ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಗದ್ದುಗೆ ಏರಲು ಕಾಂಗ್ರೆಸ್ ಕಸರತ್ತು
ಸಂಜೆವಾಣಿ ವಾರ್ತೆ
ಔರಾದ :ಸೆ.೧: ಇಲ್ಲಿನ ಪಟ್ಟಣದ ಪಟ್ಟಣ ಪಂಚಾಯ್ತಿಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸೆಪ್ಟೆಂಬರ್ ೬ನೇ ದಿನಾಂಕ ನಿಗದಿಗೊಳ್ಳುತ್ತಿದಂತೆ ಶತಾಯಗತಾಯ ಅಧ್ಯಕ್ಷ ಪಟ್ಟ ಏರಲು ಕಾಂಗ್ರೆಸ್ ಪಕ್ಷ ನಾನಾ ಕಸರತ್ತು ನಡೆಸಿದೆ.
ಒಟ್ಟು ೨೦ ಸದಸ್ಯರ ಬಲ ಹೊಂದಿದ ಪಟ್ಟಣ ಪಂಚಾಯಿತಿಯಲ್ಲಿ ೧೨ ಬಿಜೆಪಿ ಆರು ಕಾಂಗ್ರೆಸ್ ಎರಡು ಪಕ್ಷೇತರ ಅಭ್ಯರ್ಥಿಗಳು ಚುನಾಯಿತಗೊಂಡಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಎರಡೂ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಈ ಮುಂಚೆ ಕಾಂಗ್ರೆಸ್ ಪಕ್ಷದಿಂದ ಚುನಾಯಿತಗೊಂಡ ಮೂರು ಜನ ಸದಸ್ಯರು ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದ ಆರು ಜನರ ಪೈಕಿ ಇನ್ನುಳಿದ ಮೂರು ಜನ ಕಾಂಗ್ರೆಸ್ ಪಕ್ಷದಲ್ಲಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರು ಬಿಜೆಪಿ ಪಕ್ಷದಲ್ಲಿರುವ ಸದಸ್ಯರನ್ನು ಸೆಳೆಯಲು ತೆರೆಮರೆಕಸರತ್ತು ನಡೆಸಿದ್ದಾರೆ.
ಈಗಾಗಲೇ ಕೆಲ ಬಿಜೆಪಿ ಸದಸ್ಯರು ಕಾಂಗ್ರೆಸ್ ಪಕ್ಷದ ಮುಖಂಡರ ಸಂಪರ್ಕದಲ್ಲಿದ್ದಾರೆ ಎಂದು ಪಕ್ಷದ ಯುವ ಮುಖಂಡ ಸುಧಾಕರ ಕೊಳ್ಳುರ ತಿಳಿಸಿದ್ದಾರೆ.
ಮೊದಲನೇ ಅವಧಿಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ನಡೆಸಿದೆ, ಎರಡನೇ ಅವಧಿಯಲ್ಲಿ ಕೂಡ ಅಧಿಕಾರ ಪಡೆಯಲು ಬೇಕು ಅಂತ ಪಟ್ಟು ಹಿಡಿದಿದೆ ಸಂಖ್ಯಾ ಬಲ ಸ್ಥಳಿಯ ಶಾಸಕರಾದ ಪ್ರಭು ಚವ್ಹಾಣ ಬಿಜೆಪಿ ಪಕ್ಷಕ್ಕೆ ದೊಡ್ಡ ಬಲ ಇದೆ ಇಲ್ಲಿ ಅವರ ತೀರ್ಮಾನವೆ ಅಂತಿಮ ಎನ್ನುತ್ತಿದ್ದಾರೆ ಬಿಜೆಪಿ ಸದಸ್ಯರು, ಎಲ್ಲರ ಚಿತ್ತ ಈಗ ಇದೆ ೬ರಂದು ನಡೆಯುವ ಪಟ್ಟಣ ಪಂಚಾಯಿತಿ ಚುನಾವಣೆಯ ಮೇಲಿದೆ ಯಾರು ಪಟ್ಟ ಎರಬಹುದು ಎಂದು ಕಾದು ನೋಡಬೇಕಾಗಿದೆ.
ಪಕ್ಷಕ್ಕೆ ದ್ರೋಹ ಬಗೆದವರಿಗೆ ಚುನಾವಣೆಯಲ್ಲಿ ಉತ್ತರ
ಪಕ್ಷಕ್ಕೆ ದ್ರೋಹ ಬಗೆದು ಪಕ್ಷ ತೊರೆದು ಪಕ್ಷಕ್ಕೆ ದ್ರೋಹ ಬಗೆದವರ ವಿರುದ್ಧ ಕಾಂಗ್ರೆಸ್ ಪಕ್ಷ ತಕ್ಕ ಉತ್ತರ ನೀಡಲು ತಯಾರಿ ನಡೆಸಿದೆ. ಕೆಲ ಸದಸ್ಯರು ಕಾಂಗ್ರೆಸ್ ಚಿಹ್ನೆ ಮೇಲೆ ಗೆದ್ದು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಇಂತಹ ಸದಸ್ಯರ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ, ಇವರುಗಳಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ಎಲ್ಲಾ ರೀತಿ ತಯಾರಿ ಮಾಡಿಕೊಂಡು ಪಕ್ಷಕ್ಕೆ ದ್ರೋಹ ಬಗೆದವರನ್ನು ಈ ಚುನಾವಣೆಯಲ್ಲಿ ಉತ್ತರ ನೀಡಲು ತಯಾರಿ ನಡೆಸಿದೆ. ಸ್ಥಳೀಯ ಶಾಸಕ ಪ್ರಭು ಚವ್ಹಾಣ ಅವರ ಆಮಿಷ್ಯಕ್ಕೆ ಒಳಗಾಗದೆ ಮತ್ತು ಯಾವುದೇ ಒತ್ತಡಕ್ಕೆ ಮಣಿಯದೆ ಪಕ್ಷ ಸಿದ್ಧಾಂತವನ್ನು ಮುಂದುವರಿಸಿಕೊAಡು ಹೋಗುತ್ತಿರುವ ಸದಸ್ಯರಿಗೆ ಬಲ ತುಂಬುವ ಕೆಲಸ ಪಕ್ಷ ಮಾಡುತ್ತಿದೆ, ಎಂದು ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳುರ ತಿಳಿಸಿದ್ದಾರೆ.