ಸ್ವಚ್ಛತಾ ಕಾರ್ಯ ಕೈಗೊಂಡ ಪಟ್ಟಣ ಪಂಚಾಯಿತಿಸಂಜೆವಾಣಿ ವರದಿ ಫಲಶ್ರುತಿ
(ನಾಗರಾಜ ಕುಂಬಾರ)
ಕೊಲ್ಹಾರ:ಸೆ.೧: ಪಟ್ಟಣದ ಯುಕೆಪಿ ಕ್ರಾಸ್ ಮೂಲಕಹಾದು ಹೋಗಿರುವ ರಾಜ್ಯದ ಪ್ರಮುಖ ಹೆದ್ದಾರಿಯಾದ ಹುಬ್ಬಳ್ಳಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ೨೧೮ ರಲ್ಲಿ ಪ್ರತಿನಿತ್ಯ ರಸ್ತೆ ಬದಿಗಳಲ್ಲಿ ಖಾಲಿ ಇರುವ ಜಾಗಗಳು ಕಸ ಹಾಕುವ ತಾಣಗಳಾಗಿ ಮಾರ್ಪಟ್ಟಿವೆ. ಅಲ್ಲದೇ ಅನೇಕ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಿವೆ. ಕಸ ಹಾಕುವುದರಿಂದ ಅದು ಅಲ್ಲೆ? ಕೊಳೆತು ದುರ್ವಾಸನೆ ಉಂಟಾಗುತ್ತಿದೆ. ಇದರಿಂದ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತಿತ್ತು. ಅಲ್ಲದೇ ರಸ್ತೆ ಬದಿಯಲ್ಲೆ ಕಸ ತ್ಯಾಜ್ಯವೆಲ್ಲ ರಸ್ತೆಗೆ ಎಸೆಯುತ್ತಿರುವ ಕಾಟದಿಂದ ಬೇಸತ್ತು ಸಂಜೆವಾಣಿ ಪತ್ರಿಕೆಗೆ ಅಳಲು ತೋಡಿಕೊಂಡಿದ್ದರು.
ಹಸಿ ಕಸ, ಒಣ ಕಸ, ಪ್ಲಾಸ್ಟಿಕ್ ಸೇರಿದಂತೆ ವಿವಿಧ ರೀತಿಯ ಇಂತಹ ತ್ಯಾಜ್ಯ ತಂದು ಎಸೆಯುವುದರಿಂದ ಕಸದ ರಾಶಿಗಳು, ಕೊಳಚೆಯ ತಾಣವೂ ಆಗಿತ್ತು. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಡೆಂಗಿ, ಮಲೇರಿಯಾ, ಚಿಕುನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭಯದಲ್ಲೇ ಬದುಕುವಂತಾಗಿತು.
ಈ ದುಸ್ಥಿತಿಯ ಕುರಿತು ಶನಿವಾರ ಸಂಜೆವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ತಕ್ಷಣ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇಶ್ ಚಲವಾದಿ ಹಾಗೂ ಸಿಬ್ಬಂದಿಗಳು ಆಗಮಿಸಿ ಸ್ವಚ್ಛತಾ ಕಾರ್ಯ ಕೈಗೊಂಡರು
ಈ ಸಂದರ್ಭದಲ್ಲಿ ಸ್ಥಳೀಯ ಸಾರ್ವಜನಿಕರು ಸಂಜೆವಾಣಿ ಪತ್ರಿಕೆಗೆ ಧನ್ಯವಾದಗಳು ತಿಳಿಸಿದರು.