ಧರ್ಮದ ತಳಹದಿಯಲ್ಲಿ ಬದುಕು ಸಾಗಿಸಿ-ಮುಪ್ಪಿನ ಬಸವಲಿಂಗಸ್ವಾಮೀಜಿ
ಸಂಜೆವಾಣಿ ವಾರ್ತೆ
ಯಲಬುರ್ಗಾ:ಸೆ.1- ಜಗತ್ತಿನ ಜೀವರಾಶಿಗಳಲ್ಲಿ ಮನುಷ್ಯಜೀವಿ ವಿಶಿಷ್ಟ ಮತ್ತು ವಿಭಿನ್ನವಾಗಿದ್ದು ಇಂದಿನ ಆಧುನಿಕ ಬದುಕಿನಲ್ಲಿ ಜೀವನದ ಕುರಿತು ಮನುಷ್ಯ ಜೀವಿಗಳಿಗೆ ಜಿಗುಪ್ಸೆ, ಹತಾಶೆ, ಕೀಳಿರಿಮೆ ಕಾಡುತ್ತಿದ್ದು ಇದಕ್ಕೆಲ್ಲಾ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾದರೆ ಮನುಷ್ಯ ಜೀವಿ ಧರ್ಮದ ತಳಹದಿಯಲ್ಲಿ ಬದುಕು ಸಾಗಿಸಬೇಕೆಂದು ಹಾಲಕೆರೆಯ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು. ಗ್ರಾಮಪಂಚಾಯತಿ ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣವರ ಮಾತನಾಡಿ, ಬಂಡಿಹಾಳ ಗ್ರಾಮದಲ್ಲಿ ದಶಕಗಳಿಂದ ಶರಣಬಸವೇಶ್ವರ ಪುರಾಣೋತ್ಸವ ಕಾರ್ಯಕ್ರಮ ಗ್ರಾಮದ ಹಿರಿಯರು ಮಾಡಿಕೊಂಡು ಬಂದಿದ್ದು ಬಹುಶಃ ಮುಂದಿನ ದಿನಮಾನಗಳಲ್ಲಿ ಇಂದಿನ ಯುವಪೀಳಿಗೆ ಶರಣಬಸವೇಶ್ವರರು ಮಾಡಿದ ಪುಣ್ಯದ ಕೆಲಸಗಳನ್ನು ಅರ್ಥ ಮಾಡಿಕೊಂಡು ಜೀವನವನ್ನು ನಡೆಸಬೇಕು. ಮತ್ತು ವಿಶೇಷವಾಗಿ ಜಗತ್ತಿನಲ್ಲಿ ಲಿಂಗಾಯತ ಧರ್ಮ ತನ್ನದೇ ಆದ ಇತಿಹಾಸ ಹೊಂದಿದ್ದು, ಹೀಗಾಗಿ ಶರಣ ತತ್ವ ಅಳವಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಮುಪ್ಪಿನ ಬಸವಲಿಂಗಸ್ವಾಮಿಗಳು ಗ್ರಾಮಪಂಚಾಯತಿ ಅಧ್ಯಕ್ಷ ಕಲ್ಲಿನಾಥ ಲಿಂಗಣ್ಣವರ ಸ್ವ-ಗೃಹದಲ್ಲಿ ಪಾದಪೂಜೆ ನೆರವೇರಿಸಿಕೊಂಡರು. ಬಸಪ್ಪ ಸಂಗಣ್ಣವರ, ಅಂದಪ್ಪ ನಿಡಗುಂದಿ, ಬಸವರಾಜ ಕಳಸಪ್ಪನವರ, ಬಸವರಾಜ ಪಟ್ಟೇದ, ಮಂಜುನಾಥ ತೋಟದ, ರಾಮನಗೌಡ, ಮುತ್ತಪ್ಪ ಮಾರನಬಸರಿ, ವೀರಣ್ಣ ಕಲ್ಲೂರು, ವಿರೂಪಾಕ್ಷಪ್ಪ ಸಿರಿಗೆರಿ, ಬಸಣ್ಣೆಪ್ಪ ದಿಂಡೂರು, ಬಸವರಾಜ ಬೂದಿಹಾಳ, ಮಹೇಶ್ವರಿ ಲಿಂಗಣ್ಣವರ, ಬಸಮ್ಮ ಶ್ರೀಗಿರಿ, ಗಿರಿಜಮ್ಮ ಸಂಗಣ್ಣವರ, ನೀಲಮ್ಮ ಪೊಲೀಸಪಾಟೀಲ, ನಾಗರತ್ನ ಲಿಂಗಣ್ಣವರ, ಲಲಿತಾ ನಿಡಗುಂದಿ, ಅನ್ನಪೂರ್ಣ ಮಳೇಗೌಡರ ಉಪಸ್ಥಿತರಿದ್ದರು.
One attachment • Scanned by Gmail