ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ಮಕ್ಕಳಿಂದ ವಿವಿಧ ಆಟೋಟ ಸ್ಪರ್ಧೇ
ಸಂಜೆವಾಣಿ ವಾರ್ತೆ
ಕೊಪ್ಪಳ, ಸೆ.01: ಶಿಕ್ಷಕರ ದಿನಾಚರಣೆಯ ಅಂಗವಾಗಿ ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಶಿಕ್ಷಕರಿಗೆ ಮಕ್ಕಳು ವಿವಿಧ ಆಟೋಟ ಸ್ಪರ್ಧೇಗಳನ್ನು ಆಯೋಜನೆ ಮಾಡಿದ್ದರು.
ಕುರ್ಚಿ ಆಟ,ಗುಂಡು ಎಸೆತ,ಥ್ರೋ ಬಾಲ್,ಹಗ್ಗ-ಜಗ್ಗಾಟ ಸೇರಿದಂತೆ ವಿವಿಧ ಆಟಗಳನ್ನು ಮಕ್ಕಳು ಶಿಕ್ಷಕರಿಗೆ ಏರ್ಪಡಿಸಿದ್ದರು.
ಕ್ರೀಡಾಕೂಟದಲ್ಲಿ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಮ ಹುಸೇನ,ಶಿಕ್ಷಕರಾದ ಆಭೀದ ಹುಸೇನ ಅತ್ತಾರ,ವಿರುಪಾಕ್ಷಪ್ಪ ಬಾಗೋಡಿ,ನಾಗಪ್ಪ ನರಿ,ಮಲ್ಲಿಕಾರ್ಜುನ ಹ್ಯಾಟಿ,ಶೀಲಾ ಬಂಡಿ,ಜಯಶ್ರೀ ದೇಸಾಯಿ,ಭಾರತಿ ಆಡೂರ,ಗೌಸೀಯಾಬೇಗಂ,ಶ್ರೀದೇವಿ ಕುಲಕರ್ಣಿ,ನಾಸೀರ ಹುಸೇನ,ಅಜು ಮುಂತಾದವರು ಭಾಗಿಯಾಗಿದ್ದರು.
ಆಟೋಟ ಸ್ಪರ್ಧೇಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಮಕ್ಕಳೇ ತಮ್ಮ ಸ್ವಂತ ಹಣದಿಂದ ಬಹುಮಾನ ವಿತರಣೆ ಮಾಡುವರು.
ಪೋಟೊ: ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಕ್ಕಳು ಶಿಕ್ಷಕರಿಗೆ ಹಗ್ಗ-ಜಗ್ಗಾಟ ಸೇರಿದಂತೆ ವಿವಿಧ ಆಟವಾಡಸಿದರು.