ರೋಟರಿ ಸಂಸ್ಥೆಯಿಂದ ಉಚಿತ ಕಿವಿ ತಪಾಸಣೆ ಹಾಗೂ ಶ್ರವಣ ಯಂತ್ರಗಳ ವಿತರಣಾ ಶಿಬಿರ
ಅಥಣಿ : ಸೆ.1:ಕಿವಿ ಮಾನವ ದೇಹದ ಸೂಕ್ಷ್ಮ ಅಂಗವಾಗಿದೆ ನಮ್ಮ ದೇಹದ ಪ್ರತಿಯೊಂದು ಅಂಗಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಇನ್ನೊಬ್ಬರು ಹೇಳುವ ಮಾತನ್ನು ಶ್ರವಣ ಮಾಡಿಕೊಳ್ಳಲು ಕಿವಿ ತನ್ನದೇ ಆದ ಪಾತ್ರ ನಿರ್ವಹಿಸುತ್ತದೆ. ಪ್ರತಿಯೊಬ್ಬರು ಕಿವಿಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಅಗತ್ಯವಿದೆ ಎಂದು ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.
ಅವರು ರೋಟರಿ ಕ್ಲಬ್ ವೇಣುಗ್ರಾಮ ಬೆಳಗಾವಿ ಹಾಗೂ ರೋಟರಿ ಕ್ಲಬ್ ಅಥಣಿ ಸಹಯೋಗದಲ್ಲಿ ಪಟ್ಟಣದ ಯಶಸ್ವಿನಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಉಚಿತ ಶ್ರವಣ
ಚಿಕಿತ್ಸಾ ಹಾಗೂ ಶ್ರವಣ ಯಂತ್ರಗಳ ವಿತರಣಾ ಶಿಬಿರ ಮಾತನಾಡಿದರು
ರೋಟರಿ ಸಂಸ್ಥೆಯು ಕಳೆದ 25 ವರ್ಷಗಳಲ್ಲಿ ಅನೇಕ ಬಾರಿ ಉಚಿತ ಆರೋಗ್ಯ ಶಿಬಿರಗಳನ್ನ ನಡೆಸುತ್ತಾ ಬರಲಾಗಿದೆ. ಈ ಬಾರಿ ಶ್ರವಣ ದೋಷವಿರುವ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಬೆಲೆಬಾಳುವ ಶ್ರವಣ ಯಂತ್ರ ವಿತರಿಸುವ ಕಾರ್ಯ ರೋಟರಿ ಸಂಸ್ಥೆ ಮಾಡುತ್ತಿದೆ ಎಂದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಥಣಿ ರೋಟರಿ ಸಂಸ್ಥೆಯ ಅಧ್ಯಕ್ಷ ಅರುಣ ಸೌದಾಗರ ಮಾತನಾಡಿ ದೇಹದ ಅಂಗಾಂಗಗಳಲ್ಲಿ ಕಿವಿಯ ಸುರಕ್ಷತೆಯನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳುವುದು ಅಗತ್ಯ. ಶ್ರವಣ ದೋಷವಿರುವ ಬಡ ಹಾಗೂ ನಿರ್ಗತಿಕ ಫಲಾನುಭವಿಗಳಿಗೆ ಬೆಲೆಬಾಳುವ ಶ್ರವಣ ಯಂತ್ರಗಳನ್ನು ರೋಟರಿ ಸಂಸ್ಥೆಯಿಂದ ಉಚಿತವಾಗಿ ವಿತರಿಸಲಾಗುತ್ತಿದ್ದು, ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜನರಿಗೆ ಬೆಳಗಾವಿಯ ಕಿವಿ ತಜ್ಞ ರೋ. ಕಿಶೋರ ಜಗದಾಳೆ ಕಿವಿಯ ರಕ್ಷಣೆ ಹಾಗೂ ಶ್ರವಣ ಯಂತ್ರದ ಉಪಯೋಗದ ಬಗ್ಗೆ ಫಲಾನುಭವಿಗಳಿಗೆ ವಿವರವಾಗಿ ತಿಳಿಸಿದರು.
ಶಿಬಿರದಲ್ಲಿ ಒಟ್ಟು 160 ಫಲಾನುಭವಿಗಳ ಕಿವಿ ಪರೀಕ್ಷಿಸಲಾಯಿತು ಹಾಗೂ ಅದರಲ್ಲಿ 101 ಫಲಾನುಭವಿಗಳಿಗೆ ಸುಮಾರು 30 ಲಕ್ಷ ರೂಗಳ ವೆಚ್ಚದಲ್ಲಿ ಶ್ರವಣ ಯಂತ್ರಗಳನ್ನು ರೋಟರಿ ಸಂಸ್ಥೆಯ ವತಿಯಿಂದ ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಾ. ಆನಂದ ಕುಲಕರ್ಣಿ, ವಿನಯಕುಮಾರ ಬಾಳಿಕಾಯಿ, ಸಚಿನ್ ದೇಸಾಯಿ, ಶೇಖರ್ ಕೋಲಾರ, ಅನಿಲ್ ದೇಶಪಾಂಡೆ, ಅರುಣ ಯಲಗುದ್ರಿ. ಸೋಮು ವಾಂಗಿ. ರಮೇಶ ಬುಲಬುಲೆ. ಮಹಾದೇವ ಗಿಡ್ಡಳ್ಳಿ, ಕಿಶೋರ ಜಗದಾಳೆ ಇನ್ನರ್ ವ್ಹೀಲ್ ಕ್ಲಬ್ ಸದಸ್ಯರಾದ ತೃಪ್ತಿ ಕುಲಕರ್ಣಿ ರೇಣು ಸೌದಾಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.