ರಾಘವೇಂದ್ರ ಖಾಸನೀಸರು ಕನ್ನಡ ಕಥಾ ಜಗತ್ತಿನ ಮೇರು ವ್ಯಕ್ತಿ
ಇಂಡಿ:ಸೆ.೧:ರಾಘವೇAದ್ರ ಖಾಸನೀಸರು ಕನ್ನಡ ಕಥಾ ಜಗತ್ತಿನಲ್ಲಿ ಕನ್ನಡ ಕಥನ ಮಾರ್ಗದ ಹೊಸಪರಂಪರೆಯನ್ನು ಹುಲುಸಾಗಿ ಬೆಳೆಸಿದವರು, ಅವರನ್ನು ಗುರುತಿಸವ ಕಾರ್ಯ ಅಷ್ಟಾಗಿ ನಡೆಯದಿರುವುದು ವಿಷಾಧನೀಯ ಎಂದು ಹಿರಿಯ ಕಾದಂಬರಿಕಾರ ಡಾ. ಬಾಳಾಸಾಹೇಬ ಲೋಕಾಪೂರ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಶನಿವಾರ ಹಮ್ಮಿಕೊಂಡಿದ್ದ ‘ಕನ್ನಡ ಕಥನ ಮಾರ್ಗ-ರಾಘವೇಂದ್ರ ಖಾಸನೀಸರ ಕತೆಗಳು’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂಡಿ ನೆಲವು ಮಧುರಚೆನ್ನರ, ಕಾಪಸೆ ರೇವಪ್ಪನವರ, ಪಿ.ಧೂಲಾಸಾಹೇಬರ, ಸಿಂಪಿಲಿAಗಣ್ಣನವರ ಹಲಸಂಗಿ ಗೆಳೆಯರ ಬಳಗದ ಕಾರ್ಯವನ್ನು ಈಗೀಗ ಸ್ಮರಿಸುತ್ತಿದ್ದೇವೆ, ಅಂತವರಲ್ಲಿ ಕತೆಗಾರ ರಾಘವೇಂದ್ರ ಖಾಸನೀಸರು ಹಾಗೂ ಶ್ರೀರಂಗರು ಸ್ಮರಣೆಯಲ್ಲಿ ಉಳಿಯದಿರುವುದು ಹಾಗೂ ಅವರ ಕತೆಗಳ ಕುರಿತು ಇಲ್ಲಿನವರಿಗೂ ತಿಳಿಯುವಲ್ಲಿ ಹಿಂದೆ ಉಳಿದ್ದಿದ್ದೇವೆ ಎಂದರು.
ವಿಮರ್ಶಕ ಮನು ಪತ್ತಾರ ರಾಘವೇಂದ್ರ ಖಾಸನೀಸರ ಕತೆಗಳು ಕುರಿತಾಗಿ ಉಪನ್ಯಾಸ ಮಂಡಿಸಿ ಹೊಸ ತಲೆಮಾರಿನ ಕತೆಗಾರರು ಖಾಸನೀರ ಕತೆಗಳ ಕುರಿತು ಓದಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.
ಕಸಾಪ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜು ಮಾತನಾಡಿ “ಇಂಡಿ ಪಟ್ಟಣದಲ್ಲಿ ಜನಿಸಿದ ರಾಘವೇಂದ್ರ ಖಾಸನೀಸರು ಅಲಕ್ಷಿತರಾಗಿದ್ದಾರೆ, ಅವರನ್ನು ಅವರ ಸಾಹಿತ್ಯವನ್ನು ಮುನ್ನೆಲೆಗೆ ತರುವ ಕಾರ್ಯವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಮಾಡಿದೆ ಎಂದರು.
ಪ್ರಾಚಾರ್ಯ ಡಾ. ರಮೇಶ ಆರ್.ಎಚ್. ಕಸಾಪ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿದರು. ವೇದಿಕೆಯಲ್ಲಿ ಶರಣು ಸಬರದ, ಡಿ.ಎನ್.ಅಕ್ಕಿ ಮತ್ತಿತರಿದ್ದರು.
ಇದೇ ಸಮಾರಂಭದಲ್ಲಿ ನೂತನವಾಗಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡ ಡಾ. ಎಸ್.ಜೆ.ಮಾಡ್ಯಾಳ ಅವರನ್ನು ಕಾಲೇಜು ಆಡಳಿತ ಮಂಡಳಿ ಪರವಾಗಿ ಹಾಗೂ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘದವತಿಯಿAದ ಸನ್ಮಾನಿಸಲಾಯಿತು.
ಡಾ. ರಮೇಶ ಕತ್ತಿ , ಕು.ಪೂಜಾ ಸಾರವಾಡ , ಕಾಶೀನಾಥ ಜಾಧವ ,ಕವೀಂದ್ರಕುಮಾರ ಚಾಬಕಸವಾರ ಮಾತನಾಡಿದರು.