ನಾಡಿದ್ದು ನಗರದಲ್ಲಿ ವೀರಭದ್ರೇಶ್ವರ ಜಯಂತಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.01: ನಗರದಲ್ಲಿ ನಾಡಿದ್ದು ಸೆ.3 ರಂದು 5ನೇ ವರ್ಷದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವವನ್ನು ಇಲ್ಲಿನ ಅನಾದಿಲಿಂಗೇಶ್ವರ ದೇವಸ್ಥಾನದಲ್ಲಿ ಹರಗಿನಡೋಣಿ, ಕಮ್ಮರಬೇಡು ಮತ್ತು ಕಲ್ಯಾಣಸ್ವಾಮಿ ಮಠ, ಜಂಗಮರಹೊಸಳ್ಳಿ, ಡಿ.ಅಂತಾಪುರ ಶ್ರೀಗಳ ಸಾನಿಧ್ಯದಲ್ಲಿ ಹಮ್ಮಿಕೊಂಡಿದೆ.
ನಾಡಿದ್ದು ಬೆಳಿಗ್ಗೆ 5 ಗಂಟೆಗೆ  ಅನಾದಿಲಿಂಗೇಶ್ವರ ದೇವಸ್ಥಾನದ ಅವರಣದಲ್ಲಿರುವ  ವೀರಭದ್ರೇಶ್ವರ ದೇವಸ್ಥಾನದ ಶಿಲಾಮೂರ್ತಿಗೆ ರುದ್ರಾಭಿಷೇಕ,  ನಂತರ ಬೆಳಿಗ್ಗೆ 7ಗಂಟೆಗೆ 201 ಮುತ್ತೈದೆಯರಿಂದ ಕಳಸ, ಐದು ಮಹಿಳೆಯರಿಂದ ಗರಿಗೆ ಕೊಡದೊಂದಿಗೆ ವೀರಗಾಸೆ ಸಮಾಳ, ನಂದಿಕೋಲು ರಾಂ ಡೋಲು ಮತ್ತು ಇತರೆ ಜನಪದ ಕಲಾವಾದ್ಯಗಳೊಂದಿಗೆ ಶ್ರೀ ವೀರಭದ್ರೇಶ್ವರ ಭಾವಚಿತ್ರ ಭವ್ಯ ಮೆರವಣಿಗೆಯನ್ನು ಕನಕದುರ್ಗಮ್ಮ ದೇವಸ್ಥಾನದ ಅವರಣದಿಂದ  ವೀರಭದ್ರೇಶ್ವರನ ಸನ್ನಿದಿಗೆ ಬಂದು ತಲುಪುವುದು,
ಬಳಕ  201 ಮುತ್ತೈದೆಯರಿಗೆ ಹಸಿರುಸೀರೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗುವುದು, ತದನಂತರ ಪೂಜ್ಯ ರಿಂದ ಆಶೀರ್ವಚನ, ಮಹಾಮಂಗಳಾರತಿ ಪ್ರಸಾದ ವಿತರಣೆ ಜರುಗುವುದು ಎಂದು ಜೆಎಂ ಬಸವರಾಜ್ ಸ್ವಾಮಿ ತಿಳಿಸಿದ್ದಾರೆ.