ಬಸವಾದಿ ಶರಣರೇ ಪ್ರಜಾಪ್ರಭುತ್ವ ಮೊದಲ ಪ್ರತಿಪಾದಕರು: ಹಾವಶೆಟ್ಟಿ ಪಾಟೀಲ
ಬೀದರ್ :ಸೆ.1: ಸಾವಿರ ವರ್ಷಗಳ ಹಿಂದೆ ಜಗತ್ತಿನ ಒಳಿತಿಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಸವಣ್ಣನವರು ಜಾರಿಗೆ ತಂದದ್ದಲ್ಲದೆ ಅನುಷ್ಠಾನಕ್ಕೂ ತಂದರು. ಇಂದಿಗೂ ಸಮಾನತೆ ಪಡೆಯದ ಮಹಿಳೆ ಮತ್ತು ದಲಿತರಿಗೆ ಅವರು ಕೊಟ್ಟ ಸ್ವಾತಂತ್ರ್ಯ ಇಂದು ಬಹಳ ಅವಶ್ಯಕತೆ ಇದೆ. ವಚನಗಳು ಅವರು ತಮಗಾಗಿ ಬರೆದುಕೊಂಡರೂ ಅವುಗಳನ್ನು ಇಂದು ನಮ್ಮ ಕಾನೂನುಗಳಾಗಿ ಅಳವಡಿಸಿಕೊಂಡರೆ ಈ ಜಗತ್ತು ಬಹುತೇಕ ಸಮಸ್ಯೆಗಳಿಂದ ಮುಕ್ತವಾಗುತ್ತದೆ. ಎಂದು ಹಾವಶೆಟ್ಟಿ ಪಾಟೀಲ್ ಹೇಳಿದರು.
ಅವರು ನಗರದ ಶಿವನಗರದಲ್ಲಿರುವ ಬಸವೇಶ್ವರ ಸಿರಿಧಾನ್ಯ ಮಳಿಗೆ ಕೇಂದ್ರದಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಬೀದರ ತಾಲೂಕ ಘಟಕ ಆಯೋಜಿಸಿದ ಶಿವರಾತ್ರಿ ದೇಶಿಕ್ಕೇಂದ್ರ ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನದ ನಿಮಿತ್ಯ ಆಯೋಜಿಸಿದ ವಚನ ದಿನ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಸ್ತವಿಕ ಮಾತನಾಡಿದ ಕೆ. ಎಸ. ಚಳಕಾಪುರೆ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮೂಡಿಸಲು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಶ್ರಮ ಪಡುತ್ತದೆ ನಮ್ಮ ಹಿರಿಯರ ನೆನಪು ಸದಾ ನೆನಪಿಸಿಕೊಳ್ಳಲು ಇಚ್ಛೆಪಟ್ಟವರು ರೂಪಾಯಿ 25,000 ಪರಿಷತ್ತಿನಲ್ಲಿ ಠೇವಣಿ ಇಟ್ಟಲ್ಲಿ ಅದರ ಬಡ್ಡಿಯಿಂದ ಬರುವ ಹಣದಿಂದ ಪ್ರತಿ ವರ್ಷ ಅವರ ಹೆಸರಿನಲ್ಲಿ ಉಪನ್ಯಾಸಗಳನ್ನು ಕೈಗೊಂಡು ತಮ್ಮ ಹಿರಿಯರನ್ನು ನೆನಪಿಸಿಕೊಳ್ಳುವ ಮಹತ್ಕಾರ್ಯ ಮಾಡಬಹುದು ಎಂದು ತಿಳಿಸಿದರು.
ನೇತೃತ್ವ ವಹಿಸಿ ಮಾತನಾಡಿದ ಪೆÇ್ರ. ಲೀಲಾವತಿ ಚಕೋತೆಯವರು, ಸರೋಜಿನಿ ಗುಣವಂತರಾವ್ ಮಂಗಳೂರೇ ಹಾಗೂ ಮಹಾಲಿಂಗಪ್ಪ ಚಕೋತೆಯವರು ಇಂದು ದೈಹಿಕವಾಗಿ ಇಲ್ಲದಿದ್ದರೂ ಇರುವಾಗ ಅವರು ಮಾಡಿರುವ ಮಹತ್ಕಾರ್ಯಗಳನ್ನು ಇಂದು ನಾವು ನೆನಪಿಸಿಕೊಳ್ಳಲು ಮತ್ತು ಅವರ ಹೆಸರಿನ ಮೇಲೆ ಸಮಾಜ ಸೇವೆಯನ್ನು ಸಲ್ಲಿಸುವಂತೆ ಪುಣ್ಯದ ಕಾರ್ಯ ಅವರು ಮಾಡಿದ್ದಾರೆ ಅವರು ನಮಗೆ ಮಾದರಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪರಿಷತ್ತಿನ ಅಧ್ಯಕ್ಷರಾದ ಸಂಗಪ್ಪ ಹಿಪ್ಪಳಗಾವ ಅವರು ಶರಣರ ಕಾಯಕ ದಾಸೋಹ ತತ್ವ ನಮಗೆ ಜೀವನದಲ್ಲಿ ತೃಪ್ತಿ ತಂದುಕೊಟ್ಟಿದೆ ಅದಕ್ಕೆ ನಾವೇ ಉದಾಹರಣೆ ಎಂದು ಹೇಳಿದರು.
ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ ನಡೆಸಿಕೊಟ್ಟರೆ ಶೈಲಜಾ ಚಳಕಾಪುರಿ ಸ್ವಾಗತಿಸಿದರು ಕೊನೆಯಲ್ಲಿ ಮಲ್ಲಿಕಾರ್ಜುನ್ ಪಂಚಾಕ್ಷರಿ ವಂದಿಸಿದರು ಕಾರ್ಯಕ್ರಮವನ್ನು ಧನರಾಜ ಅಣಕಲೆ ಅಚ್ಚುಕಟ್ಟಾಗಿ ನಿರೂಪಿಸಿದರು.