ಬಿಜೆಪಿಗೆ ಮತ್ತೊಮ್ಮೆ ಅಧಿಕಾರಕ್ಕೆ ತನ್ನಿ
ಇಂಡಿ:ಸೆ.೧:ರಾಜ್ಯದಲ್ಲಿ ಗತ ವೈಭವವನ್ನು ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮತ್ತೊಮ್ಮೆ ಬಿಜೆಪಿ ಸರಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಶ್ರಮಿಸಬೇಕಾಗಿದೆ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಇಂಡಿ ಮತಕ್ಷೇತ್ರದ ನಗರ ಮಂಡಲ ಮತ್ತು ಗ್ರಾಮೀಣ ಮಂಡಲ ವತಿಯಿಂದ ಬಿಜೆಪಿ ಸದಸ್ಯತ್ವ ನೊಂದಣಿ ಕುರಿತು ಆಯೋಜಿಸಿದ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ವಿಶ್ವದಲ್ಲೇ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡು ಅತಿ ವೇಗವಾಗಿ ದೇಶದಲ್ಲಿ ಬೆಳೆಯುತ್ತಿದೆ. ಪ್ರತಿಯೊಬ್ಬರು ಸಮರ್ಪಣಾ ಭಾವದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.
ಜಿಲ್ಲಾ ಬಿಜೆಪಿ ರೈತ ಮೋರ್ಚಾ ಮಾಜಿ ಅಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ ಬಿಜೆಪಿ ಸದಸ್ಯತ್ವ ಅಭಿಯಾನ ಸೆ. ೨ ರಂದು ಆರಂಭಗೊAಡು ೧೭ ರ ವರೆಗೆ ನಡೆಯಲಿದ್ದು ೨ ರಂದು ದೇಶದ್ಯಾದಂತ ನಡೆಯುವ ಸದಸ್ಯತ್ವ ನೊಂದಣಿ ಕಾರ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಹಾಗೂ ರಾಷ್ಟಿçÃಯ ಅಧ್ಯಕ್ಷ ಜೆ.ಪಿ ನಡ್ಡಾ ಚಾಲನೆ ನೀಡಿದ್ದಾರೆ. ಬಿಜೆಪಿ ಪಕ್ಷವನ್ನು ಮತಷ್ಟು ಬಲ ಪಡಿಸುವ ಉದ್ದೇಶದಿಂದ ೫ ವರ್ಷಕ್ಕೊಮ್ಮೆ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ ಎಂದರು…
ಶಂಕರಗೌಡ ಪಾಟೀಲ ಮಾತನಾಡಿ ಪಕ್ಷದ ಬಲವರ್ಧನೆಗೆ ದುಡಿದ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಲಾಗುವದು. ಕ್ಷೇತ್ರ ವ್ಯಾಪ್ತಿಯಲ್ಲಿ ಬುತ್ ವ್ಯಾಪ್ತಿಯಲ್ಲಿ ಸದಸ್ಯತ್ವ ಮಾಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು ಎಂದರು.
ಶೀಲವAತ ಉಮರಾಣಿ ಮಾತನಾಡಿ ಪಕ್ಷ ಸಂಘಟನೆಗೆ ಒಂದು ಅವಕಾಶ ದೊರಕ್ಕಿದ್ದು ಜನ ಪ್ರತಿನಿಧಿಗಳು ಮುಖಂಡರು ಹಾಗೂ ಕಾರ್ಯಕರ್ತರು ಸದುಪಯೋಗ ಪಡಿಸಿಕೊಂಡು ಪಕ್ಷವನ್ನು ಬಲಗೊಳಿಸಬೇಕಿದೆ. ವಿಧಾನಸಭೆ ಕ್ಷೇತ್ರದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಸಕ್ರೀಯವಾಗಿ ಭಾಗವಹಿಸಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕು ಎಂದರು.
ಮಲ್ಲಿಕಾರ್ಜುನ ಜೋಗುರ, ದೇವೆಂದ್ರ ಕುಂಬಾರ, ಅನೀಲ ಜಮಾದಾರ, ಮಾತನಾಡಿದರು.
ವೇದಿಕೆಯಲ್ಲಿ ಹಣಮಂತಗೌಡ ಪಾಟೀಲ,ಸಿದ್ದಲಿಂಗ ಹಂಜಗಿ,ಮುತ್ತು ದೇಸಾಯಿ,ರಾಜಕುಮಾರ ಸಗಾಯಿ,ಎವಿ ವಗ್ಗೆ, ಮಹಾದೇವ ರಜಪೂತ ಮತ್ತಿತರಿದ್ದರು.