ಬಸವ ಜನ್ಮ ಸ್ಥಳ ಇಂಗಳೇಶ್ವರ ಗ್ರಾಮಕ್ಕೆ ಬೆಲ್ದಾಳ ಶರಣರ ಭೇಟಿ ಸ್ಮಾರಕ ವೀಕ್ಷಣೆ
ಬಸವನಬಾಗೇವಾಡಿ:ಸೆ.೧:ವಿಶ್ವಗುರು ಬಸವಣ್ಣನವರ ಜನ್ಮಸ್ಥಳವಾದ ಇಂಗಳೇಶ್ವರ ಗ್ರಾಮಕ್ಕೆ ಬಸವ ಕಲ್ಯಾಣದ ಬಸವ ಮಹಾಮನೆ ಟ್ರಸ್ಟ ಅಧ್ಯಕ್ಷರಾದ ಡಾ|| ಪೂಜ್ಯ ಶ್ರೀ ಸಿದ್ದರಾಮ ಶರಣರು ಬೆಲ್ದಾಳ ಇವರು ಶುಕ್ರವಾರದಂದು ಆಗಮಿಸಿ ಬಸವ ಮಾತಾ ಮಾದಲಾಂಬಿಕೆ ಸ್ಮಾರಕ ಭವನಕ್ಕೆ ಬೇಟಿ ನೀಡಿ ಸ್ಮಾರಕ ವೀಕ್ಷಣೆ ಮಾಡಿದರು
ಇವರೊಂದಿಗೆ ಶರಣರಾದ ಬೀದರಿನ ಶಿವರಾಜ ಮಾಳಗಿ ಕೈಲಾಸ ರಡ್ಡಿ, ಕೊಪ್ಪಳದ ಗಾಳೆಪ್ಪ ಕಡೆಮನಿ ಆಗಮಿಸಿದ್ದರು ಈ ಸಂದರ್ಭದಲ್ಲಿ ಸ್ಮಾರಕದ ಕುರಿತು ರೈತ ಮುಖಂಡ ಹಾಗೂ ಬಸವ ವಂಶಜರಾದ ಅರವಿಂದ ಕುಲಕರ್ಣಿ ಇವರಿಂದ ಮಾಹಿತಿ ಪಡೆದುಕೊಂಡರು ಈ ಸಂದರ್ಭದಲ್ಲಿ ಬೆಲ್ದಾಳ ಶರಣರು ಮಾತನಾಡಿ ಬಸವಣ್ಣನವರು ಜನಿಸಿದ ಮನೆಯನ್ನು ಸರಕಾರ ವಶಪಡಿಸಿ ಕೊಂಡು ರಾಜ ವಂಶಸ್ಥರ ಮನೆತನದ ಕಲ್ಪನೆ ಇಟ್ಟುಕೊಂಡು ಹಿಂದಿನ ಐ.ಎ.ಎಸ್.ಅಧಿಕಾರಿಯಾಗಿದ್ದ ಡಾ|| ಎಸ್.ಎಮ್.ಜಾಮದಾರ ರವರು ಭವ್ಯ ಸ್ಮಾರಕ ನಿರ್ಮಿಸಿರುವುದು ಅದ್ಬುತ ಕಾರ್ಯವಾಗಿದೆ. ಈ ಸ್ಮಾರಕದಲ್ಲಿ ನಿರಂತರವಾಗಿ ಶರಣರ ಚಿಂತನೆಗಳು ವಚನ ಅಧ್ಯಯನಗಳು ಮುಂದುವರೆಸಿಕೊAಡು ಹೋಗುವಂತಾಗಬೇಕು ಹಾಗೂ ಗ್ರಾಮದ ಅಭಿವೃದ್ದಿಗೆ ಗ್ರಾಮಸ್ಥರು ಸಹಕಾರ ನೀಡಬೇಕೆಂದು ಸಲಹೆ ನೀಡಿದರು ಇದೆ ಸಂದರ್ಭದಲ್ಲಿ ಅರವಿಂದ ಕುಲಕರ್ಣಿಯವರು ಬೆಲ್ದಾಳ ಶರಣರಿಗೆ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಶ್ರೀಶೈಲ ಬಿ ತಾಳಿಕೋಟಿ, ಅಶೋಕ ಕುಲಕರ್ಣಿ, ಶ್ರೀಕಾಂತ ಕುಲಕರ್ಣಿ, ಶರಣಪ್ಪ ಶ್ಯಾಮಾಗೋಳ ಇದ್ದರು