಲ್ಲಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಶ್ರೀ ಮಾರುತೇಶ್ವರ ದೇವಸ್ಥಾನದಿಂದ ಶ್ರೀ ಮಳಿಯಪ್ಪಯ್ಯನ ಗುಡಿಯವರೆಗೆ ಮೆರವಣಿಗೆ ನಡೆಯಿತು. ಬುತ್ತಿ ಹೆಡಿಗೆಗಳನ್ನು ಹೊತ್ತು ಮಕ್ಕಳಾದಿಯಾಗಿ ಅವರ ಜೊತೆಗೆ ಹೆಜ್ಜೆ ಹಾಕಿದರು. ಶ್ರೀ ಮಳಿಯಪ್ಪಯ್ಯನ ದೇವಸ್ಥಾನದಲ್ಲಿ ಅಭಿಷೇಕ ಮಾಡಿ, ವಿಶೇಷ ಪೂಜೆ ಮಾಡಿ ಮಳೆ ಬೆಳೆಗಳನ್ನು ಹೇಳÀಲಾಯಿತು. ಎಲ್ಲರೂ ತಂದಂತಹ ಬುತ್ತಿಯನ್ನು ಬಿಚ್ಚಿ ಹಂಚಿಕೊಂಡು ಪ್ರಸಾದ ಸೇವಿಸಿದರು. ಅನಾದಿ ಕಾಲದಿಂದ ಬಂದಿರುವ ಹಂಚಿಕೊಂಡು ಉಣ್ಣುವ, ಹಂಚಿಕೊಂಡು ತಿನ್ನುವ ಸಂಪ್ರದಾಯ, ಭಾವೈಕ್ಯತೆಯಿಂದ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಡಾ.ಜಿ.ಕೆ.ಹಿರೇಮಠ, ಪಿ.ಡಿ.ವಾಲೀಕಾರ, ಜಿ.ಎಸ್.ಹಿರೇಮಠ, ಸಿದ್ದಪ್ಪ ಆಡಿನ, ಬಸು ಗೌಡರ, ವೈ.ಬಿ.ಅಣ್ಣಿಗೇರಿ, ಈರಣ್ಣ ಗೌಡರ, ಎಂ.ಐ.ಹಿರೇಮಠ, ಆರ್.ಆರ್.ಪಾಟೀಲ, ಭೀಮಪ್ಪ ಹೊಸಮನಿ, ಮಲ್ಲಪ್ಪ ಗೌಡರ, ಕನಕಪ್ಪ ದಾಸರ, ಹನಮಂತ ಕೊಪ್ಪದ, ವಿಠ್ಠಲ ತಳವಾರ, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.