ಮಹೇಶ್ ಚಂದ್ರ ಗುರು ಅವರು ವೈಚಾರಿಕ ಪ್ರಜ್ಞೆಯ ಮಿಂಚಿನಂತಿದ್ದರು: ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ
ಸಂಜೆವಾಣಿ ನ್ಯೂಸ್
ಮೈಸೂರು.ಸೆ.01:- ಇತ್ತೀಚೆಗೆ ನಿಧನರಾದ ಪೆÇ್ರ.ಬಿ.ಪಿ. ಮಹೇಶಚಂದ್ರ ಗುರು ಅವರು ವೈಚಾರಿಕ ಪ್ರಜ್ಞೆಯ ಮಿಂಚು ಎಂದು ಗಾಂಧಿನಗರ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಬಣ್ಣಿಸಿದರು.
ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ, ಕನ್ನಡ ಸಾಹಿತ್ಯ ಕಲಾ ಕೂಟ ಸಂಯುಕ್ತ ಆಶ್ರಯದಲ್ಲಿ ಶನಿವಾರ ಆಯೋಜಿಸದ್ದ ಪೆÇ್ರ.ಬಿ.ಪಿ. ಮಹೇಶಚಂದ್ರ ಗುರು ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಜಾತಿ ಧರ್ಮ ರಹಿತವಾಗಿ ಕರ್ನಾಟಕದ ವೈಚಾರಿಕ ಮಿಂಚು ಇವರಾಗಿದ್ದರು. ಹೋರಾಟಗಾರರಿಗೆ, ದಮನಿತರ ಪರವಾಗಿ ಇರುವವರಿಗೆ ಸಾವು ಇಲ್ಲ. ಹಾಗಾಗಿ ಇವರು ಸದಾ ದಮನಿತರ ಧ್ವನಿಯಾಗುತ್ತಾ ಹೋರಾಟವನ್ನು ಮೈಗೂಡಿಸಿಕೊಂಡಿದ್ದು ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕಿದೆ ಎಂದರು.
ಹಿರಿಯ ಸಾಹಿತಿ ಪೆÇ್ರ.ಕೆ.ಎಸ್. ಭಗವಾನ್ ಮಾತನಾಡಿ, ನಮ್ಮ ನಡುವೆ ಇದ್ದ ದೊಡ್ಡ ಹೋರಾಟಗಾರ ಮಹೇಶಚಂದ್ರಗುರು. ಅಸಮಾನತೆ, ತಾರತಮ್ಯ ಧಿಕ್ಕರಿಸಿ ಹೋರಾಟ ವಾಡಿದ್ದಾರೆ. ಎಲ್ಲರಿಗೂ ಮಾದರಿಯಾಗಿದ್ದ ಅಪರೂಪದ ಅಧ್ಯಾಪಕರು ಎಂದರು.
ಪ್ರಸ್ತುತ ಸವಾಜದ ಸಮಸ್ಯೆಗಳನ್ನು ಪ್ರಶ್ನಿಸಿ ಸ್ಪಂದಿಸುತ್ತಿದ್ದರು. ಅವರನ್ನು ಕಳೆದುಕೊಂಡು ಸವಾಜಕ್ಕೆ, ವಿದ್ಯಾರ್ಥಿ ಬಳಗಕ್ಕೆ ನಷ್ಟ ಸಂಭವಿಸಿದೆ. ಅವರ ಬರಹ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತರಬೇಕು. ಅವರ ನೆನಪು ನಿರಂತರವಾಗಿರಬೇಕು. ಸಮಾಜ ಎಚ್ಚರಿಸುವ ಕೆಲಸ ವಾಡಬೇಕು. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ. ಗುರು ಅವರು ದೈಹಿಕವಾಗಿ ಇಲ್ಲದಿರಬಹುದು. ಆದರೆ ಅವರ ವಿಚಾರ ಚಿಂತನೆ ನಿರಂತರ ಎಂದರು.
ಮಾಜಿ ಮೇಯರ್ ಪುರುಷೊತ್ತಮ್ ಮಾತನಾಡಿ, ಶೋಷಿತರು, ದಮನಿತರು, ಹಿಂದುಳಿದವರಿಗೆ ಅನ್ಯಾಯವಾದಾಗ ಅವರ ಧ್ವನಿಯಾಗಿ ಗುರು ಅವರು ಕೆಲಸ ಮಾಡಿದ್ದಾರೆ. ಅವರ ಹೋರಾಟ, ಮಾತು, ದಕ್ಷತೆ, ಗಟ್ಟಿತನ ಎಲ್ಲವೂ ಸಂಚಲನ ಮೂಡಿಸಿದೆ. ಎಂದು ಕೂಡ ಭಯದ ಮನಸ್ಥಿತಿಯಲ್ಲಿ ಬದುಕಲಿಲ್ಲ. ನೇರಾನೇರವಾಗಿ ಅಳುವ ಸರ್ಕಾರ, ಜನಪ್ರತಿನಿಧಿ ಟೀಕಿಸಿದ್ದಾರೆ ಎಂದರು.
ಅವರ ಚಿಂತನೆ ಎಂದಿಗೂ ಪ್ರಸ್ತುತ. ಅವರು ತೋರಿಸಿದ ಮಾರ್ಗದಲ್ಲಿ ಎಲ್ಲರೂ ಸಾಗಬೇಕು. ಅವರ ಹೋರಾಟದ ಚಿಲುಮೆ ಗಟ್ಟಿಗೊಳಿಸಿದೆ. ಸಮಾಜದ ಅನಿಷ್ಟ ಪದ್ಧತಿ ಎದುರಿಸಲು ಜಾಗೃತಿ ಮೂಡಿಸಿದ್ದಾರೆ. ಅವರ ಆಶಯ ಸದಾ ಹಸಿರಾಗಿಸಬೇಕು. ದಿಟ್ಟತನ ಮೈಗೂಡಿಸಿಕೊಂಡು ಸಮಾಜ ಕಟ್ಟುವ ಕೆಲಸ ವಾಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಮಹೇಶ್ ಚಂದ್ರಗುರು ಅವರು ಎಡಪಂಥೀಯ ವಾದವನ್ನು ಪ್ರತಿಪಾದಿಸುತ್ತಿದ್ದರು ದಲಿತ ಚಳವಳಿ, ರೈತ ಚಳವಳಿ, ಬಂಡಾಯ ಸಾಹಿತ್ಯ ಚಳವಳಿ ಮೊದಲಾದ ಪ್ರಗತಿಪರ ಚಳವಳಿಗಳಲ್ಲಿಯೂ ಸಕ್ರಿವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ಹೋರಾಟದಲ್ಲಿ ರಾಜಶೇಖರ ಕೋಟಿ ಅವರ ಒಡನಾಟದಲ್ಲಿ ಇದ್ದರು. ವಿಶ್ವವಿದ್ಯಾನಿಲುಂದಲ್ಲಿದ್ದು ಕೂಡ ಹೋರಾಟಗಳಲ್ಲಿ ಭಾಗಿಯಾಗಿ ದಮನಿತರ ಪರವಾಗಿ ಇದ್ದರು.
ಸಾಮಾಜಿಕ ನ್ಯಾಯದ ವಿಚಾರ ಬಂದಾಗ ವಿ. ಶ್ರೀನಿವಾಸಪ್ರಸಾದ್ ಅವರನ್ನು ಕೂಡ ಟೀಕಿಸದೇ ಬಿಟ್ಟವರಲ್ಲ ಎಂದು ಅವರು ಸ್ಮರಿಸಿದರು. ಪೆÇ್ರ.ಗುರು ಯಾವತ್ತೂ ಅಧಿಕಾರ ಹಿಂದೆ ಹೋದವರಲ್ಲ. ಯಾರಾದರೂ ಕೇಳಿದರೂ ಬೇಡ ಎನ್ನುತ್ತಿದ್ದರು. ಪೆÇ್ರ.ಗುರು ಅವರು ನೆನಪಿನಲ್ಲಿ ವಿಶ್ವವಿದ್ಯಾಲಯ ಹಾಗೂ ಪತ್ರಿಕೋದ್ಯಮ ವಿಭಾಗ ಪ್ರಶಸ್ತಿಯೊಂದನ್ನು ಸ್ಥಾಪಿಸುವ ಬಗ್ಗೆ ಆಲೋಚಿಸಬೇಕು ಎಂದರು.
ಸಮಾಜ ಸೇವಕ ರಘುರಾಮ್ ವಾಜಪೇಯಿ, ಹಿರಿ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ರಂಗಕರ್ಮಿ ಎಚ್. ಜನಾರ್ಧನ್, ಕರ್ನಾಟಕ ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜು ಕಿರಣ್, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾ ನಿಲುಂದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ.ತೇಜಸ್ವಿ ನವಿಲೂರು, ಮುಕ್ತ ವಿವಿ ಪ್ರಾಧ್ಯಾಪಕಿ ಡಾ.ಕವಿತಾ ರೈ ಸೇರಿದಂತೆ ಹಲವಾರು ಮಂದಿ ಮಾತನಾಡಿದರು. ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ ಚಂದ್ರಶೇಖರ್ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಎಚ್.ಎಸ್. ಪ್ರಕಾಶ್, ಸಿಂಡಿಕೇಟ್ ಸದಸ್ಯ ಡಾ.ನಟರಾಜ್ ಶಿವಣ್ಣ, ಉಪ್ಪಾರ ಸಂಘದ ಅಧ್ಯಕ್ಷ ಯೋಗೆಶ್ ಉಪ್ಪಾರ, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ರವಿನಂದನ್, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಜಿ. ಪ್ರಕಾಶ್, ಕ.ರಾ. ಗೋಪಾಲಕೃಷ್ಣ, ಚಂದ್ರು ಮಂಡ್ಯ, ಗುರುರಾಜ ಬೇಡಿಕರ್, ಸಂಶೋಧಕ ವಿದ್ಯಾರ್ಥಿಗಳಾದ ಸಂಜಯ್, ಅಭಿಷೇಕ್ ಪಾಳ್ಯಗಾರ್, ಯಶವಂತ್ ಕುಮಾರ್ , ಶಿವಮೂರ್ತಿ, ಸಚಿನ್, ಚೇತನ್, ಬಸವರಾಜ್ , ಸುಶ್ಮಿತಾ, ದಿಲೀಪ್ ನರಸಯ್ಯ, ಗೌತಮ್ ದೇವನೂರು ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.