ಹೆಚ್ಚು ಜನಜಾಗೃತಿ ಮೂಡಿಸಿದ ಚಳವಳಿ ಕ್ವಿಟ್‍ಇಂಡಿಯಾ
ಧಾರವಾಡ,ಸೆ.1:ಕ್ವಿಟ್‍ಇಂಡಿಯಾ ಚಳುವಳಿ ಕರ್ನಾಟಕದಲ್ಲಿ ಹೆಚ್ಚು ಜನಜಾಗೃತಿಯನ್ನು ಮೂಡಿಸಿದ ಚಳುವಳಿಯಾಗಿದೆ. ಈ ಚಳುವಳಿ ಬ್ರಿಟಿಷ್ ಸರಕಾರವನ್ನುದಂಗು ಬಡಿಸಿ ಅವರುಇಲ್ಲಿಂದಕಾಲ್ತೆಗೆಯುವಂತೆ ಮಾಡಿತುಎಂದುಧಾರವಾಡದ ಹೊಂಬೆಳಕು ಪ್ರತಿಷ್ಠಾನದಅಧ್ಯಕ್ಷೆ ಶ್ರೀಮತಿ ವೀಣಾ ಬಿರಾದಾರಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು, ಸುವರ್ಣಕರ್ನಾಟಕ ಸಂಭ್ರಮ ಮತ್ತು ಭಾರತದ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವೀರಾಪೂರದ ಸರಕಾರಿ ಪ್ರೌಢ ಶಾಲೆಯಲ್ಲಿ ಕ್ವಿಟ್‍ಇಂಡಿಯಾ ಚಳುವಳಿಯಲ್ಲಿ ಧಾರವಾಡಜಿಲ್ಲಾ ಹೋರಾಟಗಾರರ ಪಾತ್ರ'' ವಿಷಯಕುರಿತು ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದಅವರು, 1942ರ ಅಗಸ್ಟ್ 9 ರಂದುಗಾಂಧೀಜಿಯವರು `ಭಾರತ ಬಿಟ್ಟುತೊಲಗಿ' ಚಳುವಳಿಯನ್ನು ಪ್ರಕಟಿಸಿದಾಗ ಬ್ರಿಟಿಷ ಸರಕಾರಗಾಂಧೀಜಿ ಮತ್ತು ಅನೇಕ ರಾಷ್ಟ್ರನಾಯಕರನ್ನುದಸ್ತಗಿರಿ ಮಾಡಿತು.ರೊಚ್ಚಿಗೆದ್ದ ಹೋರಾಟಗಾರರು ಸರಕಾರಿಕಚೇರಿ, ರೈಲು ಕಂಬಿ, ನಿಲ್ದಾಣಗಳನ್ನು ದ್ವಂಸಗೊಳಿಸಿದರು. ಖಜಾನೆಗಳನ್ನು ಲೂಟಿ ಮಾಡಿದರು.ಟೆಲಿಫೋನ ತಂತಿಗಳನ್ನು ಕತ್ತರಿಸಿದರು. ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಬಹಿಷ್ಕಾರ ಹಾಕಿದರೆ, ವಕೀಲರು ನ್ಯಾಯಾಲಯಗಳಿಗೆ ಬಹಿಷ್ಕಾರ ಹಾಕಿದರು.ಕರ್ನಾಟಕದಲ್ಲಿ ಈ ಚಳುವಳಿ ಅತ್ಯಂತ ಪ್ರಖರವಾಗಿತ್ತು.ರಂಗನಾಥ ದಿವಾಕರ, ಡಿ.ಪಿ. ಕರ್ಮಕರ, ಶಂಕರಕುರ್ತಕೋಟಿ, ಮೈಲಾರ ಮಹಾದೇವಪ್ಪ, ಆರ್.ಎಸ್. ಹುಕ್ಕೇರಿಕರ, ಶಕುಂತಲಾಕುರ್ತಕೋಟಿ, ಉಮಾಬಾಯಿಕುಂದಾಪುರ, ಸಿದ್ದಪ್ಪ ಹೊಸಮನಿ, ನಾ.ಸು. ಹರ್ಡಿಕರ, ವೆಂಕಟೇಶ ಮಾಗಡಿ, ಗಂಗಾಧರರಾವ್‍ದೇಶಪಾಂಡೆ ಮುಂತಾದ ಹೋರಾಟಗಾರರು ಬಂಧನಕ್ಕೆಗುರಿಯಾದರು. ಕರ್ನಾಟಕದಲ್ಲಿ ಸುಮಾರ ಏಳು ಸಾವಿರಕನ್ನಡಿಗರು ಬ್ರಿಟಿಷ ಸರಕಾರದ ವಿರುದ್ಧಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿದ್ದರು.ಈ ಮದ್ಯಈಸೂರುಧ್ವಜ ಸತ್ಯಾಗ್ರಹವುಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿಒಂದುಉಜ್ವಲ ಅಧ್ಯಾಯವಾಗಿತ್ತು.ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಅನೇಕ ಮಹನೀಯರತ್ಯಾಗ ಮತ್ತು ಬಲಿದಾನಗಳನ್ನು ಇಂದಿನ ವಿದ್ಯಾರ್ಥಿಗಳು ಸ್ಮರಿಸಬೇಕು.ಅಂದಾಗ ಸ್ವಾತಂತ್ರ್ಯಕ್ಕೊಂದು ಬೆಲೆ ಬಂದಂತಾಗುತ್ತದೆಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಕ.ವಿ.ವ. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡಿ, ಮಕ್ಕಳೇ ಈ ದೇಶದ ನಿಜವಾದ ಸಂಪತ್ತು. ವಿದ್ಯಾರ್ಥಿಗಳುಕುಟುಂಬದ ಆಸ್ತಿ ಮಾತ್ರವಲ್ಲ. ದೇಶದ ನಿಜವಾದಜೀವಂತ ಸಂಪತ್ತು ಆಗಬೇಕು. ಶಾಲಾ ದಿನಗಳಲ್ಲಿ ನೀವು ನಾಯಕರಾಗಿ ಬೆಳೆದರೆ ಮುಂದೆ ಈ ದೇಶಕ್ಕೂ ನಾಯಕರಾಗಬಹುದುಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ವೀರಾಪೂರ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಮಂಗಳಗೌರಿ ಬಡಿಗೇರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ.ಇದು ನಿಮ್ಮ ಸಾಧನೆಗೆ ಪೂರಕವಾಗುತ್ತದೆಎಂದರು. ನೆರೆಯರಾಮಾಪೂರಗ್ರಾಮದ 97ರ ಹಿರಿಯ ಸ್ವಾತಂತ್ರ್ಯ ಸೇನಾನಿ ಯಲ್ಲಪ್ಪ ಬಡಿಗೇರಇತ್ತೀಚೆಗೆ ನಿಧನರಾದ ನಿಮಿತ್ಯಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಹಾಂತೇಶ ನರೇಗಲ್, ಈರನಗೌಡ ಪಾಟೀಲ, ಭೀಮನಗೌಡ ಪಾಟೀಲ ಮುಂತಾದವರು ಮಾತನಾಡಿದರು. ಸುವರ್ಣಕರ್ನಾಟಕ ಸಂಭ್ರಮ ಮತ್ತು ಭಾರತದ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿಕರ್ನಾಟಕದಲ್ಲಿ ಸ್ವಾತಂತ್ರ್ಯ ಹೊರಾಟದ ಆ ದಿನಗಳು” ಉಪನ್ಯಾಸ ಹಾಗೂ ಪಠ್ಯಾಧಾರಿತ ವಿಷಯ ಚಟುವಟಿಕೆಗಳ ವಿಜೇತರಿಗೆ ನಗದು ಪುರಸ್ಕಾರ ನೀಡಿಗೌರವಿಸಲಾಯಿತು.
ಮಹಾದೇವಿ ವಿ.ಪಾಟೀಲ ಸ್ವಾಗತಿಸಿದರು.ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು.ಎ.ಎ. ಬೆಣ್ಣಿ ನಿರೂಪಿಸಿದರು.ಸುರೇಶ ಮುಗಳಿ ವಂದಿಸಿದರು.ಸ್ಮೀತಾ ವಡಗಾವಿ ಗಣ್ಯರನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಸುನಂದಾ ಹಳ್ಳೂರ, ಸುವರ್ಣಾ ಪಾಟೀಲ, ಪ್ರತಿಭಾ ಪಾಟೀಲ, ಪ್ರಕಾಶ ಭಾಗಡೆ ಸೇರಿದಂತೆ ಮುಂತಾದವರಿದ್ದರು.
