ರೋಮಾಂಚನಗೊಳಿಸಿದ ಟ್ಯಾಕ್ಟರ್ ಜಗ್ಗುವ ಸ್ಫರ್ಧೆ
ಬಸವನಬಾಗೇವಾಡಿ:ಸೆ.೧: ಪಟ್ಟಣದ ಆರಾಧ್ಯ ದೈವ ಮೂಲನಂದೀಶ್ವರ(ಬಸವೇಶ್ವರ) ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಗೆಳೆಯರ ಬಳಗದಿಂದ ನಂದಿ ತರಕಾರಿ ಮಾರುಕಟ್ಟೆ ಆವರಣದಲ್ಲಿ ಹಮ್ಮಿಕೊಂಡ ೫೫ ಎಚ್‌ಪಿ ಟ್ರಾ ್ಯಕ್ಟರ್ ಜಗ್ಗುವ ಸ್ಫರ್ಧೆ ನೆರೆದಿದ್ದ ಜನರನ್ನ ರೋಮಾಂಚನಗೊಳಿಸಿತು.
ಪಟ್ಟಣದಲ್ಲಿ ಎರಡನೇ ಬಾರಿಗೆ ಹಮ್ಮಿಕೊಂಡ ಟ್ಯಾಕ್ಟರ್ ಜಗ್ಗಾಟ ಸ್ಪರ್ಧೆಯಲ್ಲಿ ಆಲಮೇಲ, ಇಂಡಿ, ಬಬಲೇಶ್ವರ, ಬುದ್ನಿ, ಕುಂಟೋಜಿ, ಜಮಖಂಡಿಯ ಹಿಪ್ಪರಗಿ ಸೇರಿದಂತೆ ವಿವಿಧ ಭಾಗಗಳಿಂದ ೩೦ಕ್ಕೂ ಅಧಿಕ ಟ್ಯಾಕ್ಟರ್‌ಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದವು.
ಪಟ್ಟಣ ಸೇರಿದಂತೆ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಜನರು ಸ್ಪರ್ಧೆಯನ್ನ ವಿಕ್ಷೀಸಲು ಆಗಮಿಸಿದ್ದು ನಂದಿ ತರಕಾರಿ ಮಾರುಕಟ್ಟೆ ಆವರಣದಲ್ಲಿ ಅಪಾರ ಜನಜಂಗುಳಿ ಕಂಡು ಬಂದಿತು, ಸ್ಫರ್ಧೆ ಆರಂಭವಾಗುತ್ತಿದ್ದAತೆ ಜನರ ಹರ್ಷೊದ್ದಾರ ಮುಗಿಲು ಮುಟ್ಟಿತು. ಸ್ಪರ್ಧೆ ಆರಂಭವಾಗುತ್ತಿದ್ದAತೆ ಜನರು ಸಿಳ್ಳಿ ಕೇಕೆ ಹಾಕಿ ಸ್ಫರ್ಧಾಳುಗಳನ್ನ ಹುರಿದುಂಬಿಸಿದರು. ಟ್ಯಾಕ್ಟರ್‌ಗಳ ಜಗ್ಗಾಟ ನೋಡುಗರಲ್ಲಿ ಬಾರಿ ಕುತೂಹಲ ಮೂಡಿಸಿದ್ದವು.
ಸ್ಫರ್ಧೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದAತೆ ಸುತ್ತಲು ಬ್ಯಾರಾಕೆಡ ವ್ಯವಸ್ಥೆ ಕಲ್ಪಿಸಲಾಗಿತ್ತು ಅಲ್ಲದೇ ಸೂಕ್ತ ಪೊಲೀಸ ಬಂದು ಬಸ್ತ ಕಲ್ಪಿಸಲಾಗಿತ್ತು, ಸ್ಫರ್ಧೆ ವಿಕ್ಷೀಸಲು ಆಗಮಿಸಿದ ಪ್ರೇಕ್ಷಕರನ್ನು ವೈವಸ್ಥಿತ ಸ್ಥಳದಲ್ಲಿ ಕುರಿಸುವಲ್ಲಿ ಪೊಲೀಸ ಸಿಬ್ಬಂದಿಗಳು ಹರಸಾಹಸ ಪಡುತ್ತಿರುವದು ಕಂಡು ಬಂದಿತು.
ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಶಿವಾನಂದ ಈರಕಾರ ಮುತ್ಯಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಸ್ಫರ್ಧೆ ಆಯೋಜಕರಾದ ಮಂಜು ಹಾರಿವಾಳ, ಮೀರಾಸಾ ಕೋರಬು, ಸುರೇಶ ಹಾರಿವಾಳ, ಪಿಂಟುಗೌಡ ಪಾಟೀಲ, ಸಂತೋಷ ಕೂಡಗಿ, ಬಸು ಚೌಧರಿ, ಗುರು ವಂದಾಲ, ಮಲ್ಲು ಡೋಣುರ, ಶ್ರೀಶೈಲ ಹೆಬ್ಬಾಳ, ಮಾಂತು ಮಾಲಗಾರ, ಜಗದೀಶ ನಿಕ್ಕಂ, ಮಹೇಶ ಹಾರಿವಾಳ, ಸಂಗಮೇಶ ಮೈಲೇಶ್ವರ, ಗುಂಡು ಪಡಶೆಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಅಶೋಕ ಹಾರಿವಾಳ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನ ನಿಭಾಯಿಸಿದರು.