ಸುತ್ತೂರು ಶ್ರೀಗಳಿಂದ ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟುಕೊಡುಗೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.01-ಜೆಎಸ್‍ಎಸ್ ಸಂಸ್ಥೆ ಮೂಲಕ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಅವರು, ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆಎಂದುತಾಲೂಕು ಪಂಚಾಯಿತಿ ಮಾಜಿಅಧ್ಯಕ್ಷ, ಜಿಲ್ಲಾಕಾಂಗ್ರೆಸ್‍ಉಪಾಧ್ಯಕ್ಷರೂಆದ ಬಿ.ಕೆ. ರವಿಕುಮಾರ್‍ಬಣ್ಣಿಸಿದ್ದಾರೆ.
ಅವರು, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಅವರ ವಧರ್ಂತಿ ಅಂಗವಾಗಿ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ನೇತ್ರದಾನಒಪ್ಪಂದ ಪತ್ರಕ್ಕೆ ಸಹಿ ಮಾಡಿದರು. ಈ ವೇಳೆ ಮಾತನಾಡಿ, ಜೆಎಸ್‍ಎಸ್ ಸಂಸ್ಥೆ ಮೂಲಕ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಅವರು, ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಆ ಮೂಲಕ ಲಕ್ಷಾಂತರ ಮಂದಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಸಾವಿರಾರುಜನಕ್ಕೆಉದ್ಯೋಗದೊರಕಿದೆ. ಇದಕ್ಕೆಲ್ಲಾ ಶ್ರೀಯವರ ದೂರದೃಷ್ಟಿ, ಉದಾರ ಮನಸ್ಸುಕಾರಣ. ಹಾಗಾಗಿ ಅವರ ವದರ್ಂತಿಯ ಅಂಗವಾಗಿ ನನಗೆ ನೇತ್ರದಾನ ಮಾಡಬೇಕೆನಿಸಿತು. ಆದ್ದರಿಂದ ನೇತ್ರದಾನಕ್ಕೆ ಮೈಸೂರಿನಜೆಎಸ್‍ಎಸ್‍ಆಸ್ಪತ್ರೆಯಲ್ಲಿ ನೋಂದಣಿ ಮಾಡಿಕೊಂಡಿದ್ದೇನೆಎಂದು ಬಿ.ಕೆ. ರವಿಕುಮಾರ್ ತಿಳಿಸಿದ್ದಾರೆ.
ನನ್ನಕಾಲಾನಂತರ ಕಣ್ಣುಗಳು ವ್ಯರ್ಥವಾಗುವ ಬದಲುಇಬ್ಬರುಅಂಧ ವ್ಯಕ್ತಿಗಳಿಗೆ ಬೆಳಕಾಗಲಿ ಎಂಬುದು ನನ್ನಆಶಯ. ಹೀಗಾಗಿ ನೇತ್ರದಾನಕ್ಕಾಗಿ ನೋಂದಣಿ ಮಾಡಿಕೊಂಡಿರುವುದಾಗಿಅವರು ತಿಳಿಸಿದ್ದಾರೆ. ಹಾಗೆಯೇಇತರರುಕೂಡತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರಿಗೆ ಬೆಳಕಾಗಬೇಕೆಂದು ಬಿ.ಕೆ. ರವಿಕುಮಾರ್‍ಕರೆ ನೀಡಿದರು.
ಸಮಾಜಮುಖಿ ವ್ಯಕ್ತಿತ್ವದ ಬಿ.ಕೆ. ರವಿಕುಮಾರ್, ತಮ್ಮಕಾಲಾನಂತರತಮ್ಮಎರಡು ಕಣ್ಣುಗಳನ್ನು ಮೈಸೂರಿನಜೆಎಸ್‍ಎಸ್‍ಆಸ್ಪತ್ರೆಗೆದಾನ ಮಾಡಲುಒಪ್ಪಿಗೆ ಸೂಚಿಸಿ, ನೋಂದಣಿ ಮಾಡಿಕೊಂಡಿದ್ದಾರೆ. ಅಲ್ಲದೇಆಸ್ಪತ್ರೆ ಅಧಿಕಾರಿಗಳಿಗೆ ನೋಂದಣಿ ಪತ್ರವನ್ನು ರವಾನಿಸಿದ್ದು, ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಶಾಂತಮಲ್ಲಪ್ಪ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಜೀವನ್‍ಅವರು ಪ್ರಮಾಣ ಪತ್ರವನ್ನು ನೀಡಿದ್ದಾರೆ.