ಸುಶೀಲಾನಗರ ಗ್ರಾಮದಲ್ಲಿ ಜಲಜೀವನ್, ಸ್ವಚ್ಚ ಭಾರತ್ ಮಿಷನ್ ವಸ್ತು ಪ್ರದರ್ಶನ
ಸಂಜೆವಾಣಿ ವಾರ್ತೆ
ಸಂಡೂರು:ಸೆ:1: ಸಂಡೂರು ತಾಲೂಕಿನ ಸುಶೀಲಾನಗರ ಗ್ರಾಮದಲ್ಲಿ ಜಿ.ಪಂ. ಬಳ್ಳಾರಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಬಳ್ಳಾರಿ ವಿಭಾಗ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆಯಾದ ಸುರಭಿ ಸಂಸ್ಥೆಗಳ ಸಹಯೋಗದಲ್ಲಿ ಜಲಜೀವನ್ ಮಿಷನ್ ಮತ್ತು ಸ್ವಚ್ಚ ಭಾರತ ಮಿಷನ್ ಯೋಜನೆಯ ಕುರಿತು ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಗ್ರಾ.ಪಂ. ಅಧ್ಯಕ್ಷೆ ರಾಮೀಬಾಯಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೀರು ಅತ್ಯಮೂಲ್ಯವಾದ ನೈಸರ್ಗಿಕ ಸಂಪತ್ತು ನೀರನ್ನು ಹಿತವಾಗಿ ಬಳಸಬೇಕು ಮತ್ತು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ. ಈ ಮಹತ್ವದ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸುವುದು ಅಗತ್ಯವಾಘಿದೆ ಎಂದು ತಿಳಿಸಿದರು.
ಜಿ.ಪಂ. ಐ.ಎಸ್.ಅರ್.ಯ ತಂಡದ ನಾಯಕ ಕೊಟ್ರೇಶ್ ಎದುರು ಮನೆ ಮಾತನಾಡಿ ಜಲಜೀವನ ಮಿಷನ್ ಯೋಜನೆ ಅಡಿಯಲ್ಲಿ 2024ರ ಒಳಗಾಗಿ ಪ್ರತಿ ಮನೆಗೂ ಕಾರ್ಯಾತ್ಮಕ ನಳ ಮತ್ತು ಮೀಟರ್ ಅಳವಡಿಸಿ ಶುದ್ಧ ಮತ್ತು ಸುರಕ್ಷಿತ ನೀರನ್ನು ಕೊಡಲಾಗುತ್ತಿದೆ. ಪ್ರತಿಯೊಬ್ಬರೂ ಈ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಪಿ.ಎಸ್.ಯ. ಸಮುದಾಯ ಸಂಘಟಕರಾದ ಹೆಚ್. ಮಂಜುಳ ಮಾತನಾಡಿ ನಾವು ಆರೋಗ್ಯವಂತರಾಗಬೇಕಾದರೆ ಸ್ವಚ್ಚತೆಯ ಕಡೆ ಗಮನ ಹರಿಸಬೇಕಾಗಿದೆ. ಪ್ರತಿ ಯೋರ್ವರೂ ಸರ್ಕಾರದಿಂದ ಉಚಿತವಾಗಿ ಸಿಗುವಂತಹ ಸೌಚ್ಚಾಲಯ ಹಾಗೂ ಇಂಗು ಗುಂಡಿಯನ್ನು ನಿರ್ಮಿಸಿಕೊಂಡು ಬಳಸಬೇಕಾಗಿದೆ. ಕಸವನ್ನು ಎಲ್ಲೆಂದರಲ್ಲಿ ಬಿಸಾಡದೇ ಹಸಿಕಸ, ಒಣ ಕಸ ಬೇರ್ಪಡಿಸಿ ಕಸದ ಗಾಡಿಗೆ ಕೊಟ್ಟು ಸ್ವಚ್ಚತೆ ಕಾಪಾಡಬೇಕು , ಮಳೆ ನೀರು ಕೋಯ್ಲು ಮಾಡಿಕೊಂಡು ಪುನರ್ ಬಳಕೆ ಮಾಡಬೇಕು ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಪಂ.ಚಾಯಿತಿ ಉಪಾಧ್ಯಕ್ಷೆ ಸುಜಾತಮ್ಮ, ಸದಸ್ಯರಾದ ಶಿವಮೂರ್ತಿ ನಾಯಕ್, ಎಸ್. ಬಾಬುನಾಯ್ಕ, ಲಕ್ಷ್ಮೀ , ಶಾರದಾಬಾಯಿ, ಪಿ.ಡಿ.ಓ. ಪ್ರಭುಗೌಡ ಕಾಶಾನಾಯ್ಕ, ಜ್ಯೋತಿ ಗ್ರಾಮದ ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ ಷಣ್ಮುಖ ಇತರರು ಉಪಸ್ಥಿತರಿದ್ದರು.
One attachment • Scanned by Gmail