ಬಿಆರ್‍ಟಿ ಹುಲಿ ಸಂರಕ್ಷಿತ ವಲಯದಲ್ಲಿ ಮೂರು ಆನೆಗಳ ಅಸ್ತಿಪಂಜರ ಪತ್ತೆ
ಸಂಜೆವಾಣಿ ವಾರ್ತೆ
ಹನೂರು ಸೆ 1 :- ತಾಲೂಕಿನ ಬಿ ಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಾಲ್ಕು ದಿನಗಳ ಅಂತರದಲ್ಲಿ ಮೂರು ಆನೆಗಳ ಅಸ್ತಿಪಂಜರಗಳು ತಡವಾಗಿ ಕಾಣಿಸಿ ಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬಿ.ಆರ್.ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಪ್ರತಿದಿನ ಕಳ್ಳ ಬೇಟೆ ಶಿಬಿರ, ಬೀಟ್ ಸಿಬ್ಬಂದಿಗಳು ಪ್ರತಿದಿನ ಗಸ್ತು ತಿರುಗುತ್ತಿದ್ದರು ಪ್ರಾಣಿಗಳು ಸಾಯುತ್ತಿರುವುದು ಅರಣ್ಯ ಇಲಾಖೆಗೆ ಏಕೆ ತಿಳಿಯುತ್ತಿಲ್ಲ ಎಂದು ಸರ್ವಾಜನಿಕ ವಲಯದಲ್ಲಿ ಚರ್ಚಿಗೆ ಗ್ರಾಸವಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯ ಆಳದ ಕೆರೆ ಅರಣ್ಯ ಪ್ರದೇಶದಲ್ಲಿ ಎಂಟು ತಿಂಗಳ ಹಿಂದೆ ಸ್ವಾಭಾವಿಕವಾಗಿ ಗಂಡಾನೆ ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಎಂಟು ತಿಂಗಳ ಹಿಂದೆ ಆನೆ ಮೃತಪಟ್ಟಿರುವುದು ತಕ್ಷಣ ಬೆಳಕಿಗೆ ಬಂದಿಲ್ಲವಾದರೆ ಗಸ್ತು ಸಿಬ್ಬಂದಿಗಳು ಅರಣ್ಯದಲ್ಲಿ ಯಾವ ರೀತಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಏನು ಮಾಡುತ್ತಿದ್ದಾರೆ? ಗಸ್ತು ತಿರುಗುತ್ತಿದ್ದಾರೋ ಅಥವಾ ಕೇವಲ ಸಂಬಳ ಪಡೆದುಕೊಂಡು ಕೆಲಸಕ್ಕೆ ಹೋಗದೆ ಕಾಲಹರಣ ಮಾಡುತ್ತಿದ್ದಾರೆಯೋ ಎಂಬ ಅನುಮಾನ ಕಾಡುತ್ತಿದೆ.
ಆಗಸ್ಟ್ 26 ರಂದು ಬಿ ಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಯಳಂದೂರು ವನ್ಯಜೀವಿ ವಲಯ ಪುರಾಣಿ ಶಾಖೆ ಬೇತಾಳ ಕಟ್ಟೆ ಗಸ್ತಿನಲ್ಲಿ ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ಆಳಶೆಟ್ಟಿಕಟ್ಟೆ ಮೂಲೆ ಎಂಬ ಅರಣ್ಯ ಪ್ರದೇಶದಲ್ಲಿ ಗಂಡಾನೆಯು ಮೃತಪಟ್ಟಿತ್ತು.
ಇದೇ ರೀತಿ ಆಗಸ್ಟ್ 30 ರಂದು ಬಿ ಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಬೈಲೂರು ವ್ಯಾಪ್ತಿಯಲ್ಲಿ ಮತ್ತೊಂದು ಆನೆ ಶವ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಬೈಲೂರು ವನ್ಯ ಜೀವಿ ವಲಯ ಪಿ ಜಿ ಪಾಳ್ಯ ಮಾವತ್ತೂರು ಬಿ ಗಸ್ತಿನಲ್ಲಿ ಸಿಬ್ಬಂದಿಗಳು ಗಸ್ತು ಮಾಡುವಾಗ ದೂಪದ ಮರದ ಹೊಡ್ಡು ಅರಣ್ಯ ಪ್ರದೇಶದಲ್ಲಿ ಮೃತ ಆನೆ ಪತ್ತೆಯಾಗಿದೆ. ಸುಮಾರು 55 ರಿಂದ 60 ವಯಸ್ಸಿನ ಹೆಣ್ಣಾನೆಯಾಗಿದ್ದು ಸುಮಾರು 25 ದಿನಗಳ ಹಿಂದೆ ಸ್ವಾಭಾವಿಕವಾಗಿ ಮೃತಪಟ್ಟಿರಬಹುದು ಎಂದು ದೃಢಪಡಿಸಿದ್ದಾರೆ.
ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಯಾವುದಾದರೂ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆಯೇ ಎಂಬ ಅನುಮಾನ ಕಾಡುತ್ತಿದೆ.
ಏಷ್ಯಾದ ಅತಿ ದೊಡ್ಡ ಅರಣ್ಯ ಪ್ರದೇಶ ಎಂಬ ಬಿರುದು ಪಡೆದಿರುವ ಬಿ ಆರ್ ಟಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳು ಮೃತಪಡುತ್ತಿರುವುದಕ್ಕೆ ವನ್ಯಜೀವಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಪ್ರದೇಶದ ರಸ್ತೆಯಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ಬಿದಿರಿನ ಪೆÇದೆಯಲ್ಲಿ ಆನೆ ಮೃತಪಟ್ಟಿರುವುದರಿಂದ ತಡವಾಗಿ ಗೊತ್ತಾಗಿದೆ. ನಮ್ಮ ಸಿಬ್ಬಂದಿಗಳು ಪ್ರತಿದಿನ ಗಸ್ತು ಮಾಡುತ್ತಾರೆ. ಆನೆಗಳು ಸ್ವಾಭಾವಿಕವಾಗಿ ಮೃತಪಟ್ಟಿದೆ.
ಕರ್ತವ್ಯ ಲೋಪ ಮಾಡಿರುವ ನೌಕರರು ಮತ್ತು ಅಧಿಕಾರಿಗಳ ವಿರುದ್ಧ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮವಹಿಸುವುದರಲ್ಲಿ ವಿಫಲರಾಗಿದ್ದಾರೆ ಎಂದು ಸಾವ9ಜನಿಕರು ಆರೋಪಿಸಿದ್ದಾರೆ.