ರಾಷ್ಟ್ರೀಯ ನೇತ್ರದಾನ ಪಾಕ್ಷಿಕಕಾರ್ಯಕ್ರಮಕ್ಕೆ ಚಾಲನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.01- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾಆರೋಗ್ಯಕುಟುಂಬ ಕಲ್ಯಾಣಇಲಾಖೆಯ ಸಹಯೋಗದಲ್ಲಿಇತ್ತೀಚೆಗೆ 39ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಗರದಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಸೆಪ್ಟೆಂಬರ್ 8ರವರೆಗೆ ನಡೆಸಲಾಗುವರಾಷ್ಟ್ರೀಯ ನೇತ್ರದಾನ ಪಾಕ್ಷಿಕಕಾರ್ಯಕ್ರಮವನ್ನು ಸಂಸ್ಥೆಯಡೀನ್ ಮತ್ತು ನಿರ್ದೇಶಕಡಾ. ಮಂಜುನಾಥ್ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದಡಾ. ಮಂಜುನಾಥ್‍ಅವರು ವೈದ್ಯಕೀಯಕಾಲೇಜಿನಲ್ಲಿ ನೇತ್ರ ಸಂಗ್ರಹಣೆಗೆ ಈಗಾಗಲೇ ನೊಂದಣಿ ಮಾಡಿಸಲಾಗಿದ್ದು, ಶೀಘ್ರದಲ್ಲೇ ಇದಕ್ಕೆ ಬೇಕಾಗಿರುವ ಉಪಕರಣಗಳನ್ನು ಖರೀದಿಸಿ ನೇತ್ರ ಸಂಗ್ರಹಣೆಯನ್ನು ಪ್ರಾರಂಭಿಸಲಾಗುವುದುಎಂದರು.
ಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಡಾ. ಚಿದಂಬರಅವರು ಮಾತನಾಡಿಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ನೇತ್ರದಾನಕ್ಕೆ ನೋಂದಣಿ ಮಾಡುತ್ತಿದ್ದು, ಇದುಕುಟುಂಬದ ಸಾಂಪ್ರದಾಯವಾದಲ್ಲಿಕಾರ್ನಿಯಾಅಂಧರಿಗೂ ಸಹ ದೃಷ್ಠಿ ನೀಡಬಹುದಾಗಿದೆ. ಮನುಷ್ಯ ಸತ್ತ ನಂತರಅವರ ನೇತ್ರಗಳನ್ನು ದಾನ ಮಾಡಿದರೆ ನೇತ್ರಗಳು ಸದಾಜೀವಂತವಾಗಿರಲಿದೆಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವೈದ್ಯಕೀಯಕಾಲೇಜಿನ ನೇತ್ರವಿಭಾಗದ ಮುಖ್ಯಸ್ಥರು, ಸ್ನಾತಕೋತ್ತರ ವಿದ್ಯಾರ್ಥಿಗಳು ಪಿ.ಪಿ.ಟಿ ಮೂಲಕ ನೇತ್ರದಾನ, ನೇತ್ರದಾನದ ಮಹತ್ವ, ನೇತ್ರದಾನವನ್ನು ಸಂಗ್ರಹಿಸುವ ವಿಧಾನ, ನೇತ್ರದಾನದ ಬಗ್ಗೆ ಇರುವ ತಪ್ಪುನಂಬಿಕೆಗಳ ಬಗ್ಗೆ ತಿಳಿಸಿದರು.
ಜಿಲ್ಲಾ ಸರ್ಜನ್‍ಡಾ. ಕೃಷ್ಣಪ್ರಸಾದ್, ಸ್ಥಾನಿಕ ವೈದ್ಯಾಧಿಕಾರಿಡಾ. ಮಹೇಶ್, ಡಾ. ಚಂದ್ರಶೇಖರ್, ಡಾ. ಮಹೇಶ್ವರ್, ಡಾ. ಬಾಲಸುಬ್ರಮಣ್ಯ, ಡಾ. ಗಿರೀಶ್ ಪಾಟೀಲ್‍ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.